ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಪ್ರತಿ ವರ್ಷದಂತೆಯೇ ಈ ವರ್ಷವೂ ಸಹ 2019-20ರ ಸಾಲಿನ ಬಳ್ಳಾರಿ-ಕೊಪ್ಪಳ ವಲಯ ಸುರಕ್ಷತಾ ದಿನವನ್ನು ಇಂದು ಜೆಎಸ್’ಡಬ್ಲ್ಯೂ ಆವರಣದಲ್ಲಿ ಆಚರಿಸಲಾಯಿತು.
ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಮತ್ತು ಸುರಕ್ಷತಾ ದಿನಾಚರಣೆ ಯ ನಂತರ ಬಳ್ಳಾರಿ ಕೊಪ್ಪಳ ವಲಯ ಸುರಕ್ಷತಾ ದಿನಾಚರಣೆ ಸಮಿತಿಯ ವತಿಯಿಂದ ಸುರಕ್ಷತಾ ದಿನಾಚರಣೆ ಆಚರಣೆ ಮಾಡುವ ಪದ್ದತಿ 2002 ನೆಯ ಸಾಲಿನಿಂದ ನಡೆದುಕೊಂಡು ಬಂದಿದೆ.
ಬಿ.ಕೆ.ರೈಸ್ ಹಿನ್ನೆಲೆ
2000 ರಿಂದ 2002ರ ಮಧ್ಯದಲ್ಲಿ ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶವಾದ ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಗುಲ್ಬರ್ಗ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಅನೇಕ ಹೊಸ ಹೊಸ ಯೋಜನೆಯಡಿಯಲ್ಲಿ ವಿದ್ಯುತ್, ಉಕ್ಕು ಮತ್ತು ಕಬ್ಬಿಣ, ಸಕ್ಕರೆ, ಸಿಮೆಂಟ್ ವಲಯದಲ್ಲಿ ಸಣ್ಣ ಮತ್ತು ಮಧ್ಯಮ ವಲಯದ ಕಾರ್ಖಾನೆಗಳು ಪ್ರಾರಂಭವಾದವು. ಅವುಗಳಲ್ಲಿ ಮುಖ್ಯವಾಗಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ , ಜಿಂದಾಲ್ ಸ್ಟೀಲ್ ಲಿಮಿಟೆಡ್, ಆರ್.ಟಿ.ಪಿ.ಎಸ್, ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್, ಎಸಿ ಸಿ ಸಿಮೆಂಟ್, ಎಂಎಸ್’ಪಿಎಲ್ ಬಿಎಂಎಂ ಇಸ್ಪಾತ್, ಬಿಟಿಪಿಎಸ್, ಎಸ್’ಎಲ್’ಆರ್ ಅಂತಹ ಅನೇಕ ಕಾರ್ಖಾನೆಗಳು ಮತ್ತು ಸಣ್ಣ ಪುಟ್ಟ ಕಾರ್ಖಾನೆಗಳು ಹಂತಹಂತವಾಗಿ ಪ್ರಾರಂಭವಾಗಿ ಉತ್ಪಾದನೆಯನ್ನು ಮುಖ್ಯ ಗುರಿಯಾಗಿ ಮಾಡಿಕೊಂಡು ಕಾರ್ಖಾನೆ ಮಾಲಿಕರು ಕೆಲಸಗಾರರ ಸುರಕ್ಷತೆಗೆ ಹೆಚ್ಚಿನ ಗಮನ ಕೊಡದೆ ಉತ್ಪಾದನೆಯನ್ನು ಮಾಡುತ್ತಿದ್ದರು.ಆ ಸಮಯದಲ್ಲಿ ಕಾರ್ಖಾನೆಗಳಲ್ಲಿ ಮಾರಣಾಂತಿಕ ಅಪಘಾತಗಳು ಜೊತೆಗೆ ಅನೇಕ ದೂಡ್ಡ ಅಪಘಾತಗಳು ಸಂಭವಿಸಿದವು. ಅದು ಅಲ್ಲದೆ ಆಗ ಗುಲ್ಬರ್ಗಾದಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು ಮತ್ತು ಪದೆ ಪದೆ ಅಧಿಕಾರಿಗಳು ಕಾರ್ಖಾಗಳಿಗೆ ಭೇಟಿ ನೀಡಲು ಸಹ ಬೇಸರವಾಗುತ್ತಿತ್ತು. ಏಕೆಂದರೆ ಆಗ ಈ ಭಾಗದ ರಸ್ತೆಗಳ ಪರಿಸ್ಥಿತಿಯು ಸಹ ಉತ್ತಮವಾಗಿ ಇರಲಿಲ್ಲ ಮತ್ತು ಅಧಿಕಾರಿಗಳ ಭೇಟಿಯು ಸಹ ಆಗುತ್ತಿರಲಿಲ್ಲ. ಈ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು 2002 ನೆಯ ಸಾಲಿನಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿ ಡಿ.ಸಿ. ಜಗದೀಶ್ ಮತ್ತು ನವನೀತ್ ಮೋಹನ್ ಮತ್ತು ಮೇಲ್ವಿಚಾರಕಿ ಭಾರತಿ ಎಂ ಕಾರ್ಖಾನೆಗಳ ಆಡಳಿತ ಮಂಡಳಿಯ ಸಹಾಕಾರದೊಂದಿಗೆ ಮಾತನಾಡಿ ಗುಲ್ಬರ್ಗಾ ರೀಜನಲ್ ಸೇಫ್ಟಿ ಕಮಿಟಿ ಯನ್ನು ಪ್ರಾರಂಭಿಸಿದರು. ಮತ್ತು ಆ ಕಮಿಟಿಯಲ್ಲಿ ಈ ಕೆಳಕಂಡ ಅಂಶಗಳನ್ನು ಮಾತನಾಡಿ ಸೂಚನೆಯನ್ನು ಹೊರಡಿಸಿದರು. ಅದರಲ್ಲಿ ಮುಖ್ಯವಾಗಿ
1. ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಬೇಕಾದ ಅವ್ಯಕತೆಯನ್ನು ಅಧಿಕಾರಿಗಳಿಗೆ ಒದಗಿಸುವುದು
2. ಕಾರ್ಖಾನೆಗಳಲ್ಲಿ ಸುರಕ್ಷತಾ ಅಧಿಕಾರಿಗಳನ್ನು ನೇಮಕ ಮಾಡುವುದು
3. ಸುರಕ್ಷತಾ ತರಭೇತಿ ನೀಡುವುದು
4. ಸುರಕ್ಷತಾ ಸಾಧನ ಸಾಮಾಗ್ರಿಗಳನ್ನು ಕಾಲ ಕಾಲಕ್ಕೆ ಕಾರ್ಮಿಕರಿಗೆ ಒದಗಿಸುವುದು
5. ಸುರಕ್ಷತಾ ಆಡಿಟ್ ಮಾಡುವುದು
6. ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೈಗಾರಿಕೆಗಳಲ್ಲಿ ಹೆಚ್ಚು ಹೆಚ್ಚು ಸ್ಪರ್ಧೆಗಳನ್ನು ಮೂಡಿಸುವುದು.
ಹೀಗೆ ಹಲವಾರು ಕಾರ್ಯಕ್ರಮ ಹಾಕಿಕೊಂಡು ಗುಲ್ಬರ್ಗಾ ರೀಜನಲ್ ಸೇಫ್ಟಿ ಕಮಿಟಿ ಪ್ರಾರಂಭಿಸಿದರು. ಆ ಸಮಿತಿಯ ಅಡಿಯಲ್ಲಿ 4 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಕಮಿಟಿಯು ಗುಲ್ಬರ್ಗ ಮತ್ತು ಒಳ್ಳಾರಿ ಭಾಗದಲ್ಲಿ ಎರಡು ಸಮಿತಿಗಳಾಗಿ ಮಾಡಲಾಯಿತು.
1) ಗುಲ್ಬರ್ಗ ರೀಜನಲ್ ಸೇಫ್ಟಿ ಕಮಿಟಿ (ಗ್ರೀಸ್ಡ್)
2) ಬಳ್ಳಾರಿ-ಕೊಪ್ಪಳ ವಲಯ ಸುರಕ್ಷತಾ ಸಮಿತಿ (ಬಿಕೆ ರೈಸ್)
ಕರ್ನಾಟಕ ಸರ್ಕಾರದ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿಗಳು ಮತ್ತು ಕಾರ್ಖಾನೆಗಳ ಅಧಿಕಾರಿಗಳ ಮುಂಚೂಣಿಯಲ್ಲಿ ಪ್ರತಿ ವರುಷ ಒಂದೂಂದು ಕಾರ್ಖಾನೆಯು ಜವಾಬ್ದಾರಿ ತೆಗೆದುಕೊಂಡು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದೆ.
ಈ ಸಂಧರ್ಭದಲ್ಲಿ ಆಗಿನಿಂದಲೂ ಇಲ್ಲಿಯವರೆಗೆ ಸತತವಾಗಿ ಈ ಸಮಿತಿಯಲ್ಲಿ ಅನೇಕ ಮಾರ್ಗದರ್ಶನ ನೀಡಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆ ಯಶಸ್ವಿಯಾಗಲು ಕಾರಣಕರ್ತರು ಎಂದರೆ ರಾಜ್ಯ ಕಾರ್ಖಾನೆ ಮತ್ತು ಬಾಯ್ಲರ್’ಗಳ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಅವರು ಈ ಭಾಗದಲ್ಲಿ ಸತತವಾಗಿ ಸುಮಾರು 5 ರಿಂದ 6 ವರ್ಷಗಳ ಕಾಲ ಮಾಡಿದ ಸುಧಾರಣೆ ಮತ್ತು ಜವಾಬ್ದಾರಿಯುತವಾದ ಕೆಲಸವನ್ನು ಇಂದಿಗೂ ಈ ಭಾಗದ ಕಾರ್ಖಾನೆಗಳ ಆಡಳಿತ ಮಂಡಳಿಗೆ ಮತ್ತು ಕೆಲಸಗಾರರಿಗೆ ಪೂರಕವಾಗಿದೆ. ಜೊತೆಗೆ ಪ್ರತಿ ವರ್ಷ ಈ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇಲಾಖೆಯ ಸಹಾಯಕ ನಿರ್ದೇಶಕರು, ಜಂಟಿ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳ ಪಾತ್ರ ಬಹಳ ದೊಡ್ಡ ಪ್ರಮಾಣದಲ್ಲಿ ಮುಂದುವರೆಯಿತು. ಪ್ರತಿ ವರ್ಷವು ಅನೇಕ ತರಬೇತಿ ಕಾರ್ಯಕ್ರಮಗಳು, ಕಾರ್ಖಾನೆಗಳಿಗೆ ಅಧಿಕಾರಿಗಳ ಭೇಟಿ ಮತ್ತು ಸ್ಪರ್ಧೆಗಳನ್ನು ಆಯೋಜಿಸಿ ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ಉತ್ತೇಜನ ಮತ್ತು ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ಹಾಕಿಕೊಂಡು ಬರಲಾಯಿತು. ಅದರಂತೆ ಎಲ್ಲಾ ಕಾರ್ಖಾನೆಗಳ ಆಡಳಿತ ಮಂಡಳಿಯು ಸಹ ಉತ್ಪಾದನೆ ಜೊತೆಗೆ ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬಂದ ಕಾರಣದಿಂದ ಇಂದು ಎಲ್ಲಾ ಕಾರ್ಖಾನೆಯ ಅಪಘಾತ ಪ್ರಮಾಣ ಕಡಿಮೆಯಾಗಿದೆ ಮತ್ತು ಸುರಕ್ಷತೆಯಲ್ಲಿ ಹೆಚ್ಚಾಗಿ ತಿಳುವಳಿಕೆಯು ಬಂದಿದೆ.
ಯಶಸ್ವಿಯಾಗಿ ಸುಮಾರು 19 ವರ್ಷಗಳ ಕಾಲ ಈ ಸಮಿತಿಯು ಸುರಕ್ಷತಾ ದಿನಾಚರಣೆ ಆಚರಣೆ ಮಾಡುತ್ತಾ ಬಂದಿದೆ. ಇದಕ್ಕಾಗಿ ಇಲಾಖೆಯ ಅಧಿಕಾರಿ ವರ್ಗದವರರಿಗೆ ಸಮಿತಿಯ ಎಲ್ಲಾ ಸದಸ್ಯರಿಗೆ ಮತ್ತು ಕಾರ್ಖಾನೆಗಳ ಆಡಳಿತ ಮಂಡಳಿಗೆ ಧನ್ಯವಾದಗಳು. ಈಗ ಈ ಬಿಕೆರೈಸ್ ಸಮಿತಿಯ ಕಾರ್ಖಾನೆಗಳ ಇಲಾಖೆಯಿಂದ ಬಳ್ಳಾರಿ ವಲಯದ ಜಂಟಿ ನಿರ್ದೇಶಕರಾದ ರವೀಂದ್ರನಾಥ್ ರಾಥೋಡ್ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
2019-20 ನೆಯ ಸಾಲಿನಲ್ಲಿ ತೋರಣಗಲ್’ನಲ್ಲಿ ಸ್ಥಾಪಿತವಾಗಿರುವ ಪ್ರಾಕ್ಸೇರ್ ಇಂಡಿಯಾ ಲಿಮಿಟೆಡ್ ಆತಿಥ್ಯದಲ್ಲಿ ಇಂದು ಜಿಂದಾಲ್ ಕಾರ್ಖಾನೆಯ ಆವರಣದಲ್ಲಿ ಬಳ್ಳಾರಿ-ಕೊಪ್ಪಳ ವಲಯದ ಮೂಲಕ 49 ನೇ ಸುರಕ್ಷತಾ ದಿನಾಚರಣೆಯ ಈ ವರ್ಷದ ಸಮಾರೋಪ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಬಳ್ಳಾರಿ ವಲಯದ ಕಾರ್ಖಾನೆಗಳ ಜಂಟಿ ನಿರ್ದೇಶಕರು ಮತ್ತು ಬಿಕೆರೈಸ್ ಸಮಿತಿಯ ಅಧ್ಯಕ್ಷ ರವೀಂದ್ರನಾಥ್ ರಾಥೋಡ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಜೆ.ಎಸ್. ಡಬ್ಲ್ಯೂ ಕಾರ್ಖಾನೆಯ ಪ್ರೆಸಿಡೆಂಟ್ ರಾಜಶೇಖರ ಪಟ್ಟಣಶೆಟ್ಟಿ ಮತ್ತು ಪ್ರಾಕ್ಸೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಪ್ಲಾಂಟ್ ಹೆಡ್ ಮತ್ತು ಕಾರ್ಯಾಚರಣೆ ಮುಖ್ಯಸ್ಥ ಅನಿರುದ್ ಗೋರೂಟೆ ಅವರುಗಳ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ಜರುಗಿತು.
ಕೋವಿಡ್ ಮಹಾಮಾರಿಯಲ್ಲಿ ಮಡಿದವರ ಶಾಂತಿಗಾಗಿ ಒಂದು ನಿಮಿಷದ ಮೌನವನ್ನು ನಡೆಸಲಾಯಿತು. ನಂತರ ಸುರಕ್ಷತಾ ವಿಭಾಗದಲ್ಲಿ ಸಾಧನೆ ಮಾಡಿದ ಅಧಿಕಾರಗಳನ್ನು ಸನ್ಮಾನಿಸಲಾಯಿತು. 49 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಆಸೀನರಾದ ಎಲ್ಲಾ ಅತಿಥಿ ಮತ್ತು ಅಧ್ಯಕ್ಷರಿಂದ ಸುರಕ್ಷತಾ ಸುಧಾರಣೆ, ಅಭಿವೃದ್ಧಿ, ಸರ್ಕಾರದ ಯೋಜನೆಗಳು ಮತ್ತು ಮುಂದಿನ ಬಿಕೆ ರೈಸ್ ಯೋಜನೆಗಳ ಬಗ್ಗೆ ಅಧ್ಯಕ್ಷರು ಮತ್ತು ಅತಿಥಿಗಳು ತಮ್ಮ ತಮ್ಮ ಭಾಷಣದಲ್ಲಿ ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಗಲು ಕಾರಣರಾದ ಬಳ್ಳಾರಿ ಕೊಪ್ಪಳ ಜಿಲ್ಲೆಯ ಎಲ್ಲಾ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ಭಾಗವಹಿಸಿದ ಎಲ್ಲಾರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.
ಅಚ್ಚುಮೆಚ್ಚಿನ ಮತ್ತು ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜಿಸಿದ ಪ್ರಾಕ್ಸೇರ್ ಕಾರ್ಖಾನೆಯ ಆಡಳಿತ ಮಂಡಳಿಗೆ ಮತ್ತು ಸುಂದರವಾಗಿ ಕೋವಿಡ್ ಮಾರ್ಗದರ್ಶನದಂತೆ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದ ಜೆ ಎಸ್ ಡಬ್ಲ್ಯೂ ಕಾರ್ಖಾನೆಯ ಆಡಳಿತ ಮಂಡಳಿ ಗೆ ಬಿಕೆ ರೈಸ್ ಸಮಿತಿಯಿಂದ ಧನ್ಯವಾದಗಳನ್ನು ತಿಳಿಸಲಾಯಿತು.
(ವರದಿ: ಮುರುಳೀಧರ್ ನಾಡಿಗೇರ್, ಕೊಪ್ಪಳ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post