ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತೀರ್ಥಹಳ್ಳಿ: ಮಲೆನಾಡಿನ ಕೆಲವು ಪ್ರತಿಭಾನ್ವಿತ ಹುಡುಗರು ಒಟ್ಟಾಗಿ ಸೇರಿಕೊಂಡು ಕೇವಲ 500 ರೂ.ನಲ್ಲಿ ಕಿರು ಚಿತ್ರವೊಂದನ್ನು ತಯಾರಿಸಿದ್ದು, ಇದು ಯೂಟ್ಯೂಬ್’ನಲ್ಲಿ ಬಿಡುಗಡೆಯಾಗಿದೆ.
ಕಾಮತ್ ಸ್ಟುಡಿಯೋಸ್ ಅರ್ಪಣೆಯಲ್ಲಿ ಮಲ್ನಾಡ್ ಪ್ರೊಡಕ್ಷನ್ ಸಹಯೋಗದಲ್ಲಿ ಇನ್ವೆಸ್ಟಿಗೇಟರ್ ಎಂಬ ಸಸ್ಪೆನ್ಸ್, ಥ್ರಿಲ್ಲರ್ ಕಿರು ಚಿತ್ರವನ್ನು ನಿರ್ಮಿಸಿದ್ದಾರೆ.
ತೀರ್ಥಹಳ್ಳಿ ವಾಗ್ದೇವಿ ಪಿಯು ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ ಮಹೇಶ್ ಕಾಮತ್ ನಿರ್ದೇಶನ ಮಾಡಿದ್ದಾರೆ. ಸುರೇಶ ಭಗತ್ ಎಡಿಟಿಂಗ್ ವರ್ಕ್ ಮಾಡಿದ್ದು, ತೀರ್ಥಹಳ್ಳಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಸರ್ವೋತ್ತಮ ಶೆಣೈ, ರಾಜೇಶ್ ಭಗತ್, ಪುನೀತ್ ಉಮೇಧ, ಸಂದೀಪ್ ನಾಗರಾಜ್, ಸುಕೇಶ್ ಕಾಮತ್ ನಟಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post