ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೋಂದಾ: ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಚಾತುರ್ಮಾಸ್ಯಾಂಗ ಭಿಕ್ಷಾ ಸೇವೆ, ಕುಂಕುಮಾರ್ಚನೆ ಹಾಗೂ ರುದ್ರಾಭಿಷೇಕ ಸೇವೆಗಳು ಇತ್ತೀಚಿಗೆ ನಡೆಯಿತು.
ಹವ್ಯಕ ಮಹಾಸಭೆಯು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಮಹಾಸಭೆಯು ಮಾಡುವ ಒಳ್ಳೆಯ ಕೆಲಸದ ಜೊತೆಗೆ ಸ್ವರ್ಣವಲ್ಲಿ ಮಠ ಸದಾ ಇರಲಿದೆ. ಹವ್ಯಕ ಸಮಾಜದ ಅಭಿವೃದ್ಧಿಗೆ ಮಹಾಸಭೆಯಿಂದ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಜಗದ್ಗುರು ಶ್ರೀಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಹಾರೈಸಿದರು.
ಮಹಾಸಭೆಯ ಸ್ಥಳೀಯ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದು ಆಶೀರ್ವಾದ ಮಂತ್ರಾಕ್ಷತೆ ಪಡೆದರು. ಕುಂಕುಮಾರ್ಚನೆಯ ಪ್ರಸಾದವನ್ನು ಮಹಾಸಭೆಗೆ ನೀಡಿದರು.
Get In Touch With Us info@kalpa.news Whatsapp: 9481252093
















