ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಜೆ. ಅಪ್ಪಾಜಿಗೌಡರ ನಿಧನ ಜಿಲ್ಲಾ ರಾಜಕಾರಣಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಕಂಬನಿ ಮಿಡಿದರು.
ಅಪ್ಪಾಜಿ ಗೌಡರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಅವರು ಮಾತನಾಡಿದರು.
ಭದ್ರಾವತಿ ಸೇರಿದಂತೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಅಪ್ಪಾಜಿ ಗೌಡರು ನೀಡಿದ ಕೊಡುಗೆ ಅಪಾರವಾದುದು. ಮಾತ್ರವಲ್ಲ ಜಿಲ್ಲೆಯ ರಾಜಕಾರಣಕ್ಕೆ ಅವರು ನೀಡಿದ ಕೊಡುಗೆ ಬೆಲೆ ಕಟ್ಟಲಾಗದು. ಇಂತಹ ನಾಯಕರ ಅಗಲಿಕೆ ನಮಗೆಲ್ಲಾ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಯೋಗೇಶ್, ಭದ್ರಾವತಿ ಜೆಡಿಎಸ್ ಅಧ್ಯಕ್ಷರಾದ ಕರುಣಾ ಮೂರ್ತಿ, ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ರಾದ ಜಿ.ಡಿ. ಮಂಜುನಾಥ್, ಲಕ್ಕವಳ್ಳಿ ಎಂ.ಆರ್. ರಮೇಶ್ ಹಾಗೂ ರಾಜ್ ಕುಮಾರ್ ಇನ್ನಿತರರು ಇದ್ದರು.
Get In Touch With Us info@kalpa.news Whatsapp: 9481252093

















