ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಿರಿಯ ಪೊಲೀಸ್ ಅಧಿಕಾರಿ, ರಾಜ್ಯ ಗುಪ್ತವಾರ್ತೆಯ ಕೆ. ಕೃಷ್ಣಮೂರ್ತಿ ಅವರನ್ನು ಭದ್ರಾವತಿ ಕಾನೂನು ಸುವ್ಯವಸ್ಥೆ ಉಪವಿಭಾಗದ ಡಿವೈಎಸ್’ಪಿ ಆಗ ವರ್ಗಾವಣೆ ಮಾಡಲಾಗಿದೆ.
ಭಷ್ಟಾಚಾರ ನಿಗ್ರಹದಳ, ಕರ್ನಾಟಕ ಪೊಲೀಸ್ ಅಕಾಡೆಮಿ, ಗುಪ್ತಚರ ಇಲಾಖೆ ವಿಭಾಗಗಳಲ್ಲಿ ಒಟ್ಟು ಐವರು ಡಿವೈಎಸ್’ಪಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈಗ ಭದ್ರಾವತಿಗೆ ವರ್ಗಾವಣೆಯಾಗಿರುವ ಕೃಷ್ಣಮೂರ್ತಿಯವರು, ಶಿವಮೊಗ್ಗದ ದೊಡ್ಡ ಪೇಟೆ ಪಿಎಸ್‌ಐ, ಸಾಗರ ನಗರ ಸಿಪಿಐ, ಚಿಕ್ಕಮಗಳೂರಿನಲ್ಲಿ ಎಸಿಬಿ ನಿರೀಕ್ಷಕರಾಗಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಗಾವಲು ಪಡೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















