No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಹಾವೇರಿ

ಗ್ರಾಮ ಪಂಚಾಯ್ತಿ ಚುನಾವಣೆ ಕಾರ್ಯಕರ್ತರ ಚುನಾವಣೆ: ಸಚಿವ ಬಿ.ಸಿ. ಪಾಟೀಲ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 1, 2020
in ಹಾವೇರಿ
0
ಹಿರೇಕೆರೂರು ಸೀಲ್’ಡೌನ್ ಮಾಡಲು ಸಚಿವ ಬಿ.ಸಿ. ಪಾಟೀಲ್ ಮನವಿ

File Image

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಹಾವೇರಿ: ಗ್ರಾಮಪಂಚಾಯಿತಿಗಳು ಪ್ರಸಕ್ತ ಬಹಳ ಶಕ್ತಿಯುತವಾಗಿವೆ. ಗ್ರಾಮ ಪಂಚಾಯಿತಿ ಚುನಾವಣೆ ಎನ್ನುವುದು ಕಾರ್ಯಕರ್ತರ ಚುನಾವಣೆಯಾಗಿದೆ. ಕಾರ್ಯಕರ್ತರಿಗೆಂದೇ ಗ್ರಾಮಪಂಚಾಯಿತಿ ಚುನಾವಣೆಯಿದ್ದು, ಕಾರ್ಯಕರ್ತರಿಗೆ ಶಕ್ತಿ ನೀಡುವ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ಕಮಲ ಪಕ್ಷವನ್ನು ಅರಳಿಸಲು ಗ್ರಾಮ ಸ್ವರಾಜ್ಯ ಸಮಾವೇಶವನ್ನು ರಾಜ್ಯಾದ್ಯಂತ ಆಯೋಜಿಸಲಾಗಿದೆ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಮತಕ್ಷೇತ್ರ ಹಿರೇಕೆರೂರು ರಾಣೆಬೇನ್ನೂರು ಬ್ಯಾಡಗಿ ಸೇರಿದಂತೆ ವಿವಿದೆಡೆ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.


ಬಿಜೆಪಿ ಎಂದೂ ವಿಭಾಗವಾಗಿಲ್ಲ. ದಲಿತ ನಾಯಕರು ರಾಷ್ಟ್ರಪತಿಯಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತ ಪ್ರಧಾನಿಯಾಗಿದ್ದಾರೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಎಲೆ ಮರೆ ಕಾಯಿಗಳನ್ನು ಗುರುತಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿರುವುದಕ್ಕೆ ಇತ್ತೀಚೆಗೆ ರಾಜ್ಯಸಭಾ ಚುನಾವಣೆಗೆ ಆಯ್ಕೆ ಮಾಡಿದ ಅಭ್ಯರ್ಥಿಗಳೇ ಸಾಕ್ಷಿ ಎಂದರು.

ಹಣಬಲ ತೋಳ್ಬಲದಿಂದ ಚುನಾವಣೆ ಗೆಲ್ಲದೇ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ಜನಪರ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಮೂಲಕ ಅಭಿವೃದ್ಧಿಯ ಮೂಲಮಂತ್ರದೊಂದಿಗೆ ಗ್ರಾಮಪಂಚಾಯಿತಿ ಚುನಾವಣೆಯನ್ನು ಗೆಲ್ಲಲು ಕಾರ್ಯಕರ್ತರು ಮುಂದಾಗಬೇಕೆಂದು ಕರೆ ನೀಡಿದರು.


ಬಿಜೆಪಿಗೆ ಸೇರಿ ನಾನು ಇಂದಿಗೆ 1 ವರ್ಷ 16 ದಿನಗಳಾಗಿವೆ. ಕಳೆದ ವರ್ಷ ಉಪಚುನಾವಣೆಯ ಪ್ರಚಾರದಲ್ಲಿದ್ದೆ. ಗ್ರಾಮ ಪಂಚಾಯಿತಿ ಚುನಾವಣೆಗಾಗಿ 6 ಬೂತ್ ಗಳನ್ನಾಗಿ ವಿಂಗಡಿಸಿ ಪ್ರತಿಯೊಂದು ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಗ್ರಾಮ ಸ್ವಾರಾಜ್ಯ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ಗ್ರಾಪಂ ಎನ್ನುವುದು ಪಕ್ಷಾತೀತ. ಗ್ರಾಪಂಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿಕಾರಗಳನ್ನು ನೀಡಿದ್ದು, ಗ್ರಾಮಾಭಿವೃದ್ಧಿಯ ಶಕ್ತಿಯ ನೀಡಿದೆ. ರಾಷ್ಟ್ರಪತಿ ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಪ್ರಯತ್ನ ನಡೆಯುತ್ತಿದೆ. ಎರಡು ಹಂತದಲ್ಲಿ ಚುನಾವಣೆ ಘೋಷಿಸಲಾಗಿದ್ದು, ಹಿರೇಕೆರೂರಿನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಯುತ್ತಿರುವ ಸಂದರ್ಭದಲ್ಲಿ ಆಯೋಗ ಚುನಾವಣೆ ಘೋಷಿಸಿರುವುದು ಶುಭಸಂಕೇತವಾಗಿದೆ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಹಲವಾರು ನೆರೆ, ಕೋವಿಡ್, ಬರದಂತಹ ಸಂಕಷ್ಟಗಳು ಎದುರಾದವು. ಈ ಎಲ್ಲಾ ಸಂಕಷ್ಟಗಳನ್ನು ಪರಿಹರಿಸಿ ರಾಜ್ಯದಲ್ಲಿ ಸಮರ್ಥಆಡಳಿತ ನೀಡಿದ್ದಾರೆ. ರಾಜ್ಯ ಸರ್ಕಾರ 1610 ಕೋ ರೂ. ಗಳನ್ನು ಕೋವಿಡ್ ಸಂಕಷ್ಟಕ್ಕೆ ಸರ್ಕಾರ ಘೋಷಿಸಿ, ಹೂವುಹಣ್ಣು ತರಕಾರಿ ಬೆಳೆದ ರೈತರಿಗೆ ಪರಿಹಾರ ಘೋಷಿಸಿದೆ. ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್ ನಿಯಮ ಪ್ರಕಾರ ನೆರೆ ಸಂಕಷ್ಟದಲ್ಲಿ ನೆರವು ನೀಡಿ, ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರೈತ ತನ್ನ ಬೆಳೆಯನ್ನು ಎಪಿಎಂಸಿ ಸೇರಿದಂತೆ ಎಲ್ಲಿ ಬೇಕಾದರೂ ಮಾರಾಟ ಮಾಡುವ ಪೂರ್ಣ ಹಕ್ಕನ್ನು ನೀಡಿದೆ ಎಂದರು.

ಇದಕ್ಕೆ ವಿರೋಧ ಪಕ್ಷಗಳು ಅಪಪ್ರಚಾರ ನಡೆಸಿದವು. ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ಅನುಕೂಲವನ್ನು ಕಲ್ಪಿಸಲಾಗಿದೆ. ಮನಮನೋಹನ್ ಸಿಂಗ್ ಅವರೇ ಹಿಂದೆ ಈ ಕಾಯಿದೆಗಳಿಗೆ ತಿದ್ದುಪಡಿ ತರಲು ಬಯಸಿದ್ದರು. ಈಗ ಬಿಜೆಪಿ ಸರ್ಕಾರ ಕಾಯಿದೆಗಳಿಗೆ ತಿದ್ದುಪಡಿ ತಂದರೆ ಕಾಂಗ್ರೆಸ್ ವಿರೋಧಿಸುತ್ತಿರುವುದೇಕೆ? ರೈತನ ಸ್ವಾತಂತ್ರ್ಯವನ್ನು ಪ್ರಶ್ನಿಸುವ ವಿಪಕ್ಷಗಳು ರೈತನ ಪರವಾಗಿ ಇರದೇ ದಳ್ಳಾಳಿಗಳ ಪರವಾಗಿದೆ ಎಂದು ಟೀಕಿಸಿದರು.

ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಹಿಳಾ ಮಕ್ಕಳ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ್ ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ, ಅಣ್ಣಾಸಾಹೆಬ ಜೋಲ್ಲೆ, ಶಾಸಕರಾದ ವಿರೂಪಾಕ್ಷಪ್ಪಾ ಬಳ್ಳಾರಿ ಅರುಣಕುಮಾರ ಪೂರ್ಜಾ, ವಿಧಾನ ಪರಿಷತ್ ಸದ್ಯಸ ಆರ್. ಶಂಕರ್ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಯುವ ಮೊರ್ಚಾ ಅಧ್ಯಕ್ಷ ಸಂದೀಪ್, ಸಿದ್ದರಾಜ ಕಲಕೋಟಿ ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: B C PatilBayalu Seeme NewsGrama Panchayat ElectionHaveriKannada News WebsiteKoppalLatest News KannadaMinisterಕೊಪ್ಪಳಗ್ರಾಮ ಪಂಚಾಯಿತಿ ಚುನಾವಣೆಬಿಜೆಪಿಹಾವೇರಿ
Share197Tweet123Send
Previous Post

ಲಂಚ ಪಡೆಯವ ವೇಳೆ ಮೊಳಕಾಲ್ಮೂರು ತಹಶೀಲ್ದಾರ್ ಎಸಿಬಿ ಬಲೆಗೆ

Next Post

ಗಮನಿಸಿ! ಕುವೆಂಪು ವಿವಿ ಸ್ನಾತಕೋತ್ತರ ಕೋರ್ಸ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಯಾಗಿದೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮಾರ್ಚ್ 28ರಂದು ಕುವೆಂಪು ವಿವಿ ಘಟಿಕೋತ್ಸವ

ಗಮನಿಸಿ! ಕುವೆಂಪು ವಿವಿ ಸ್ನಾತಕೋತ್ತರ ಕೋರ್ಸ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಯಾಗಿದೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಮುಂದಿನ ದಿನಗಳಲ್ಲಿ ಪೇಸ್ ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ: ಕೆ.ಎಸ್. ಈಶ್ವರಪ್ಪ ಆಶಯ

ಮುಂದಿನ ದಿನಗಳಲ್ಲಿ ಪೇಸ್ ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ: ಕೆ.ಎಸ್. ಈಶ್ವರಪ್ಪ ಆಶಯ

April 10, 2026
ಖಾಲಿ ಹುದ್ದೆ ಭರ್ತಿ ಮಾಡದೇ ಯುವ ಜನತೆಗೆ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ NSUI ಪ್ರತಿಭಟನೆ 

ಖಾಲಿ ಹುದ್ದೆ ಭರ್ತಿ ಮಾಡದೇ ಯುವ ಜನತೆಗೆ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ NSUI ಪ್ರತಿಭಟನೆ 

April 10, 2026
ಪಿಯುಸಿ ರಿಸಲ್ಟ್ | ಆಳ್ವಾಸ್ ಐತಿಹಾಸಿಕ ಸಾಧನೆ | ಒಂದರಿಂದ ಹತ್ತರೊಳಗೆ 95 ವಿದ್ಯಾರ್ಥಿಗಳು

ಪಿಯುಸಿ ರಿಸಲ್ಟ್ | ಆಳ್ವಾಸ್ ಐತಿಹಾಸಿಕ ಸಾಧನೆ | ಒಂದರಿಂದ ಹತ್ತರೊಳಗೆ 95 ವಿದ್ಯಾರ್ಥಿಗಳು

April 10, 2026
ಪಿಯುಸಿ ಫಲಿತಾಂಶ | ಶಕ್ತಿ ಪಿಯು ಕಾಲೇಜಿನ ಮೌಲ್ಯ ಕರುಣಾಕರ ಶೆಟ್ಟಿ (ವಿಜ್ಞಾನ), ಶ್ರೀವಿಷ್ಣು (ವಾಣಿಜ್ಯ) ಕಾಲೇಜಿಗೆ ಪ್ರಥಮ

ಪಿಯುಸಿ ಫಲಿತಾಂಶ | ಶಕ್ತಿ ಪಿಯು ಕಾಲೇಜಿನ ಮೌಲ್ಯ ಕರುಣಾಕರ ಶೆಟ್ಟಿ (ವಿಜ್ಞಾನ), ಶ್ರೀವಿಷ್ಣು (ವಾಣಿಜ್ಯ) ಕಾಲೇಜಿಗೆ ಪ್ರಥಮ

April 10, 2026
ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ | ವಿವಿಧ ಕಾಮಗಾರಿಗಳಿಗೆ ಶಾಸಕ ಚನ್ನಬಸಪ್ಪ ಚಾಲನೆ

ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ | ವಿವಿಧ ಕಾಮಗಾರಿಗಳಿಗೆ ಶಾಸಕ ಚನ್ನಬಸಪ್ಪ ಚಾಲನೆ

April 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL