ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಿಗಂಧೂರು: ಸಾವಿರಾರು ಭಕ್ತರಿದ್ದರೂ ಯಾವಾಗಲೂ ಪ್ರಶಾಂತವಾಗಿದ್ದ ಸಿಗಂಧೂರು ಚೌಡೇಶ್ವರಿ ದೇವಾಲಯಲ್ಲಿ ಇಂದು ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ದೇವಿಯ ಮುಂದೆಯೇ ದೊಂಬಿ ನಡೆದಿರುವುದು ಸಂಗತಿ ವಿಪರ್ಯಾಸವಾಗಿದೆ.
ನವರಾತ್ರಿಗೂ ಮೊದಲು ಚಂಡಿಕಾ ಹೋಮ ನಡೆಸಬೇಕು ಎಂಬ ಪ್ರಧಾನ ಅರ್ಚಕ ಶೇಷಗಿರಿ ಭಟ್ಟರ ಬೇಡಿಕೆಯನ್ನು ಧರ್ಮದರ್ಶಿ ರಾಮಪ್ಪ ಅವರು ನಿರಾಕರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಟ್ಟರು ತಮ್ಮ ಕುಟುಂಬದೊಂದಿಗೆ ದೇವಿ ಮುಂದೆ ಮೌನ ಪ್ರತಿಭಟನೆ ಆರಂಭಿಸಿದ್ದರು.
ಆದರೆ, ಈ ವೇಳೆ ಅಲ್ಲಿಗೆ ಆಗಮಿಸಿದ ಕೆಲವು ಭಕ್ತರು ಅನಾವಶ್ಯಕವಾಗಿ ಜಗಳ ಆರಂಭಿಸಿ, ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ, ಮೌನಕ್ಕೆ ಜಾರಿದ್ದ ಶೇಷಗಿರಿ ಭಟ್ಟರು ಕೆರಳಿದ್ದು, ಭಕ್ತರ ಮತ್ತು ಶೇಷಗಿರಿ ಭಟ್ಟೆರ ನಡುವೆ ಮಾತಿನ ಚಕಮಕಿ ನಡೆದಿದೆ. ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಚೇರಿಯ ಪೀಠೋಪಕರಣಗಳು ಧ್ವಂಸವಾಗಿವೆ.
ತತಕ್ಷಣ ಸ್ಥಳಕ್ಕೆ ಆಗಮಿಸಿ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನ ಪಡಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆದರೆ, ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ಶಕ್ತಿ ದೇವತೆ ಸನ್ನಿಧಿಯಲ್ಲಿ ಇಂತಹ ಗಲಭೆ ನಡೆದಿರುವುದು ಭಕ್ತರಲ್ಲಿ ನೋವುಂಟು ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post