ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಂದು ಮುಂಜಾನೆವರೆಗೂ ಉಕ್ಕಿ ಹರಿಯುತ್ತಿದ್ದ ಭದ್ರಾ ನದಿ ಇಂದು 10 ಗಂಟೆ ವೇಳೆಗೆ ಕೊಂಚ ಇಳಿಕೆಯಾಗಿದ್ದು, ಸೇತುವೆ ತಡೆಗೋಡೆಗಳು ಪಳೆಯುಳಿಕೆಯಂತೆ ಕಾಣುತ್ತಿವೆ.
ನಿನ್ನೆ ರಾತ್ರಿಯಿಂದ ಸೇತುವೆ ಮೇಲೆ ಸಂಪೂರ್ಣವಾಗಿ ಉಕ್ಕಿ ಹರಿಯುತ್ತಿದ್ದ ನೀರು, ಇಂದು ನಸುಕಿನ ವೇಳೆಗೆ ಅಂಡರ್ ಬ್ರಿಡ್ಜ್ ಬಳಿಯ ಪೆಟ್ರೋಲ್ ಬಂಕ್’ವರೆಗೂ ವ್ಯಾಪಿಸಿತ್ತು.
ಸುಮಾರು 10 ಗಂಟೆ ವೇಳೆಗೆ ನೀರು ಕೊಂಚ ಇಳಿಕೆಯಾಗಿದ್ದರೂ, ಸೇತುವೆಯ ಮುಕ್ಕಾಲು ಭಾಗದವರೆಗೂ ಹರಿಯತ್ತಿದೆ.
ನೀರಿನ ಆರ್ಭಟಕ್ಕೆ ಭಾರೀ ಪ್ರಮಾಣದಲ್ಲಿ ಮರ, ಗಿಡಗಳು ಕೊಚ್ಚಿ ಬಂದಿದ್ದು, ಸೇತುವೆಗೆ ಕಂಬಗಳಿಗೆ ಸಿಲುಕಿ ಪಳೆಯುಳಿಕೆಯಂತೆ ಕಾಣುತ್ತಿವೆ.

ಧರೆಗುರುಳಿದ ಬೃಹತ್ ಮರ
ಹೊಸ ಸೇತುವೆ ರಸ್ತೆ ಬಳಿ ನದಿಗೆ ಇಳಿಯುವ ದಾರಿಯಲ್ಲಿದ್ದ ಬೃಹತ್ ಮರ ನಿನ್ನೆ ತಡರಾತ್ರಿ ಉರುಳಿಬಿದ್ದಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ದಾರಿಗೆ ಅಡ್ಡಲಾಗಿ ಮರ ಉರುಳಿಬಿದ್ದಿದ್ದು, ನೀರಿನ ಹರಿವಿನ ಭೀಕರತೆಯನ್ನು ಇದು ಸಾಕ್ಷೀಕರಿಸುತ್ತಿದೆ.
ಮರ ಬಿದ್ದ ಪ್ರದೇಶದಲ್ಲಿಯೇ ಪೊಲೀಸರು ಹಾಗೂ ಹೋಮ್ ಗಾರ್ಡ್ಸ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅದೃಷ್ಟವಷಾತ್ ಯಾರಿಗೂ, ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ.
Get In Touch With Us info@kalpa.news Whatsapp: 9481252093

















