ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ತಾಲ್ಲೂಕಿನ ಜೋಗ ರಸ್ತೆಯ ಆಲಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ಉಷಾ ಎಂಬ ಯುವತಿ ರಸ್ತೆ ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿದ್ದಾಳೆ.
ಎದುರಿಂದ ವೇಗವಾಗಿ ಬಂದ ಕ್ರೂಸರ್ ಗಾಡಿಯನ್ನು ತಪ್ಪಿಸುವ ಭರದಲ್ಲಿ ಎದುರಿದ್ದ ಸ್ವಿಫ್ಟ್ ಡಿಜೈರ್ ಕಾರಿಗೆ ಜ್ಯೂಪಿಟರ್ ಸ್ಕೂಟರ್ ಡಿಕ್ಕಿ ಹೊಡೆದಿದೆ. ಕ್ರೂಸರ್ ಗಾಡಿ ಗದ್ದೆ ಸಮೀಪ ಹೊಕ್ಕಿದೆ.
ಹೆಲ್ಮೆಟ್ ಧರಿಸದ ಕಾರಣ ತಲೆ ತೀವ್ರವಾಗಿ ಡಾಂಬರ್ ರಸ್ತೆಗೆ ಬಡಿದ ಪರಿಣಾಮ ಯುವತಿ ಸಾವನ್ನಪ್ಪಿದ್ದಾಳೆ ಎಂಬ ಹೇಳಲಾಗಿದೆ.
ಸೊರಬದ ಹಚ್ಚೆ ಗ್ರಾಮದ ಉಷಾ ಸಾಗರದ ವಿನೋಬಾ ನಗರದ ನಿವಾಸಿಯಾಗಿದ್ದು ಸಿದ್ದಾಪುರ ದಲ್ಲಿ ಗ್ರಾಮ ಲೆಕ್ಕಿಗ ಹುದ್ದೆ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಯುವತಿ ಉಷಾ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಘಟನಾ ಸ್ಥಳಕ್ಕೆ ಸಾಗರ ಉಪವಿಭಾಗದ ಡಿವೈಎಸ್ಪಿ ವಿನಾಯಕ್ ಶೆಟ್ಟಿಗಾರ್ ಭೇಟಿ ನೀಡಿ ಪರಿಶೀಲಿಸಿದರು. ಘಟನಾ ಸ್ಥಳದಲ್ಲಿದ್ದ ಕ್ರೂಸರ್, ಸ್ವಿಫ್ಟ್ ಹಾಗೂ ಜ್ಯುಪಿಟರ್ ವಾಹನ ಮಹಜರ್ ನಡೆಸಲಾಯಿತು.
ಸಾಗರ ಗ್ರಾಮಾಂತರದ ಪಿಎಸ್’ಐ ಭರತ್ ಕುಮಾರ್, ತಾಳಗುಪ್ಪ ಉಪಠಾಣೆಯ ರಾಘವೇಂದ್ರ ಶೆಟ್ಟಿ, ಮಂಜು ವಿನಾಯಕ ಹಾಗೂ ಇತರ ಸಿಬ್ಬಂದಿ ಇದ್ದರು.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















