Read - < 1 minute
ಬೆಂಗಳೂರು, ಸೆ.8: ದುಲ್‌ಹಜ್ ಮಾಸದ ಚಂದ್ರದರ್ಶನದ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬದ ರಜೆಯನ್ನು ಸೆ. 12ರ ಬದಲಿಗೆ ಸೆ.13ಕ್ಕೆ ನಿಗದಿಪಡಿಸಲಾಗಿದೆ.
2016ನೆಯ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಬಕ್ರೀದ್ ಹಬ್ಬದ ರಜೆ ಸೆ. 12ಕ್ಕೆ ನಿಗದಿಯಾಗಿತ್ತು. ಇದೀಗ ಸೆ.12ರ ಬದಲಿಗೆ ಸೆ.13ಕ್ಕೆ ಬದಲಾಯಿಸಿ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ರಜಾ ದಿನವನ್ನು ಬದಲಾಯಿಸಬೇಕು ಎಂದು ಕೇಂದ್ರ ಚಂದ್ರದರ್ಶನ ಸಮಿತಿ ಮನವಿ ಮಾಡಿದ್ದರಿಂದ ರಜಾ ದಿನವನ್ನು ಬದಲಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.
Discussion about this post