ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪುತ್ರ ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್’ನ ಹಿರಿಯ ನಾಯಕರು ಸಿಡಿದೆದ್ದಿದ್ದು, ಸಿಡ್ಲ್ಯೂಸಿ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಇಂದು ನಡೆದ ಸಿಡ್ಲ್ಯೂಸಿ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಹಿರಿಯ ನಾಯಕರು ರಾಹುಲ್ ವಿರುದ್ದ ತೀವ್ರವಾಗಿ ಕಿಡಿಕಾರಿದ್ದಾರೆ.
ಪಕ್ಷದ ನಾಯಕತ್ವ ಬದಲಾಗಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಬರೆದ ಹಿರಿಯ ನಾಯಕರು ಬಿಜೆಪಿ ಜೊತೆಯಲ್ಲಿ ಸೇರಿ, ಕಮಲ ಪಕ್ಷದ ಪ್ರೇರಣೆಯಂತೆ ಪತ್ರ ಬರೆದಿದ್ದೀರಿ ಎಂದು ರಾಹುಲ್ ಕಿಡಿ ಕಾರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಿರುದ್ದ ಸಿಡಿದೆದ್ದ ಹಿರಿಯ ನಾಯಕರು, ಯಾವ ಆಧಾರದ ಮೇಲೆ ಈ ಆರೋಪ ಮಾಡಿದ್ದೀರಿ? 40-50 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇವೆ, ಎಂದಿಗೂ ಪಕ್ಷದ ನಿಷ್ಠೆ ತಪ್ಪಿಲ್ಲ. ಈ ಆರೋಪವನ್ನು ಸಾಬೀತು ಮಾಡಿ ಎಂದು ಕಿಡಿ ಕಾರಿದ್ದಾರೆ.
ಈ ಕುರಿತಂತೆ ಹಲವು ನಾಯಕರು ಟ್ವೀಟ್ ಮಾಡಿದ್ದರು. ಆದರೆ, ಸಭೆಯ ಆಂತರಿಕ ವಿಚಾರಗಳು ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ತೇಪೆ ಹಾಕಲು ಪಕ್ಷ ಮುಂದಾಗಿದೆ ಎಂಬ ಅನುಮಾನಗಳು ವ್ಯಕ್ತವಾಗಿದೆ.
ರಾಹುಲ್ ಬೆನ್ನಿಗೆ ನಿಂತ ರಾಹುಲ್
ಇನ್ನು, ರಾಹುಲ್ ಗಾಂಧಿ ವಿರುದ್ಧ ಹಿರಿಯರು ತಿರುಗಿಬಿದ್ದಿರುವ ವಿಚಾರಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ರಮ್ಯಾ ಈಗ ಹೇಳಿಕೆ ನೀಡಿ ತೇಪೆ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಅವರುಗಳು ಕೇವಲ ಪತ್ರವನ್ನು ಮಾತ್ರ ಮಾಧ್ಯಮಗಳಿಗೆ ಲೀಕ್ ಮಾಡಿದಲ್ಲಾ, ಸಭೆಯಲ್ಲಿ ಚರ್ಚೆಯಾಗುತ್ತಿರುವ ಕ್ಷಣ ಕ್ಷಣದ ವಿಚಾರವನ್ನೂ ಅವರು ಮಾಧ್ಯಮಗಳಿಗೆ ನೀಡುತ್ತಿರುವುದು ಅದ್ಭುತ ಎಂದಿದ್ದಾರೆ.
I think Rahul ji made a mistake. He should have said colluding with the BJP & the media. https://t.co/ZmtLe5YzPu
— Divya Spandana/Ramya (@divyaspandana) August 24, 2020
ಆನಂತರ ಮತ್ತೊಂದು ಟ್ವೀಟ್ ಮಾಡಿರುವ ಅವರು, ಪತ್ರ ಬರೆದ ನಾಯಕರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಬರೆದಿದ್ದಾರೆ ಎಂದು ರಾಹುಲ್ ಹೇಳಬಾರದಿತ್ತು. ಬದಲಾಗಿ ಬಿಜೆಪಿ ಹಾಗೂ ಮಾಧ್ಯಮ ಎರಡರೊಂದಿಗೂ ಸೇರಿಕೊಂಡು ಈ ಕೆಲಸ ಮಾಡಿದ್ದಾರೆ ಎಂದು ಹೇಳಬೇಕಿತ್ತು ಎಂದಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post