ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ಅರಣ್ಯ ಜೈವಿಕ ಪರಿಸರ ಇಲಾಖೆಯ ಹೊಣೆಗಾರಿಕೆ ಸಚಿವರಾದ ವಿಜಯನಗರದ ಶಾಸಕ ಆನಂದ್ ಸಿಂಗ್ ಅವರ ಕ್ಷೇತ್ರದಲ್ಲಿ ಈಗ ದೀಪಾವಳಿ ಪಟಾಕಿ ಮಾರಾಟ ಮಳಿಗೆ ತೆರೆಯಲು ಸವಕಾಶ ಕಲ್ಪಿಸಲಾಗಿದೆ.
ಕೋವಿಡ್ ಹರಡುವಿಕೆ ತಡೆಯುವ ಕ್ರಮವಾಗಿ ಉತ್ಸವಗಳು, ಹಬ್ಬಗಳ ಆಚರಣೆ ಮೇಲೆ ಕರ್ನಾಟಕ ರಾಜ್ಯ ಸರ್ಕಾರ ನಿಯಂತ್ರಣ ಹೇರಿರುತ್ತದೆ. ರಾಜ್ಯ ಸರ್ಕಾರ, ಈಗ ಮುಂಬರುವ ಬೆಳಕಿನ ಹಬ್ಬ ದೀಪಾವಳಿಯ ಪಟಾಕಿಗಳ ಮಾರಾಟಕ್ಕೂ ಹಲವು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಪಟಾಕಿ ಮಾರಾಟ ಮಾಡುವವರು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿ ಪಡೆದಿರಬೇಕು. ನ.1ರಿಂದ 17ರವರೆಗೆ ಮಾತ್ರ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಪರವಾನಗಿಯಲ್ಲಿ ನಮೂದಿಸುವ ಸ್ಥಳದಲ್ಲಿಯೇ ಮಾರಾಟಗಾರರು ಅಂಗಡಿ ಇಡಬೇಕು. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆ ಸ್ಥಾಪಿಸಬೇಕು. ಮಳಿಗೆಗಳ ಎರಡೂ ಕಡೆಗಳಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು, ಪ್ರತಿದಿನ ಸ್ಯಾನಿಡೈಜರ್ ಮಾಡಬೇಕು, ಸುರಕ್ಷತೆಗಾಗಿ ನೀರಿನ ವ್ಯವಸ್ಥೆ ಮಾಡಿರಬೇಕು ಎಂದು ಹಲವು ಸುರಕ್ಷತಾ ಕಟ್ಟು ಪಾಡುಗಳನ್ನು ಹಾಕಿ ನಿಯಂತ್ರಣ ಹೇರಿದೆ.
ಈ ನಿಟ್ಟಿನಲ್ಲಿ ಪಟಾಕಿ ಮಾರಾಟಕ್ಕೆ ರಾಜ್ಯ ಸರಕಾರ ನಿಯಂತ್ರಣ ಹೇರಿ ಹಸಿರು ಪಟಾಕಿ ಮಾರಾಟ ಮಾಡಲು ತಿಳಿಸಿದ ಹಿನ್ನೆಲೆಯಲ್ಲಿ ಹೊಸಪೇಟೆ ವಿಜಯನಗರ ಕಾಲೇಜ್ ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಈ ಬಾರಿ ಪಟಾಕಿ ಸದ್ದು ಮತ್ತೆ ಕೇಳುವುದೇ? ಎಂಬ ಗೊಂದಲದ ಹಿಂದೆ ಪಟಾಕಿ ವ್ಯಾಪಾರಕ್ಕೆ ವರ್ತಕರು ತಯಾರಿ ನಡೆಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಈ ವರ್ಷ ಸಂಭ್ರಮದಿಂದ ದೀಪಾವಳಿ ಆಚರಣೆ ಮಾಡಲು ಪಟಾಕಿ ವ್ಯಾಪಾರಸ್ಥರು ಸುಮಾರು 15 ಪಟಾಕಿ ಅಂಗಡಿಗಳ ಮಾರಾಟ ಮಳಿಗೆ ಹಾಕಿದ್ದಾರೆ.
ನಗರದಲ್ಲಿ ಪ್ರತಿವರ್ಷ ನಗರದ ಒಳಭಾಗದಲ್ಲಿ ಅಂಗಡಿಗಳ ಮುಂಭಾಗದಲ್ಲಿ ಪಟಾಕಿಗಳ ಮಾರಾಟ ನಡೆಯುತ್ತಿತ್ತು. ಆದರೆ ಈಗ ಈ ವ್ಯವಸ್ಥೆಗೆ ಜಿಲ್ಲಾಡಳಿತ ಕಳೆದ ವರ್ಷಗಳಿಂದ ಕಡಿವಾಣ ಹಾಕಿ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿ,ಮಾದರಿ ರೂಪದಲ್ಲಿ ಮಾರಾಟಗಾರರಿಗೆ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. ಆದರೂ ಈ ವರ್ಷ ಸರ್ಕಾರದ ಆದೇಶ ಮತ್ತು ಮಾರ್ಗಸೂಜಿ ಹಿನ್ನೆಲೆಯಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಸುರಕ್ಷತೆಗೆ ಮತ್ತು ನಗರದ ಜನಕ್ಕೆ ಯಾವುದೇ ತೊಂದರೆ ಯಾಗದಂತೆ ವರ್ತಕರು ಮಾರಟ ಮಡಬೇಕು ಮತ್ತು ಸರ್ಕಾರದ ಮಾರ್ಗಸೂಜಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಕಳೆದ ವರ್ಷ ಮಳಿಗೆ ಹಾಕಲಾಗಿದ್ದ ಮತ್ತು ಈ ವರ್ಷ ಪರವಾನಿಗೆ ಪಡೆದಿರುವ ನವಬೃಂದಾವನ ಎಂಟರ್ಪ್ರೈಸಸ್, ಶ್ರೀಸಿದ್ಧಿವಿನಾಯಕ ಎಂಟರ್ಪ್ರೈಸಸ್, ಶ್ರೀ ಗುರು ಎಂಟರ್ಪ್ರೈಸಸ್ ಹಾಗೂ ಭವಾನಿ ಎಂಟರ್ಪ್ರೈಸಸ್ ಹಾಗೂ ಎಬಿಆರ್, ಶ್ರೀನಿವಾಸ ಅಂಗಡಿಯ ಮಾಲೀಕರುಗಳಿಗೆ ಮುಂಚಿತವಾಗಿ ತಿಳಿಸಿ ಸುರಕ್ಷತೆಗೆ ಹೆಚ್ವಿನ ಗಮನ ಕೊಡಲು ಆದೇಶಿಸಿದ್ದಾರೆ.
ಸರ್ಕಾರ ನ.1 ರಿಂದ 17 ರವರೆಗೆ ಮಾರಾಟ ಮಾಡಲು ತಿಳಿಸಿದರೂ ಸಹ ಇಲ್ಲಿನ ವರ್ತಕರು ಕೇವಲ ದೀಪಾವಳಿ ಹಬ್ಬದ ಮೂರು ನಾಲ್ಕು ದಿನ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಕಡಿಮೆ ದರದಲ್ಲಿ ಮಾರಾಟ ಮಾಡಬೇಕು, ಜನರ ಉತ್ಸಾಹ, ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಾಗಿ ಗಮನ ಕೂಡಬೇಕು ಎಂಬುದು ನಾಗರೀಕರ ಆಸೆ. ಏಕೆಂದರೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ಅರಣ್ಯ ಜೈವಿಕ ಪರಿಸರ ಇಲಾಖೆಯ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ. ಈ ಕೇತ್ರದಲ್ಲಿ ಪರಿಸರಕ್ಕೆ ಮಾನ್ಯತೆ ನೀಡುವುದು ಜನರ ಮತ್ತು ವರ್ತಕರ ಅದ್ಯ ಕರ್ತವ್ಯ, ಈ ಪಟಾಕಿ ಅನೇಕ ರೀತಿಯಿಂದ ಪರಿಸರದ ಮೇಲೆ ಪ್ರಭಾವ ಬೀರುವುದರಿಂದ ಮತ್ತು ಸುರಕ್ಷಿತವಾಗಿರದ ಅನೇಕ ರೀತಿಯ ಪಟಾಕಿಗಳು ಅಪಘಾತಕ್ಕೆ ಈಡು ಮಾಡುವುದು. ಇದರ ಹಿನ್ನೆಲೆಯಲ್ಲಿ ಸಚಿವರು ಜಿಲ್ಲಾಡಳಿತಕ್ಕೆ ಆದೇಶ ನೀಡಬೇಕಾಗಿದೆ.
ಹೆಚ್ಚಾಗಿ ಪರಿಸರವನ್ನು ಹಾಳು ಮಾಡುವಂತಹ ಪಟಾಕಿ ಕಂಡರೆ ತಕ್ಷಣ ಪಟಾಕಿಗಳ ಮಾರಾಟ ನಿಲ್ಲಿಸಬೇಕು ಮತ್ತು ವರ್ತಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ವ್ಯವಸ್ಥೆ ಆಗಬೇಕು ಎಂದು ಹೊಸಪೇಟೆ ನಗರದ ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದಾರೆ. ದೀಪಾವಳಿ ದೃಷ್ಟಿಯಲ್ಲಿ ಜನರು ಹಬ್ಬವನ್ನು ದೀಪ ಹಚ್ಚುವುದರ ಮೂಲಕ ಸಿಹಿಯನ್ನು ಹಂಚುವುದರ ಮೂಲಕ ಮತ್ತು ಸುರಕ್ಷಿತವಾದ ಹಸಿರು ಪಟಾಕಿಯಿಂದ ದೀಪಾವಳಿಯನ್ನು ಆಚರಣೆ ಮಾಡಬೇಕು. ಸುರಕ್ಷಿತವಲ್ಲದ, ಪರಿಸರಕ್ಕೆ ಮಾರಕವಾದ ಪಟಾಕಿ ಮಾರಾಟ ವ್ಯವಸ್ಥೆ ಮುಂದಿನ ದಿನದಲ್ಲಿ ನಿಲ್ಲಬೇಕು ಎನ್ನುವ ಪರಿಸರ ಪ್ರೇಮಿಗಳ ಬಯಕೆಯನ್ನು ಸಚಿವರು ಮತ್ತು ಜಿಲ್ಲಾಡಳಿತ ನೆರವೇರಿಸಿ ಕೊಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಪರಿಸರ ಪ್ರೇಮಿಗಳು ಈ ವ್ಯವಸ್ಥೆಯ ಮೇಲೆ ಕಣ್ಣು ಹಾಕಿದ್ದು ಮುಂದಿನ ದಿನದಲ್ಲಿ ಪಟಾಕಿ ಮಾರಾಟ ನಿಲ್ಲುವುದು. ಅಲ್ಲದೆ ಹೊಸಪೇಟೆ ನಗರದಲ್ಲಿ ಪರಿಸರ ನಾಶವಾಗದಂತೆ ಸಮಾಜವನ್ನು ಕಲ್ಪಿಸುವ ನಿಟ್ಟಿನಲ್ಲಿ ಜನರು ಎದ್ದು ನಿಲ್ಲಬೇಕು. ಮತ್ತು ಸುರಕ್ಷಿತವಾಗಿ ಹಬ್ಬವನ್ನು ಆಚರಣೆ ಮಾಡಬೇಕು ಎಂಬ ಬಯಕೆ ಒಂದು ಕಡೆ ಎದ್ದು ನಿಂತಿದೆ.
ಮುಂಚಿತವಾಗಿ ಕ್ರಮಕೈಗೂಳ್ಳಬೇಕಾಗಿದೆ ಕಾಲೇಜು ಆವರಣದ ಪಟಾಕಿ ಅಂಗಡಿಗಳ ಮುಂಭಾಗದಲ್ಲಿ ಜಿಲ್ಲಾಡಳಿತ ಅಗ್ನಿಶಾಮಕದಳದಿಂದ ಸುರಕ್ಷತೆಕ್ಕಾಗಿ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು, ಮಾರಾಟಕ್ಕೆ ಸಮಯ ನಿಗದಿ ಮಾಡಬೇಕು ಹಾಗೂ ಹೆಚ್ಚಾಗಿ ಸುರಕ್ಷತಾ ನಾಮಪಲಕ ಹಾಕುವುದು ಕಡ್ಡಾಯ ಮಾಡಿ, ಮೂಕ ಪಶು ಪಕ್ಷಿಗಳಿಗೆ ಈ ಪಟಾಕಿಯಿಂದ ತೊಂದರೆಯಾಗದಂತೆ ಕಾಪಾಡಲು ವಸುಂಧರಾ ಮಿತ್ರರಿಗೆ ಮತ್ತು ಪರಿಸರ ಪೇಮಿಗಳಿಗೆ ಕಲ್ಪ ಮೀಡಿಯಾ ಹೌಸ್ ಮನವಿ ಮಾಡುತ್ತದೆ.
(ವರದಿ: ಮುರಳೀದರ್ ನಾಡಿಗೇರ್, ಹೊಸಪೇಟೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post