ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಈ ಹಿಂದೆ ಹಲವಾರು ಕಿರುಚಿತ್ರಗಳ ನಿರ್ದೇಶನ ಮಾಡಿದ್ದ ನಿರ್ದೇಶಕ ಪವನ್ ಕೃಷ್ಣರವರು ಬೆಳ್ಳಿತೆರೆಗೆ ನಿರ್ದೇಶಕನಾಗಿ ಕಾಲಿಡುತ್ತಿದ್ದಾರೆ.
ಅಂಗಾರ ಕಿರುಚಿತ್ರದ ಟ್ರೇಲರ್ ಬಿಡುಗಡೆಯ ನಂತರ ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಕರಾವಳಿಯ ಖ್ಯಾತ ಸಂಗೀತ ನಿರ್ದೇಶಕ ಉತ್ತಮ್ ಸಾರಂಗ್ ಸಂಗೀತ ಸಂಯೋಜನೆಯಲ್ಲಿದ್ದಾರೆ. ಮತ್ತದೇ ಸಸ್ಪೆನ್ಸ್ ಕಥೆಯೊಂದಿಗೆ ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಲವ್ ಸಬ್ಜೆಕ್ಟ್’ನೊಂದಿಗೆ ಚಿತ್ರತಂಡ ಸಜ್ಜಾಗುತ್ತಿದ್ದು ಚಿತ್ರಕ್ಕೆ ನಾಯಕಿ ಹಾಗೂ ಸಹಕಲಾವಿದರ ಹುಡುಕಾಟದಲ್ಲಿದೆ.
ಚಿತ್ರದಲ್ಲಿ ಮಜಾಭಾರತ ಖ್ಯಾತಿಯ ಮಂಜು ಪಾವಗಡ, ಕೋಟಿಗೊಬ್ಬ-3, ಪಂಟ, ಬೀಗ ಚಿತ್ರಗಳ ಖ್ಯಾತಿಯ ಸೈಯದ್ ಇರ್ಪಾನ್ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಜನವರಿಯಲ್ಲಿ ಶಿವಮೊಗ್ಗ, ತೀರ್ಥಹಳ್ಳಿಯ ಸುತ್ತಮುತ್ತ ಚಿತ್ರೀಕರಣ ನಡೆಸುವ ತಯಾರಿಯಲ್ಲಿ ಚಿತ್ರತಂಡ ತೊಡಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post