ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇಂದು ಸಂಜೆ ವೇಳೆಗೆ ನಗರದಲ್ಲಿ ಸುರಿದ ಕುಂಭದ್ರೋಣ ಮಳೆ ಭಾರೀ ಅವಾಂತರ ಸೃಷ್ಠಿಸಿದ್ದು ಗೋಪಾಳದಲ್ಲಿ ಬಹಳಷ್ಟು ಮನೆಗಳಿಗೆ ನೀರು ನುಗ್ಗಿದೆ.
ಗೋಪಾಳದ ಮೋರ್ ಹಿಂಭಾಗದ ಕೃಷ್ಣ ಮಠ ರಸ್ತೆಯಲ್ಲಿ 2 ಅಡಿಗೂ ಎತ್ತರ ನೀರು ಹರಿಯುತ್ತಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ.
ಇನ್ನು, ಸಾಗರದ ಹೆದ್ದಾರಿಯ ಆಟೋ ಕಾಂಪ್ಲೆಕ್ಸ್ ಬಳಿಯಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಸುಮಾರು ಒಂದು ಗಂಟೆ ಕಾಲ ನಗರದಾದ್ಯಂತ ಸುರಿದ ಕುಂಭದ್ರೋಣ ಮಳೆಗೆ ಬಹಳಷ್ಟು ಚರಂಡಿಗಳು ಉಕ್ಕಿ ಹರಿದಿದ್ದು ರಸ್ತೆಗಳಲ್ಲಿ ನೀರು ನಿಂತಿದೆ.
Get In Touch With Us info@kalpa.news Whatsapp: 9481252093
















