No Result
View All Result
Malnad is a Cultural ‘Gharana’ of Great Minds: Dr. Jayamala at Sahyadri Utsava
English Articles

Malnad is a Cultural ‘Gharana’ of Great Minds: Dr. Jayamala at Sahyadri Utsava

by ಕಲ್ಪ ನ್ಯೂಸ್
March 13, 2026
0

Kalpa Media House  |  Shimoga | Invoking the poetic essence of the Malnad landscape, veteran actor, former minister, and Chairperson...

Read moreDetails
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
  • Advertise With Us
  • Grievances
  • About Us
  • Contact Us
Sunday, March 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ತುಳು ಭಾಷೆ ಸ್ವಂತ ಲಿಪಿಯಲ್ಲಿ ಸಾಹಿತ್ಯದ ತೇರನ್ನೇರಿ ಮೆರೆಯಲು ಅವಿರತ ಶ್ರಮಿಸುತ್ತಿರುವ ವಿದ್ಯಾಶ್ರೀ ಉಳ್ಳಾಲ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 10, 2020
in Special Articles
0
ತುಳು ಭಾಷೆ ಸ್ವಂತ ಲಿಪಿಯಲ್ಲಿ ಸಾಹಿತ್ಯದ ತೇರನ್ನೇರಿ ಮೆರೆಯಲು ಅವಿರತ ಶ್ರಮಿಸುತ್ತಿರುವ ವಿದ್ಯಾಶ್ರೀ ಉಳ್ಳಾಲ್
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಭಾಷೆ ಮಾನವ ಸಂಸ್ಕೃತಿಯ ಪ್ರತಿಬಿಂಬ. ಭಾಷೆ ಮಾನವನಿಗೆ ಮಾತ್ರ ನಿಲುಕುವ ಒಂದು ಸಂಕೀರ್ಣ ಸಂವಹನ ಮಾಧ್ಯಮ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳೂ ಶಬ್ದೋತ್ಪಾದನೆ ಮಾಡುತ್ತವೆ. ಇದನ್ನು ಸಂವಹನ ಎಂದು ಕರೆಯಬಹುದಾದರೂ ಭಾಷೆ ಎನ್ನಲಾಗುವುದಿಲ್ಲ. ಭಾಷೆ ಹೇಗೆ ಚಿಂತನಶೀಲವೂ ಹಾಗೆಯೇ ಚಲನಶೀಲವಾದುದು. ಪ್ರಪಂಚದಲ್ಲಿ ಸುಮಾರು ಏಳು ಸಾವಿರ ಭಾಷೆಗಳಿವೆ ಎಂದು ಭಾಷಾ ವಿಜ್ಞಾನಿಗಳು ಅಂದಾಜಿಸುತ್ತಾರೆ. ಇವುಗಳಲ್ಲಿ ಹಲವು ಸಹಸ್ರ ಭಾಷೆಗಳು ಕೇವಲ ಬಾಯಿಮಾತಿನ ಭಾಷೆಗಳಾಗಿ ಉಳಿದಿವೆ. ಎಷ್ಟೋ ಭಾಷೆಗಳು ಸ್ವಂತದಾದ ಲಿಪಿಯನ್ನು ಹೊಂದಿಲ್ಲ.

ಉದಾಹರಣೆಗೆ ಜಗತ್ತಿನಾದ್ಯಂತ ವ್ಯಾವಹಾರಿಕ ಭಾಷೆಯಾಗಿರುವ ಇಂಗ್ಲಿಷ್ ಸ್ವಂತ ಲಿಪಿಯನ್ನು ಹೊಂದಿಲ್ಲ. ಇಂಗ್ಲಿಷ್ ಭಾಷೆಯನ್ನು ರೋಮನ್ ಲಿಪಿಯಲ್ಲಿ ಬರೆಯಲಾಗುತ್ತದೆ. ಭಾರತೀಯ ಭಾಷೆಗಳಾದ ಸಂಸ್ಕೃತ, ಹಿಂದಿ, ಮರಾಠಿ, ಭೋಜಪುರಿ, ನೇಪಾಲಿ, ಮೈಥಿಲಿ ಮುಂತಾದ ಭಾಷೆಗಳಿಗಳೂ ಸ್ವಂತ ಲಿಪಿಯನ್ನು ಹೊಂದಿಲ್ಲ. ಈ ಎಲ್ಲ ಭಾಷೆಗಳನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ. ಭಾರತೀಯ ಉಪಖಂಡದ ಭಾಷಾ ಕುಟುಂಬಗಳಲ್ಲಿ ಮೂಲ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಮುಖ್ಯ ಭಾಷೆಗಳಲ್ಲಿ ತುಳು ತನ್ನ ಸ್ವಂತದಾದ ಲಿಪಿಯನ್ನು ಹೊಂದಿದೆ. ತುಳು ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ ಎಂದು ಭಾಷಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸ್ವಂತ ಲಿಪಿಯಿದ್ದರೂ ಕಾಲಕ್ರಮೇಣ ಹಿನ್ನೆಲೆಗೆ ಸರಿದು ಸೊರಗಿದ ಭಾಷೆ ತುಳು. ತುಳು ಲಿಪಿಯು ವ್ಯಾಪಕವಾಗಿ ಗ್ರಂಥಸ್ಥವಾಗಿ ಬಳಕೆಯಾಗದೆ ಮತ್ತು ರಾಜಾಶ್ರಯ ದೊರೆಯದ ಕಾರಣ ಆಡು ಭಾಷೆಯಾಗಿಯೇ ಹೆಚ್ಚು ಪ್ರಚಲಿತದಲ್ಲಿದೆ. ತುಳು ಭಾಷೆಯಲ್ಲಿ ಕೆಲವೂಂದು ಕೃತಿಗಳು ರಚನೆಯಾಗಿದ್ದರೂ ಸಂಖ್ಯೆ ಬೆರಳೆಣಿಕೆಯಲ್ಲೇ ಇವೆ. ಮುಖ್ಯವಾಗಿ ತುಳು ಲಿಪಿಯನ್ನು ಮಠ ಮಂದಿರಗಳಲ್ಲಿ ಸಂಸ್ಕೃತದ ಶ್ಲೋಕಗಳನ್ನು ಬರೆದಿಡಲು ಉಪಯೋಗಿಸಲಾಗುತ್ತಿತ್ತು. ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಮತ್ತು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ತುಳು ಮಾತೃಭಾಷೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ತುಳು ಲಿಪಿಯ ಪುನರುತ್ಥಾನಕ್ಕಾಗಿ ಬಹಳಷ್ಟು ಕಾರ್ಯಕ್ರಮಗಳು ತುಳುನಾಡು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ನಡೆಯುತ್ತಿವೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನಮ್ಮ ತುಳುನಾಡ್ ಟ್ರಸ್ಟ್‌ (ರಿ) ಹಾಗೂ ಅನೇಕ ತುಳುಕೂಟ ಸಂಸ್ಥೆಗಳು ನಿರಂತರ ಕಾರ್ಯ ನಿರ್ವಹಿಸುತ್ತಿವೆ. ತುಳು ಭಾಷೆ, ಲಿಪಿಗಾಗಿ ಬಹಳಷ್ಟು ಮಹತ್ವದ ಸಂಶೋಧನೆ ಮಾಡಿದವರು ದಿವಂಗತ ಡಾ. ಪುಂಡೂರು ವೆಂಕಟರಾಜ ಪುಣಿಂಚತ್ತಾಯರು. ಅವರ ಅನಂತರ ತುಳು ಭಾಷೆಯ ಉನ್ನತಿಗಾಗಿ ಹಲವು ವ್ಯಕ್ತಿಗಳು ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿಯೂ ತುಳು ಭಾಷೆಯನ್ನೇ ಉಸಿರಾಡುತ್ತ ದುಡಿಯುತ್ತಿದ್ದಾರೆ. ಆ ಪಂಕ್ತಿಯಲ್ಲಿ ಎದ್ದು ಕಾಣುವ ಹೆಸರುಗಳಲ್ಲಿ ವಿದ್ಯಾಶ್ರೀ ಎಸ್. ಉಳ್ಳಾಲ ಅವರದ್ದು.

ತುಳುನಾಡಿನ ಚಾರಿತ್ರಿಕ ಹಾಗೂ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಕ್ಷೇತ್ರ ಪಡುಮಲೆಯಲ್ಲಿ ಹುಟ್ಟಿ ಬೆಳೆದವರು. ವೀರ ರಾಣಿ ಅಬ್ಬಕ್ಕನ ನಾಡು ಉಳ್ಳಾಲಕ್ಕೆ ಪರಿಣಯದ ಮೂಲಕ ಪಯಣ ಮಾಡಿದವರು ವಿದ್ಯಾಶ್ರೀ. ಪಡುಮಲೆಯ ಸೇನೆರೆಮಜಲು ಲಕ್ಷ್ಮೀ ನಾರಾಯಣ ರೈ ಹಾಗೂ ಯಶೋಧ ರೈ ದಂಪತಿಗಳ ಪ್ರಥಮ ಪುತ್ರಿ. ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬಡಗನ್ನೂರು ಹಾಗೂ ಕುಂಬ್ರದ ಸರಕಾರಿ ವಿದ್ಯಾ ಸಂಸ್ಥೆಗಳಲ್ಲಿ ಪೂರೈಸಿದವರು. ಬೆಂಗಳೂರಿನ ವಿಜ್‌ಟೂನ್ಜ್‌ ಕಾಲೇಜ್ ಆಫ್ ಮೀಡಿಯಾ ಆಂಡ್ ಡಿಸೈನ್ ಎಂಬ ಸಂಸ್ಥೆಯಲ್ಲಿ ಬಿ.ಎಸ್.ಸಿ. ಇನ್ ಮಲ್ಟಿ ಮೀಡಿಯಾ ಟೆಕ್ನಾಲೊಜಿ ಸ್ನಾತಕ ಪದವಿಯನ್ನು ಪಡೆದವರು. ತುಳು ಭಾಷೆಯ ಮೇಲಿನ ಆಸ್ಥೆಯಿಂದಾಗಿ ಬೆಂಗಳೂರಿನ ಉದ್ಯೋಗವನ್ನು ಬಿಟ್ಟು ತುಳುನಾಡಿಗೆ ಹಿಂತಿರುಗಿದ ವಿದ್ಯಾಶ್ರೀ ಇವರದ್ದು ಅವಿರತ ಸಾಧನೆ ಎನ್ನುವುದಕ್ಕಿಂತಲೂ ಸಾಹಸ ಎನ್ನಬಹುದು. ಡಾ.ಎಸ್.ಆರ್. ವಿಘ್ನರಾಜ್ ಅವರ ಮಾರ್ಗದರ್ಶನದಲ್ಲಿ ತುಳು ಲಿಪಿಯ ಅಧ್ಯಯನವನ್ನು ಕೈಗೊಂಡು ಒಂದೆರಡು ದಿನಗಳಲ್ಲಿಯೇ ನಿರರ್ಗಳವಾಗಿ ಓದಲು ಬರೆಯಲು ಕಲಿತವರು. ಅನ್ಯರಿಗೆ ಕಲಿಸುವ ಸದುದ್ದೇಶದಿಂದ ತುಳುನಾಡಿನ ಅನೇಕ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಲಿಕಾ ಕಾರ್ಯಗಾರಗಳನ್ನು ನಡೆಸುತ್ತ ಬಂದರು.


2013ರಲ್ಲಿ ಸುಮಾರು ಎಂಬತ್ತು ಕಿಲೋಮೀಟರ್ ದೂರದ ಪಡುಮಲೆಯಿಂದ ಮಂಗಳೂರಿನ ಲಾಲ್‌ಬಾಗ್‌ನಲ್ಲಿರುವ ತುಳು ಅಕಾಡೆಮಿಗೆ ಹಾಗೂ 2014ರಲ್ಲಿ ಉಳ್ಳಾಲದಿಂದ ಕಾರ್ಕಳಕ್ಕೆ ಬಂದು ಹೋಗುತ್ತ ತುಳು ಲಿಪಿಯನ್ನು ಕಲಿಸಿದ್ದಾರೆ. 2015 ರಲ್ಲಿ ತನ್ನ ಎರಡು ತಿಂಗಳ ಮಗುವನ್ನು ತನ್ನ ತಾಯಿಯ ಕೈಗೊಪ್ಪಿಸಿ ಹತ್ತು ವಾರದ ಕಾರ್ಯಾಗಾರವನ್ನು ನಡೆಸಿಕೊಟ್ಟ ದಿಟ್ಟೆ ವಿದ್ಯಾಶ್ರೀ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಹಾಗೂ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಕಾರ್ಯಾಗಾರ ನಡೆಸಿ ತುಳು ಲಿಪಿಯನ್ನು ಕಲಿಸಿದರು.

ಮೊತ್ತ ಮೊದಲಿಗೆ ತುಳು ಲಿಪಿಯಲ್ಲಿ ’ತುಳುವೆರೆನ ಕಾಲಕೊಂದೆ’ ಎನ್ನುವ ಕ್ಯಾಲೆಂಡರ್ ತಯಾರಿಸಿದ ಸಾಹಸಿ ಹಾಗೂ ಸಾಧಕಿ ವಿದ್ಯಾಶ್ರೀ. 2014 ಮತ್ತು 2015ರಲ್ಲಿ ಫೇಸ್ಬುಕಲ್ಲಿ ಹಾಕಿ, 2016 ರಿಂದ ಮುದ್ರಿಸಿ ತುಳುನಾಡಿಗೆ ಪಸರಿಸುವಂತೆ ಮಾಡಿದವರು. 2016ರಿಂದ ’ತುಳು ಲಿಪಿಟ್ ಎನ್ನ ಪುರ್ದ’ (ತುಳು ಲಿಪಿಯಲ್ಲಿ ನನ್ನ ಹೆಸರು) ಎಂಬ ಅಭಿಯಾನವನ್ನು ಪ್ರಾರಂಭಿಸಿದವರು. ಐದು ವರ್ಷದ ಮಕ್ಕಳಿಂದ ಎಂಬತ್ತೈದು ವರ್ಷದ ಹಿರಿಯರಿಗೆ ತುಳು ಲಿಪಿಯನ್ನು ಕಲಿಸಿದ ಕೀರ್ತಿ ವಿದ್ಯಾಶ್ರೀ ಅವರದ್ದು. ವಿದ್ಯಾಶ್ರೀ ಅವರು ನಡೆಸಿಕೊಟ್ಟ ’ತುಳು ಭಾಷೆದ ವೈವಿಧ್ಯೊಲು’ ಎಂಬ ಭಾಷಣ ಮಂಗಳೂರು ಆಕಾಶವಾಣಿಯಿಂದ ಬಿತ್ತರಗೊಂಡು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಅಪಾರ ಜನಮನ್ನಣೆ ಪಡೆದಿದೆ. ಕನ್ನಡ ಪ್ರತಿಲಿಪಿ ಎಂಬ ಸ್ವ ಪ್ರಕಾಶನ ಸಂಸ್ಥೆಯು ತನ್ನ ಡಿಜಿಟಲ್ ಆ್ಯಪ್‌ನಲ್ಲಿ ತುಳು ಭಾಷೆಗೆ ಹೊಸ ವಿಭಾಗವನ್ನು ಸೃಜಿಸಿಕೊಡುವಲ್ಲಿ ವಿದ್ಯಾಶ್ರೀ ಅವರ ದುಡಿತವಿದೆ. ನಮ್ಮ ತುಳುನಾಡ್ ಟ್ರಸ್ಟ್ (ರಿ) ಇದರ ಮಹತ್ವಾಕಾಂಕ್ಷೆಯ ಸಮಗ್ರ ತುಳುನಾಡ್ ದಾಖಲಿಕರಣ ಎಂಬ ಮಹತ್ವದ ಯೋಜನೆಯ ಮುಂದಾಳುತ್ವವನ್ನು ವಹಿಸಿಕೊಂಡು ಕಾರ್ಯನಿರತರಾದವರು ವಿದ್ಯಾಶ್ರೀ. ಈ ಯೋಜನೆಯ ಅಂಗವಾಗಿ ಪ್ರತಿಷ್ಠಿತ ತುಳುವರಾದ ಡಾ. ಬಿ.ಆರ್. ಶೆಟ್ಟಿ, ಡಾ. ಪಾಲ್ತಾಡಿ ರಾಮಕೃಷ್ಣ ಆರ್ಚಾ, ಡಾ. ಅಮೃತ ಸೋಮೇಶ್ವರ, ಹರಿಕೃಷ್ಣ ಪುನರೂರು, ಅಂಗಡಿಮಾರು ಕೃಷ್ಣ ಭಟ್, ಡಾ.ಬಿ.ಕೆ. ಗಣೇಶ್ ರೈ ಮುಂತಾದವರ ಸಂದರ್ಶನ ಮಾಡಿದ ನೆಗಳ್ತೆಗೆ ಪಾತ್ರರಾಗಿದ್ದಾರೆ. ತುಳು ಭಾಷೆ ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂಬ ಹೋರಾಟದ ಮುಂಚೂಣಿಯಲ್ಲಿರುವವರು ವಿದ್ಯಾಶ್ರೀ. 2017 ರಿಂದ 2019ರವರೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ದುಡಿದ ಅನುಭವಿ.

ತುಳು ನಾಡು ನುಡಿಯ ಸಲುವಾಗಿ ಹೋರಾಡಲು ’ಸ್ವತಂತ್ರ ತುಳುನಾಡು’ ಎಂಬ ಪಕ್ಷ ರಚಿಸಿ (ನೋಂದಾವಣೆ ಆಗದೇ ಇದ್ದ ಕಾರಣ) ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದವರು. ಆ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಚುರುಕು ಮುಟ್ಟಿಸಿದವರು. ತುಳು ಭಾಷೆಯು ತನ್ನ ಸ್ವಂತ ಲಿಪಿಯಲ್ಲಿ ಸಾಹಿತ್ಯದ ತೇರನ್ನೇರಿ ಮೆರೆಯಬೇಕು. ಅದನ್ನು ನೋಡಿ ಧನ್ಯಳಾಗಬೇಕು ಎನ್ನುವ ವಿದ್ಯಾಶ್ರೀ ಅವರು ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸುತ್ತ ಬಂದವರು. ತುಳು, ಕನ್ನಡ, ತೆಲುಗು ಭಾಷೆಗಳಲ್ಲಿ ಕಥನ, ಕವನ, ನಾಟಕ, ಕಾದಂಬರಿಗಳನ್ನು ಬರೆದಿದ್ದಾರೆ. ’ಉಡಲ ದುನಿಪು’ ಎಂಬ ತುಳು ಕಾದಂಬರಿಯನ್ನು ರಚಿಸಿದ್ದಾರೆ. ಇದು ಪ್ರತಿಲಿಪಿಯಲ್ಲಿ ಪ್ರಕಟಗೊಂಡಿದೆ. ಫಾಲ್ಗುಣಿ, ದಂಡಯಾತ್ರೆ, ಅಮ್ಮನ ರೂಪು ಅತ್ತಿಗೆ (ಎಆರ್’ಎ) ಎಂಬ ಕಾದಂಬರಿಗಳನ್ನು ಬರೆಯುತ್ತಿದ್ದಾರೆ. ಸಾಹಿತಿ ಪ್ರಭಾಕರ್ ನೀರು ಮಾರ್ಗ ಅವರ ’ಕಾರ್ಣಿಕ’ ಕಾದಂಬರಿಯನ್ನು ತುಳುವಿಗೆ ಅನುವಾದಿಸಿದ್ದಾರೆ. ತೆಲುಗಿನಲ್ಲಿ ’ಗೋದಾವರಿ’ ಎಂಬ ಕಾದಂಬರಿ ಬರೆಯುತ್ತಿದ್ದಾರೆ. ತುಳು, ಕನ್ನಡ, ಮಲೆಯಾಳಿ, ಹಿಂದಿ, ಇಂಗ್ಲಿಷ್, ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲಿ ವ್ಯವಹರಿಸುವ ಪ್ರೌಢಿಮೆಯನ್ನು ರೂಢಿಸಿಕೊಂಡಿದ್ದಾರೆ. ವಿದ್ಯಾಶ್ರೀ ಅವರು ಹಲವು ಯೋಜನೆಗಳ ಕನಸನ್ನು ನನಸಾಗಿಸಲು ಅವಿರತ ದುಡಿಯುತ್ತಿದ್ದಾರೆ. ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ, ಅಬ್ದುಲ್ ಕಲಾಂ ಅವರ ವಿಂಗ್ಸ್‌ ಆಫ್ ಫೈರ್ ಕೃತಿಗಳನ್ನು ತುಳುವಿಗೆ ಭಾಷಾಂತರಿಸುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ಬಲೇ ತುಳು ಲಿಪಿ ಕಲ್ಪುಗ ಅಭಿಯಾನವನ್ನು ಸಾದರಪಡಿಸಿದ ತಂಡದ ಸದಸ್ಯರಲ್ಲಿ ವಿದ್ಯಾಶ್ರೀ ಒಬ್ಬರು. ಕೊಲ್ಲಿ ರಾಷ್ಟ್ರದ ಮಸ್ಕತ್ ನಿಂದ ಹಿಡಿದು ನಮ್ಮ ದೇಶದ ಹಲವು ನಗರಗಳ ತುಳುವರಿಗೆ ವಾಟ್ಸಪ್ ಮೂಲಕ ಈ ಅಭಿಯಾನದಲ್ಲಿ ತುಳು ಲಿಪಿಯನ್ನು ಕಲಿಸಲಾಗಿದೆ.

ಕಂದಿಲು, ಸರವುದ ಪೊದಿಕೆ, ಪರಿಯಾಪ್ತ ಸೇರಿದಂತೆ ಹಲವು ತುಳು ಕನ್ನಡ ಕೃತಿಗಳ ಕರಡು ಪ್ರತಿಗಳನ್ನು ತಿದ್ದಿದ್ದಾರೆ. ತುಳು ಲಿಪಿಯ ಮಾದಿರ, ಪನಿಮುತ್ತುಮಾಲೆ ಕೃತಿಗಳ ಡಿಟಿಪಿಯನ್ನು ಮಾಡಿದ್ದಾರೆ. ವಿಶ್ವ ತುಳು ಸಮ್ಮೇಳನ ದುಬೈ ಇದರ ಸ್ಮರಣ ಸಂಚಿಕೆ ’ತುಳು ಐಸಿರಿ’ಯ ಯಶಸ್ಸಿನ ನೇಪಥ್ಯದಲ್ಲಿಯೂ ದುಡಿದಿದ್ದಾರೆ. ಪ್ರಕೃತಿ ಛಾಯಾಗ್ರಹಣ, ಪರಿಸರ ಪ್ರೇಮ, ಜ್ಯೋತಿಷ್ಯ ಶಾಸ್ತ್ರ ಕಲಿಕೆ ಮುಂತಾದವುಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

ವಿದ್ಯಾಶ್ರೀ ಅವರ ಕಾಯಕವನ್ನು ನಾಡಿನ ಅನೇಕ ಸಂಘ ಸಂಸ್ಥೆಗಳು ಗುರುತಿಸಿವೆ. ಕರಾವಳಿ ಪ್ರತಿಷ್ಠಾನ ಬೆಂಗಳೂರು, ಜೈ ತುಳುನಾಡು ಕಾರ್ಕಳ ಘಟಕದಿಂದ ಸನ್ಮಾನಿತರಾಗಿದ್ದಾರೆ. 2017ರಲ್ಲಿ ಪಿಲಿಕುಳದಲ್ಲಿ ನಡೆದ ತುಳುನಾಡೋಚ್ಛಯದಲ್ಲಿ ತುಳುನಾಡೋಚ್ಚಯ ಪ್ರಶಸ್ತಿ ಹಾಗೂ ಮುದ್ರಾಡಿಯಲ್ಲಿ ಜರುಗಿದ ಅಖಿಲ ಭಾರತ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಇವರು ಹುಟ್ಟು ಹಾಕಿದ್ದ ನಮ್ಮ ತುಳುನಾಡ್ ಟ್ರಸ್ಟ್‌ (ರಿ) ಸಂಸ್ಥೆಗೆ ಲಭಿಸಿದೆ.

ಸಾಧಿಸಿದ್ದು ಸಾಸಿವೆಯಷ್ಟು, ಸಾಧಿಸಲಿಕ್ಕಿರುವುದು ಸಾಗರದಷ್ಟು ಎಂದು ವಿನಮ್ರವಾಗಿ ನುಡಿಯುವ ವಿದ್ಯಾಶ್ರೀ ಅವರು ಭಾಷಾ ತಜ್ಞ, ಸಾಹಿತಿ ಕುದ್ಕಾಡಿ ವಿಶ್ವನಾಥ ರೈಗಳಿಂದ ಪ್ರೇರಿತಳಾದವಳು ಎಂದು ತಿಳಿಸುತ್ತಾರೆ.

ಪತಿ ಜಿ.ವಿ.ಎಸ್ ಉಳ್ಳಾಲ್ (ಸುಧಾಕರ್ ಶೆಟ್ಟಿ ಉಳ್ಳಾಲ್), ಮಗ ಧೃತೀಜ್ ಶೆಟ್ಟಿ ಅವರ ಸಂಪೂರ್ಣ ಸಹಕಾರವನ್ನು ನೆನೆಯುತ್ತಾರೆ. ಹೆತ್ತವರ ಆಶೀರ್ವಾದದಿಂದ ಈ ಎಲ್ಲ ಕಾರ್ಯಗಳು ಕೈಗೂಡಿವೆ ಎನ್ನುವ ವಿದ್ಯಾಶ್ರೀ ಅವರ ಮಹತ್ವದ ಯೋಜನೆಗಳೊಂದಿಗೆ ತುಳು ಭಾಷೆ ಸ್ವಂತ ಲಿಪಿಯಲ್ಲಿ ಗ್ರಂಥಸ್ಥವಾಗುವ ಕನಸು ನನಸಾಗಲಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaTulu AcademyTulu LanguageUday Shetty PanjimaruUdupiಉಡುಪಿಕರಾವಳಿ ಕರ್ನಾಟಕತುಳು ಅಕಾಡೆಮಿತುಳು ಭಾಷೆತುಳುನಾಡ್ವಿದ್ಯಾಶ್ರೀ ಎಸ್. ಉಳ್ಳಾಲ
Share227Tweet123Send
Previous Post

ಜಿಲ್ಲೆಯಲ್ಲಿ ಮುಂದುವರೆದ ಕಮಲದ ನಾಗಾಲೋಟ: ಶಿರಾಳಕೊಪ್ಟ ಪಟ್ಟಣ ಪಂಚಾಯ್ತಿ ಬಿಜೆಪಿ ತೆಕ್ಕೆಗೆ

Next Post

ಉಪಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಧೂಳಿಪಟ: ಬಿಜೆಪಿ ಭರ್ಜರಿ ಗೆಲುವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಉಪಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಧೂಳಿಪಟ: ಬಿಜೆಪಿ ಭರ್ಜರಿ ಗೆಲುವು

ಉಪಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಧೂಳಿಪಟ: ಬಿಜೆಪಿ ಭರ್ಜರಿ ಗೆಲುವು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
Swift Action by GRP & RPF Restores Lost Valuables Worth ₹19 Lakhs to Passenger

ಜಿಆರ್‌ಪಿ – ಆರ್‌ಪಿಎಫ್‌ ತ್ವರಿತ ಕ್ರಮ | 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರೈಲ್ವೆ ಪೊಲೀಸ್

March 14, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಹುಬ್ಬಳ್ಳಿ – ಘಾಜಿಪುರ ನಡುವೆ ವಿಶೇಷ ರೈಲು ಸೇವೆ

March 14, 2026
ಉದ್ಯೋಗಖಾತ್ರಿ ಯೋಜನೆ ರದ್ದು | ಗ್ರಾಪಂ ಮಟ್ಟದಿಂದ ಕಾಂಗ್ರೆಸ್ ಹೋರಾಟ | ಸಚಿವ ಮಧುಬಂಗಾರಪ್ಪ

ಜಿಲ್ಲೆಯಲ್ಲಿ ಅಡುಗೆ ಅನಿಲದ ಗಂಭೀರ ಸಮಸ್ಯೆ ಇಲ್ಲ: ಸಚಿವ ಮಧು ಬಂಗಾರಪ್ಪ

March 14, 2026
Swift Action by GRP & RPF Restores Lost Valuables Worth ₹19 Lakhs to Passenger

Swift Action by GRP & RPF Restores Lost Valuables Worth ₹19 Lakhs to Passenger

March 14, 2026
ರೈಲ್ವೆ ನೌಕರರ ಸಮಸ್ಯೆಗಳಿಗೆ ಸಕಾಲಿಕ ಪರಿಹಾರ: ಬೇಲಾ ಮೀನಾ  ಭರವಸೆ

ರೈಲ್ವೆ ನೌಕರರ ಸಮಸ್ಯೆಗಳಿಗೆ ಸಕಾಲಿಕ ಪರಿಹಾರ: ಬೇಲಾ ಮೀನಾ  ಭರವಸೆ

March 14, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL