ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭದ್ರಾವತಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ 2020ನೇ ಸಾಲಿನ ಎನ್.ಸಿ.ವಿ.ಟಿ ಮತ್ತು ರಾಜ್ಯ ವೃತ್ತಿ ಶಿಕ್ಷಣ ಪರಿಷತ್ತಿನ ಅಡಿಯಲ್ಲಿ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಡಿಸೆಂಬರ್-12 ರವರೆಗೆ ವಿಸ್ತರಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಪ್ರಾಚಾರ್ಯರು, ಟರ್ನರ್-34, ವೆಲ್ಡರ್-108, ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್-42, ಮೆಕ್ಯಾನಿಸ್ಟ್-8, ಮೋಟರ್ ವೇಹಿಕಲ್ ಮೆಕ್ಯಾನಿಕ್-4, ಮೆಕ್ಯಾನಿಕ್ ಡಿಸೆಲ್ ಇಂಜಿನ್-16, ಕಾರ್ಪೇಂಟರ್-24, ಫೌಂಡ್ರಿಮನ್-24 ಹಾಗೂ ಡ್ರಾಟ್ಸ್ಮನ್-20 ಸ್ಥಾನಗಳಿಗೆ ದಿ: 12.12.2020 ರೊಳಗೆ ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ಪರಿಶೀಲಿಸಿಕೊಂಡು ಉಳಿದ ಸ್ಥಾನಗಳಿಗೆ ಮೆರಿಟ್ ಆಧಾರ ಮೇರೆಗೆ ಪ್ರಾಚಾರ್ಯರ ಹಂತದಲ್ಲಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post