ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನವರಾತ್ರಿ ಅಂಗವಾಗಿ ನಗರಸಭೆ ಆಚರಿಸುತ್ತಿರುವ ಜಾಗೃತಿ ದಸರಾದ ಭಾಗವಾಗಿ ಇಂದು ಕೊರೋನಾ ವೈಪರೀತ್ಯಗಳು ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ಇದಕ್ಕೆ ಭರ್ಜರಿ ರೆಸ್ಪಾನ್ಸ್ ಬಂದಿದೆ.
ಇಂದು ಮಧ್ಯಾಹ್ನ ನಗರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ನಗರಸಭೆ ಲೆಕ್ಕಾಧಿಕಾರಿ ಮಹಮದ್ ಅಲಿ ಉದ್ಘಾಟಿಸಿದರು.

ಭಾಷಣ ಸ್ಪರ್ಧೆಯಲ್ಲಿ ಒಟ್ಟು 24 ಮಂದಿ ಪಾಲ್ಗೊಂಡಿದ್ದು, ತಮ್ಮ ಸ್ವಾನುಭವ ಹಾಗೂ ತಾವು ಕಂಡ ವಿಷಯಗಳನ್ನು ವಿವರಿಸಿದರು.

ತೀರ್ಪುಗಾರರಾಗಿ ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಕೀಲ್ ಅಹಮದ್ ಹಾಗೂ ಪೇಪರ್ ಟೌನ್ ಇಂಗ್ಲಿಷ್ ಹೈಸ್ಕೂಲ್ ಪ್ರಾಂಶುಪಾಲ ಸತೀಶ್ ಪಾಲ್ಗೊಂಡಿದ್ದರು.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ಕಾರ್ಯಕ್ರಮದಲ್ಲಿ ನಗರಸಭೆಯ ಅಧಿಕಾರಿಗಳಾದ ಶೃತಿ, ಕಚೇರಿ ವ್ಯವಸ್ಥಾಪಕಿ ಸುನಿತಾ ಕುಮಾರಿ, ಆರೋಗ್ಯ ಶಾಖೆಯ ಸತೀಶ್, ನಗರಸಭೆ ಅಧಿಕಾರಿ
ಸುಹಾಸಿನಿ, ನರಸಿಂಹಾಚಾರ್, ರಮಾಕಾಂತ್ ಸೇರಿದಂತೆ ಹಲವರು ಇದ್ದರು. ನಗರಸಭೆ ಅಧಿಕಾರಿ ಈಶ್ವರಪ್ಪ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post