ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಪಿಎಲ್’ಡಿ ಬ್ಯಾಂಕ್ ವತಿಯಿಂದ ಗ್ರಾಹಕರಿಗೆ 1 ಕೋಟಿ ರೂ.ಗಳ ಸಾಲ ವಿತರಣೆ ಮಾಡಿದರು.
ಬ್ಯಾಂಕಿನಲ್ಲಿ ಇಂದು ನಡೆದ ಸಾಲ ವಿತರಣ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಮಾತೃಶ್ರೀ ಮಂಜುನಾಥ್, ರೈತರಿಗೆ ಕುರಿ ಸಾಕಾಣಿಕೆ, ಹೈನುಗಾರಿಕೆ, ದಾಳಿಂಬೆ, ಬಿಕ್ಕೆ, ಸಪೋಟ ಹಾಗೂ ಜಮೀನು ಅಭಿವೃದ್ದಿ ಬೆಳೆಗಳು ಸೇರಿದಂತೆ ರೈತರಿಗೆ 6 ಟ್ರಾಕ್ಟರ್ ಜೊತೆಗೆ ಉಪಕರಣಗಳನ್ನು ವಿತರಿಸಲಾಗುತ್ತಿದೆ ಎಂದರು.
ರೈತರಿಗೆ ಸರ್ಕಾರಿಂದ ಶೇ.3ರ ಬಡ್ಡಿದರದಲ್ಲಿ ವಿವಿದೋದ್ದೇಶಗಳ ಬಳಕೆಗೆ ಸಾಲ ನೀಡುತ್ತಿದ್ದು, ಈ ಬಾರಿ 2020-21 ನೆಯ ಸಾಲಿನಲ್ಲಿ ಶೇ.75 ಕ್ಕೂ ಹೆಚ್ಚು ವಸೂಲಾತಿಯನ್ನು ಅಧ್ಯಕ್ಷರ ನೇತೃತ್ವದಲ್ಲಿ ಮಾಡಲಾಗಿದೆ. ಜಿಲ್ಲೆಯಲ್ಲಿ ಎರಡನೆಯ ಸ್ಥಾನದಲ್ಲಿದ್ದು, ಈ ಬಾರಿ ಕೋವಿಡ್ ಕಾರಣ ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್‌ರವರು ನಮ್ಮ ಪಿಎಲ್’ಡಿ ಬ್ಯಾಂಕಿನ ವತಿಯಿಂದ ಅತಿ ಹೆಚ್ಚು ಸಾಲವನ್ನು ಸಹ ಮಂಜೂರು ಮಾಡಿದ್ದಾರೆ. ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಬ್ಯಾಂಕಿನ ನಿರ್ದೇಶಕರಾದ ಜಲ್ದೀರಪ್ಪ ಮಾತನಾಡಿ, ನಮ್ಮ ಬ್ಯಾಂಕಿನ ಅಧ್ಯಕ್ಷ ಮಾತೃಶ್ರೀ ಮಂಜುನಾಥ ಅವರು ಸರ್ಕಾರ ಘೋಷಣೆ ಮಾಡಿದ ಬಡ್ಡಿ ಮನ್ನಾ ಯೋಜನೆಡಿಯಲ್ಲಿ ಶೇ.75 ಕ್ಕೂ ಹೆಚ್ಚು ವಸೂಲಾತಿಯನ್ನು ಮಾಡಲಾಗಿದ್ದು, ಇದರಿಂದ ಈ ಭಾರಿ ನಮ್ಮ ಬ್ಯಾಂಕಿಗೆ ಹೆಚ್ಚು ಹಣ ಬಂದಿದ್ದು, ರೈತರಿಗೆ ಇನ್ನು ಹೆಚ್ಚಿನ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದರು.
ಶಿವಣ್ಣ, ನಾಗರಾಜ, ಜಗನ್ನಾಥ, ಚಿಗತನಹಳ್ಳಿ ಬಾಬು ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post