No Result
View All Result
Thums Up Brings Back ThunderWheels Campaign
English Articles

Thums Up Brings Back ThunderWheels Campaign

by kalpa News
July 23, 2026
0

Kalpa Media House  |  National | Thums Up, one of India’s leading homegrown beverage brands from Coca-Cola India, has announced...

Read moreDetails
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
  • Advertise With Us
  • Grievances
  • About Us
  • Contact Us
Thursday, July 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಇಲ್ಲಿ ಕುಡಿಯಲೇ ನೀರಿಲ್ಲ, ಸಾಂಬಾಗೆ ನೀರು ಬೇಕಂತೆ!

kalpa News by kalpa News
September 6, 2016
in Army
0
Share on FacebookShare on TwitterShare on WhatsApp
ಇದನ್ನು ರಾಜ್ಯದ ಪಾಲಿನ ದುರಂತ ಎನ್ನದೇ ಬೇರೆ ವಿಧಿಯಿಲ್ಲ. ನದಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜ್ಯಕ್ಕೆ ನೆರೆ ರಾಜ್ಯಗಳಿಂದ, ಕೇಂದ್ರ ಸರ್ಕಾರದಿಂದ ಹಾಗೂ ನ್ಯಾಯಾಲಯಗಳಿಂದ ಮೇಲಿಂದ ಮೇಲೆ ಅನ್ಯಾಯವಾಗುತ್ತಲೇ ಇವೆ.
ಮೊನ್ನೆ ಮೊನ್ನೆ ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಹದಾಯಿ ನ್ಯಾಯಾಧೀಕರಣದಿಂದ ರಾಜ್ಯಕ್ಕೆ ಅನ್ಯಾಯವಾದ ಬೆನ್ನಲ್ಲೇ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೊಮ್ಮೆ ಅನ್ಯಾಯವಾಗಿದೆ. ಈ ಕುರಿತಂತೆ ನಿನ್ನೆ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಪ್ರತಿದಿನ ೧೫ ಸಾವಿರ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡಬೇಕು ಎಂದು ಆದೇಶ ನೀಡಿದೆ. ಇಲ್ಲಿ, ಸುಪ್ರೀಂ ಆದೇಶ ನೀಡಿದ ನಂತರ ಅದರ ಪಾಲನೆ ಕರ್ತವ್ಯವಾಗುತ್ತದೆ ಎನ್ನುವುದು ಸತ್ಯ.
ಆದರೆ, ಕಾವೇರಿ ವಿಚಾರದಲ್ಲಿ ವಾಸ್ತವ ಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದು ಸುಪ್ರೀಂ ಆದೇಶದಿಂದ ಸಾಬೀತಾಗಿದೆ.
ಪ್ರಮುಖವಾಗಿ, ಕಾವೇರಿ ವಿಚಾರ ನದಿ ನೀರಿನ ವಿಚಾರ ಮಾತ್ರವಲ್ಲದೇ, ಭಾವನಾತ್ಮಕ ವಿಚಾರವಾಗಿ ಪರಿವರ್ತಿತವಾಗಿ ಬಹಳ ಕಾಲವೇ ಕಳೆದಿದೆ. ಹೀಗಾಗಿ, ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಬೆಣ್ಣೆಯಲ್ಲಿ ಕೂದಲು ತೆಗೆಯುವ ರೀತಿಯಲ್ಲಿ ಕೆಲಸ ಸಾಧಿಸಬೇಕು.
ಈ ಬಾರಿ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದ ಜಲಾಶಯಗಳು ಈಗಾಗಲೇ ಬಣಗುಡಲು ಆರಂಭಿಸಿವೆ. ಕಾವೇರಿ ಕೊಳ್ಳವೂ ಇದಕ್ಕೆ ಹೊರತಲ್ಲ. ಹೀಗಿರುವಾಗ, ಕಾವೇರಿ ಕೊಳ್ಳ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದೇ ಒಂದು ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಿದ್ದಾಗ್ಯೂ, ವಾಸ್ತವ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯದ ಪರ ವಾದ ಮಾಡಿರುವ ಹಿರಿಯ ವಕೀಲ ಫಾಲಿ ನಾರಿಮನ್ ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವುದು ಸತ್ಯ.
ಇಲ್ಲೊಂದು ಪ್ರಶ್ನೆ ಉದ್ಬವವಾಗುತ್ತದೆ. ರಾಜ್ಯದ ಹಿತ ಕಾಯುವ ಪ್ರಕರಣದಲ್ಲಿ ರಾಜ್ಯದ ಪರ ವಾದ ಮಾಡಲು ರಾಜ್ಯದವರೇ ಆದ ಯಾವುದೇ ಬುದ್ದಿವಂತ ವಕೀಲರಿಲ್ಲವೇ? ಕಾವೇರಿ ವಿಚಾರದಲ್ಲಿ ಕಳೆದ ೨೦ ವರ್ಷಗಳಿಂದ ವಾದ ಮಾಡುತ್ತಿರುವ ನಾರಿಮನ್, ಸರ್ಕಾರದಿಂದ ಕೋಟ್ಯಂತರ ರೂ. ಶುಲ್ಕ ತೆಗೆದುಕೊಂಡಿದ್ದು ಬಿಟ್ಟರೆ ರಾಜ್ಯದ ಪರವಾಗಿ ಯಾವ ಯಶಸ್ಸನ್ನು ತಂದುಕೊಟ್ಟಿದ್ದಾರೆ? ರಾಜ್ಯದ ಪರವಾಗಿ ವಾದ ಮಾಡಿ ಗೆಲ್ಲುವಲ್ಲಿ ನಾರಿಮನ್ ಪ್ರತಿಬಾರಿಯೂ ಸೋತಿದ್ದಾರೆ. ಹೀಗಿರುವಾಗ, ಇಂತಹ ವ್ಯಕ್ತಿಯ ಅನಿವಾರ್ಯತೆ ರಾಜ್ಯಕ್ಕೆ ಏನಿದೆ?
ರಾಜ್ಯದಲ್ಲಿ ಲಾಯರ್‌ಗಳಿಲ್ಲವೇ?
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ವತಃ ವಕೀಲರಾಗಿದ್ದವರು. ಇನ್ನು, ಕಾನೂನು ಮಂತ್ರಿ ಜಯಚಂದ್ರ ಕಾನೂನು ಬಲ್ಲವರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹ ವಕೀಲರು. ಇದಲ್ಲದೇ ರಾಜ್ಯದವರೇ ಆದ, ಹನುಮಂತರಾಯರು, ಮೋಹನ್ ಕಾತರಿಕಿ, ನಾಣಯ್ಯ ಅವರಂತಹ ಪ್ರಖಾಂಡ ಪಂಡಿತ ವಕೀಲರ ದಂಡು ರಾಜ್ಯದಲ್ಲಿದೆ. ಹೀಗಿರುವಾಗ, ರಾಜ್ಯದವರೇ ಅಲ್ಲದ ನಾರಿಮನ್‌ರನ್ನು ವಕೀಲರನ್ನಾಗಿ ಮುಂದುವರೆಸುವ ಅಗತ್ಯವೇನಿದೆ, ಅದೂ ೨೦ ವರ್ಷಗಳಲ್ಲಿ ಕಾವೇರಿ ವಿಚಾರದಲ್ಲಿ ಅವರ ಸಾಧನೆ ಶೂನ್ಯ ಎಂದಾದ ನಂತರವೂ.
ನಾರಿಮನ್ ಹಿರಿಯ ವಕೀಲರೇ ಆಗಿರಬಹುದು, ಕಾನೂನನ್ನು ಅರೆದು ಕುಡಿದಿರಬಹುದು. ಆದರೆ, ಅವರ ವಾದ ಹಾಗೂ ಪಾಂಡಿತ್ಯ ನಮ್ಮ ರಾಜ್ಯಕ್ಕೆ ಉಪಯೋಗವಾಗಲಿಲ್ಲ ಎಂದರೆ ಅಂತಹ ವ್ಯಕ್ತಿಯ ಅಗತ್ಯತೆ ರಾಜ್ಯಕ್ಕೆ ಇಲ್ಲ ಎನ್ನುವುದನ್ನು ರಾಜ್ಯ ಸರ್ಕಾರ ಇನ್ನಾದರೂ ಅರಿಯಬೇಕಿದೆ.
ಈ ಬಾರಿಯ ಮಳೆ ಕೊರತೆಯಿಂದಾಗಿ ಕೆಆರ್‌ಎಸ್‌ನಲ್ಲಿ ಈಗಿರುವ ನೀರಿನ ಪ್ರಮಾಣದಿಂದ  ಹಳೆ ಮೈಸೂರು ಭಾಗ ಸೇರಿದಂತೆ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವುದೇ ಒಂದು ಸವಾಲಿನ ಕಾರ್ಯವಾಗಿದೆ. ಜೊತೆಯಲ್ಲಿ ನಮ್ಮ ರಾಜ್ಯದ ರೈತರಿಗೆ ಮೊದಲನೆ ಬೆಳೆಗೆ ನೀರು ಕೊಡದೇ ಇರುವಾಗ, ತಮಿಳುನಾಡಿನ ಕುರುವೈ ಹಾಗೂ ಸಾಂಬಾ ಬೆಳೆಗಳಿಗೆ ನೀರು ಹರಿಸುವುದು ಎಂದರೆ ಅದು ನಿಜಕ್ಕೂ ಆಘಾತಕಾರಿಯೇ ಹೌದು. 
ನಾರಿಮನ್‌ಗೆ ಈಗ ವಯಸ್ಸಾಗಿಲ್ಲವೇ?
ಸಿದ್ಧರಾಮಯ್ಯ ಪ್ರತಿಪಕ್ಷದಲ್ಲಿದ್ದಾಗ ಕಾವೇರಿ ವಿಚಾರದಲ್ಲಿ ರಾಜ್ಯದ ಪರ ವಾದ ಮಂಡಿಸುವ ನಾರಿಮನ್ ವಿರುದ್ಧ ಹರಿಹಾಯ್ದಿದ್ದರು. ಈಗ ನಾರಿಮನ್ ಅವರೊಂದಿಗೆ ಗಳಸ್ಯ ಕಂಠಸ್ಯ ಆಗಿರುವುದು ಚರ್ಚಾರ್ಹ.
ಅಂದು ಸದನದಲ್ಲಿ ರೋಷಾವೇಶದಿಂದ ಕೂಗಾಡಿದ್ದ ಸಿದ್ಧರಾಮಯ್ಯ, ನಾರಿಮನ್‌ಗೆ ವಯಸ್ಸಾಗಿದೆ, ಅವರು ರಾಜ್ಯದ ಸಂಬಂಧ ಸಮರ್ಥ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ನಾರಿಮನ್‌ರನ್ನು ಬದಲಿಸಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಆದರೆ, ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ನಾರಿಮನ್  ಅವರಿಂದಾಗಿ ರಾಜ್ಯಕ್ಕೆ ಸೋಲು ಎರಗುತ್ತಿದ್ದರೂ ಅವರನ್ನು ಬದಲಿಸುವಲ್ಲಿ ಸಿದ್ಧರಾಮಯ್ಯ ಅಸಕ್ತಿ ತೋರದೇ ಇರುವುದು ಅವರ ಬದ್ಧತೆಯ ಬೂಟಾಟಿಕೆಯನ್ನು ತೋರಿಸುತ್ತದೆ.
ವಾದದಲ್ಲಿ ನಿಜ ನ್ಯಾಯದ ಕಣ್ಮರೆ
ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಹೊರಡಿಸಿರುವ ಆದೇಶದ ಪ್ರತಿಯನ್ನು ಗಮನಿಸಿದರೆ, ಕಾನೂನಾತ್ಮಕವಾಗಿ ನ್ಯಾಯ ಒದಗಿಸಲು ಪ್ರಯತ್ನಗಳು ನಡೆದಿವೆಯೇ ಹೊರತು, ರಾಜ್ಯದ ಹಿತ ಇದರಲ್ಲಿ ಕಾಣೆಯಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತದೆ.
ರಾಜ್ಯದಲ್ಲಿರುವ ಜಲಾಶಯಗಳ ನೀರು ಸಂಗ್ರಹ ಎಷ್ಟಿದೆ, ಅದರಲ್ಲಿ ಉಪಯುಕ್ತ, ಅನುಪಯುಕ್ತ ಎಂಬ ಕುರಿತಾಗಿ ಸರಿಯಾದ ಮಾಹಿತಿ ಒದಗಿಸಿದಂತೆ ಕಾಣುತ್ತಿಲ್ಲ. ಅಲ್ಲದೇ, ರಾಜ್ಯದಿಂದ ಈಗಾಗಲೇ ಹರಿಸಿರುವ ನೀರು ಎಷ್ಟು ಪ್ರಮಾಣದಲ್ಲಿ ಸಮುದ್ರದ ಪಾಲಾಗಿ ವ್ಯರ್ಥವಾಗಿದೆ ಎಂಬ ಪ್ರಮುಖ ಅಂಶವಿಲ್ಲ.
ಇದರೊಂದಿಗೆ, ಕಾವೇರಿ ನದಿ, ಉಪನದಿ ವ್ಯಾಪ್ತಿಯಲ್ಲಿ ಈ ಬಾರಿ ಎಷ್ಟು ಮಳೆಯಾಗಿದೆ, ವಾಡಿಕೆ ಮಳೆ, ಈ ಬಾರಿಯ ಮಳೆ ಪ್ರಮಾಣದ ದಾಖಲೆ ಒದಗಿಸಬೇಕಿತ್ತು. ಆದರೆ, ಸಮರ್ಥ ವಾದ ಮಂಡಿಸದ ಹಾಗೂ ವಾಸ್ತವ ಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಹಾಗೂ ಫಾಲಿ ನಾರಿಮನ್ ಎಡವಿದ್ದು, ರಾಜ್ಯದ ಹಿತವನ್ನು ಬಲಿ ನೀಡಿದ್ದಾರೆ.
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಚೀನಾಕ್ಕೆ ಥಂಡಿ, ಇಲ್ಲಿ ಮಾವೋವಾದಿಗಳಿಗೆ ಜ್ವರ!!

Next Post

ಬಂಡೆಗಪ್ಪಳಿಸಿದ ಮೀನುಗಾರಿಕಾ ಬೋಟ್ : 7 ಮಂದಿ ಪವಾಡಸೃದಶ ಪಾರು.

kalpa News

kalpa News

Next Post

ಬಂಡೆಗಪ್ಪಳಿಸಿದ ಮೀನುಗಾರಿಕಾ ಬೋಟ್ : 7 ಮಂದಿ ಪವಾಡಸೃದಶ ಪಾರು.

Leave a Reply Cancel reply

Your email address will not be published. Required fields are marked *

No Result
View All Result
Thums Up Brings Back ThunderWheels Campaign
English Articles

Thums Up Brings Back ThunderWheels Campaign

by kalpa News
July 23, 2026
0

Kalpa Media House  |  National | Thums Up, one of India’s leading homegrown beverage brands from Coca-Cola India, has announced...

Read moreDetails
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL