ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಾರ್ತಿಕ ಹುಣ್ಣಿಮೆ ಅಂಗವಾಗಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಧಾತ್ರಿ ಹವನ ನಡೆಸಲಾಯಿತು.
ಕಾರ್ತಿಕ ಹುಣ್ಣಿಮೆ ಅಂಗವಾಗಿ ನಿನ್ನೆ ಮುಂಜಾನೆಯಿಂದಲೇ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶ್ರೀಮಠದ ಪ್ರಾಂಗಣದಲ್ಲಿ ಧಾತ್ರಿ, ತುಳಸಿ ಗಿಡವನ್ನು ಪ್ರತಿಷ್ಠಾಪನೆ ಮಾಡಿ ಧಾತ್ರಿ ಹವನ ನಡೆಸಲಾಯಿತು. ವೇ.ಬ್ರ. ಗೋಪಾಲಕೃಷ್ಣ ಆಚಾರ್ ಅವರ ನೇತೃತ್ವದಲ್ಲಿ ಹೋಮ, ವಿಶೇಷ ಪೂಜೆಗಳು ನಡೆದವು.
ಅಧ್ಯಕ್ಷ ಮುರಳೀಧರ ತಂತ್ರಿ, ನಿರಂಜನ್ ಆಚಾರ್, ಸತ್ಯನಾರಾಯಣಾಚಾರ್, ರಮಾಕಾಂತ್, ಶ್ರೀಪತಿ, ಅನಂತಾಚಾರ್ ನಾರಾಯಣಾಚಾರ್, ಹಲವು ಪಂಡಿತರುಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















