ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿಂದು 430 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೂ ಇಂದು ಅತಿ ಹೆಚ್ಚು ಪ್ರಕರಣ ದಾಖಲಾಗಿದೆ.
ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ನಾಲ್ವರು ಸಾವನ್ನಪ್ಪಿದ್ದರೆ, 143 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ನಿಮ್ಮ ಮುಖ ಕಾಂತಿಯುತವಾಗಬೇಕೆ? ಡಯಾಬಿಟಿಸ್ ನಿಯಂತ್ರಿಸಬೇಕೆ? ಇಲ್ಲಿದೆ ಸರಳ ಪರಿಹಾರ | Ayurveda Tips in Kannada
ಆರೋಗ್ಯ ಸಲಹೆ ಕುರಿತಾಗಿ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಇನ್ನು, ಈವರೆಗೂ 2892 ಕಂಟೈನ್ಮೆಂಟ್ ಝೋನ್’ಗಳನ್ನು ಮಾಡಲಾಗಿದ್ದು, ಡಿ ನೋಟಿಫೈಡ್ ಝೋನ್’ಗಳ ಸಂಖ್ಯೆ 996 ಆಗಿದೆ. ಇಂದು ಒಟ್ಟು 1105 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, 1216 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1692 ಆಗಿದೆ ಎಂದು ಬುಲೆಟಿನ್ ತಿಳಿಸಿದೆ.
ತಾಲೂಕುವಾರು ವಿವರ: ಶಿವಮೊಗ್ಗ: 176 ಭದ್ರಾವತಿ: 94 ಶಿಕಾರಿಪುರ: 86 ತೀರ್ಥಹಳ್ಳಿ: 17 ಸೊರಬ: 4 ಹೊಸನಗರ: 15 ಸಾಗರ: 24 ಇತರೆ ಜಿಲ್ಲೆ: 17
Get In Touch With Us info@kalpa.news Whatsapp: 9481252093

















