ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಚಾಕು ತೋರಿಸಿ ಲಾರಿ ಚಾಲಕನನ್ನು ಸುಲಿಗೆ ಮಾಡಿದ ದುಷ್ಕರ್ಮಿಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿರುವ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.
ಚಳ್ಳಕೆರೆ ನಗರದ ಕೆಇಬಿ ಮಂದೆ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಚಿತ್ರದುರ್ಗದಿಂದ ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿಗೆ ಹೋಗಬೇಕಿತ್ತು. ಚಳ್ಳಕೆರೆಯ ಕೆಇಬಿ ಕ್ರಾಸ್’ನಲ್ಲಿ ಚಾಲಕ ಲಾರಿಯ ಒಳಗೆ ನಿದ್ರಿಸುತ್ತಿದ್ದಾಗ ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಚಿತ್ರದುರ್ಗದ ಇಮ್ರಾನ್, ಮಹಾಮದ್ ನೂರುಲ್ಲಾ ಎನ್ನುವ ಇಬ್ಬರು ಲಾರಿ ಒಳಗೆ ಬಂದು ಲಾರಿ ಚಾಲಕನಿಗೆ ಚಾಕು ತೋರಿಸಿ ಹಣ ಒಡವೆ ಕೊಡು ಎಂದು ಹೆದರಿಸಿ ಚಾಲಕ ಬಳಿ ಇದ್ದ 7000 ಸಾವಿರ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಲಾರಿ ಚಾಲಕ ತತಕ್ಷಣವೇ ಪೋಲೀಸ್ ಠಾಣೆಗೆ ಬಂದು ಸುಲಿಗೆ ವಿಚಾರವಾಗಿ ದೂರು ದಾಖಲಿಸಿದ್ದನು.
ದೂರಿನ ಹಿನ್ನೆಲೆಯಲ್ಲಿ ಎಸ್’ಪಿ ಜಿ. ರಾಧಿಕಾ, ಹೆಚ್ಚುವರಿ ಪೋಲೀಸ್ ಅಧೀಕ್ಷಕ ಮಹಲಿಂಗ ಬಿ. ನಂದಗಾವಿ ಹಾಗೂ ಚಳ್ಳಕೆರೆ ಡಿವೈಎಸ್ಪಿ ಕೆ.ವಿ. ಶ್ರೀಧರ ಇವರ ಮಾರ್ಗದಲ್ಲಿ ಪಿಎಸ್‌ಐ ರಾಘವೇಂದ್ರ ನೇತೃತ್ವದಲ್ಲಿ ತಂಡ ಕಾರ್ಯ ಪ್ರವೃತ್ತರಾಗಿ ಸುಲಿಗೆ ಕೋರರನ್ನು ಹಿಡಿದು, ಅವರಿಂದ ಚಿತ್ರದುರ್ಗದಿಂದ ಕಳ್ಳತನ ಮಾಡಿಕೊಂಡ ಬಂದ ಒಂದು ದ್ವಿಚಕ್ರ ವಾಹನ. ಸುಲಿಗೆ ಮಾಡಿದ್ದ 7000 ರೂ. ಹಣ ಕೃತ್ಯಕ್ಕೆ ಬಳಸಿದ ಒಂದು ಚಾಕು, 2 ಮೊಬೈಲ್ ಫೋನ್ ವಶಕ್ಕೆ ಪಡೆದು ಅಪರಾಧಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಂಡದಲ್ಲಿ ಎಎಸ್’ಐ ಎಚ್. ರವಿಕುಮಾರ್ ಪೇದೆಗಳಾದ ಮಂಜಪ್ಪ, ಎಚ್. ಶಿವಾನಂದ, ತಿಪ್ಪೇರುದ್ರ ಸ್ವಾಮಿ, ವೆಂಕಟೇಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post