ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಹಿರಿಯ ಸಹಕಾರಿ, ಬ್ರಾಹ್ಮಣ ಸಮಾಜದ ಮುಖಂಡ ಎಚ್.ಕೆ. ಶೇಷಪ್ಪ ಇಂದು ಮಧ್ಯಾಹ್ನ ನಿಧನರಾದರು.
ಶೇಷಪ್ಪನವರು ರಾಜಕೀಯ, ಸಾಂಸ್ಕೃತಿಕ, ಸಹಕಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಶಿವಮೊಗ್ಗದಲ್ಲಿ ಅವರು ಹಲವು ಸಂಘ-ಸಂಸ್ಥೆಗಳಲ್ಲಿ ಅಪಾರ ಸೇವೆ ಸಲ್ಲಿಸಿ ಜನರ ಮನ್ನಣೆಗೆ ಪಾತ್ರರಾಗಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಶೇಷಪ್ಪನವರು, ಅವರು ಮಾಡಿದ ಸಮಾಜ ಸೇವೆಯನ್ನು ಗುರುತಿಸಿ ಅಂದಿನ ರಾಜ್ಯ ಸರ್ಕಾರ ಶಿವಮೊಗ್ಗ ಮಹಾ ನಗರ ಪಾಲಿಕೆಗೆ ಸದಸ್ಯರನ್ನಾಗಿ (ನಾಮಿನೇಟೆಡ್) ನೇಮಕ ಮಾಡಿತ್ತು.
ನಗರದ ಬಿ.ಬಿ. ರಸ್ತೆಯಲ್ಲಿರುವ ನೀರಿನ ಟ್ಯಾಂಕ್ ಬಳಿ ಸುಸಜ್ಜಿತವಾದ ಕುಡಿಯುವ ನೀರಿನ ಟ್ಯಾಂಕ್ ನ ವ್ಯವಸ್ಥೆಯನ್ನು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ್ದರು. ನೀರಿನ ಟ್ಯಾಂಕನ್ನು ಅಂದಿನ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಉದ್ಘಾಟಿಸಿ ಲೋಕಾರ್ಪಣೆ ಮಾಡಿದ್ದರು.
Sri Huccharaya Swamy Temple, Shikaripura | ಶ್ರೀ ಹುಚ್ಚರಾಯ ಸ್ವಾಮಿ ದೇವಾಲಯ, ಶಿಕಾರಿಪುರ
ದೇವಾಲಯ ಪರಿಚಯ ಕುರಿತಾಗಿ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ನಗರದ ಸರ್.ಎಂ. ವಿಶ್ವೇಶ್ವರಯ್ಯ ಸೊಸೈಟಿಯಲ್ಲಿ ನಿರ್ದೇಶಕರಾಗಿ, ಬ್ರಾಹ್ಮಣ ಸಮಾಜದ ಮುಖಂಡರಾಗಿ ಅವರು ಸೇವೆ ಸಲ್ಲಿಸಿದ್ದಾರೆ.
ಶೇಷಪ್ಪನವರು ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಶೇಷಪ್ಪನವರು ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಹಾಗೂ ಅಪಾರ ಪ್ರಮಾಣದ ಬಂಧು ಬಳಗವನ್ನು ಅಗಲಿದ್ದಾರೆ. ಶೇಷಪ್ಪನವರ ನಿಧನಕ್ಕೆ ನಗರದ ಹವ್ಯಾಸಿ ಬರಹಗಾರ ಎಚ್.ಸಿ. ಮುರುಳೀಧರ್ ಸಂತಾಪ ವ್ಯಕ್ತಪಡಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post