ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಉತ್ತರ ಪ್ರದೇಶ ಮನಿಷಾ ವಾಲ್ಮೀಕಿ ಯವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಹೀನಾಯವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ, ವಿವಿಧ ಸಂಘ ಸಂಸ್ಥೆಗಳಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನೆಡಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ದ ಕಿಡಿಕಾರಿದ ಪ್ರತಿಭಟನೆಕಾರರು, ಉತ್ತರ ಪ್ರದೇಶದ ದಲಿತ ಯವತಿಯನ್ನು ಸಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆಗೈದಿರುವ ಪಾಪಿಗಳನ್ನು ಗಲ್ಲಿಗೇರಿಸಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜ, ಮುಖಂಡರಾದ ಪಿ.ಟಿ. ತಿಪ್ಪೇಸ್ವಾಮಿ, ಚೇತನ್ ಕುಮಾರ್, , ಮಾರುತೇಶ, ಸೂರ್ ನಾಯಕ, ಜಿ.ಟಿ. ಗೊವಿಂದರಾಜ್, ಟಿ.ಜೆ. ವೆಂಕಟೇಶ್, ಸಂಘಟಿತ ಹಾಗೂ ಅಸಂಘಟಿತ ನೌಕರರ ತಾಲೂಕು ಅಧ್ಯಕ್ಷೆ ಸಣ್ಣಸೂರವ್ವ, ಜಿಲ್ಲಾಪ್ರಧಾನ ಕಾರ್ಯದರ್ಶಿ ಭಾಗ್ಯಮ್ಮ, ಪ್ರಧಾನ ಕಾರ್ಯದರ್ಶಿ ಕರಿಯಮ್ಮ, ಸದಸ್ಯರಾದ ಜಯಮ್ಮ, ತಿಪ್ಪಮ್ಮ, ಮಾಜಿ ನಗರಸಭೆ ಸದಸ್ಯರಾದ ಆರ್. ಪ್ರಸನ್ನಕುಮಾರ್, ಎಚ್.ಎಸ್. ಸೈಯಾದ್, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ್, ರಮೇಶ ಗೌಡ, ಹಾಯ್ಕಲ್ ವಿರೂಪಾಕ್ಷ, ದಲಿತ ಸಂಘರ್ಷ ಸಮಿತಿಯ ಪ್ರಕಾಶ, ವೀರಭದ್ರಪ್ಪ, ವಾಲ್ಮೀಕಿ ಮಹಿಳಾ ಸಂಘ ಅಧ್ಯಕ್ಷೆ ಟಿ. ಸ್ವಪ್ನ, ಉಪಾಧ್ಯಕ್ಷ ಸೂರ್ಯಪ್ರಭಾ ವಿನೋದ, ಯಶೋಧಮ್ಮ ಹಾಗೂ ವಿವಿಧ ಸಂಘಟನೆಯ ಸದಸ್ಯರು ವಾಲ್ಮೀಕಿ ಸಮುದಾಯದ ಮುಖಂಡರು ಇದ್ದರು.
ತಹಶೀಲ್ದಾರ್ ಎಂ. ಮಲ್ಲಿಕಾಜುನ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















