ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಹಳೇ ಇಕ್ಕೇರಿ ಬಳಿಯಲ್ಲಿ ತಾಯಿ, ಮಗನ ಭೀಕರ ಹತ್ಯೆ ನಡೆದಿದ್ದು, ಈ ಘಟನೆಯಿಂದ ಮಲೆನಾಡು ಅಕ್ಷರಶಃ ಬೆಚ್ಚಿ ಬಿದ್ದಿದೆ.
ಹಳೇ ಇಕ್ಕೇರಿಯ ಕಸಕಸೆಕೊಡ್ಲುವಿನಲ್ಲಿ ತಾಯಿ ಮಗನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಕಳೆದ ರಾತ್ರಿ ಪ್ರಕರಣ ನಡೆದಿದ್ದು ಮುಂಜಾನೆ ಬೆಳಕಿಗೆ ಬಂದಿದೆ.
ಕೊಲೆಯಾದವರನ್ನು ಬಂಗಾರಮ್ಮ ಹಾಗೂ ಪ್ರವೀಣ್ ಎಂದು ಗುರುತಿಸಲಾಗಿದೆ.
ಪ್ರವೀಣ್ ಪತ್ನಿ ಹಾಗೂ ಮಗುವಿನ ಎದುರೇ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು, ಆಕೆಯ ಅರಚದಂತೆ ಬಾಯಿಗೆ ಪ್ಲಾಸ್ಟರ್ ಅಂಟಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಾಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post