ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಪ್ರತಿದಿನವೂ ಒಳಹರಿವು ಹೆಚ್ಚುತ್ತಿದ್ದು, ಇಂದು ಮುಂಜಾನೆಯ ಮಾಹಿತಿಯಂತೆ 182.1 ಅಡಿಗಳಷ್ಟು ನೀರು ಸಂಗ್ರಹವಾಗಿದೆ.
186 ಅಡಿಗಳ ಗರಿಷ್ಠ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಇಂದಿಗೆ 182.1 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಪೂರ್ಣ ತುಂಬಲು ಇನ್ನು ಕೇವಲ 3.9 ಅಡಿಗಳಷ್ಟು ಮಾತ್ರ ನೀರು ಬೇಕಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 9715 ಕ್ಯೂಸೆಕ್ಸ್ ನೀರು ಒಳಹರಿವಿದೆ. ಒಟ್ಟು ನೀರಿನ ಸಾಮರ್ಥ್ಯ 71.535 ಟಿಎಂಸಿ ಆಗಿದ್ದು, ಇಂದಿನ ಒಟ್ಟು ಸಾಮರ್ಥ್ಯ 66.685 ಟಿಎಂಸಿ ಆಗಿದೆ.
Get In Touch With Us info@kalpa.news Whatsapp: 9481252093
Discussion about this post