ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಬನಶಂಕರಿ ಮೊದಲನೆಯ ಹಂತದ ಶಂಕರ್ ನಾಗ್ ವೃತ್ತದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಯಶಸ್ವಿಯಾಯಿತು.
ಶಂಕರ್ ನಾಗ್ ಪ್ರತಿಮೆಯ ಎದುರಿನಲ್ಲಿ ನಾಗವರದ ಮುಖ್ಯರಸ್ತೆಯಲ್ಲಿ ಇರುವ ಮೆಡಿಸ್ಕೋಪ್ ರಕ್ತನಿಧಿ ಕೇಂದ್ರ ಹಾಗೂ ಬನಶಂಕರಿ ಮೊದಲನೆಯ ಹಂತದ ಭಾಸ್ಕರ್ ಮತ್ತು ಗೆಳಯರ ತಂಡ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 16 ಯೂನಿಟ್ ರಕ್ತ ಸಂಗ್ರಹವಾಗಿದೆ.ರಕ್ತದಾನ ಶಿಬಿರದಲ್ಲಿ 350 ಎಂಎಲ್’ನ ಹಾಗೇ ಶಿಬಿರದಲ್ಲಿ ಭಾಗವಹಿಸಿದ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಲಾಯಿತು. ಮೆಡಿಸ್ಕೋಪ್ ರಕ್ತನಿಧಿ ಕೇಂದ್ರದ ಅರ್ಜುನ್, ರಾಮಕೃಷ್ಣ, ರಾಧಾ, ರಂಜಿತ ಮತ್ತು ಪಾಷಾ ಅವರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ರಕ್ತ ದಾನಿಗಳನ್ನು ತಪಾಸಣೆ ನಡೆಸಿ ರಕ್ತ ಸಂಗ್ರಹಿಸಿದರು.
ಮೆಡಿಸ್ಕೋಪ್ ರಕ್ತನಿಧಿ ಕೇಂದ್ರದ ಅರ್ಜುನ್ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠ ದಾನ. ರಕ್ತವನ್ನು ನೀಡುವುದರಿಂದ ಇನ್ನೊಬ್ಬರ ಜೀವವನ್ನು ಉಳಿಸಬಹುದು. ಆ ತೃಪ್ತಿಯೂ ನಮಗೆ ಸಿಗುತ್ತದೆ ಎಂದರು.
ರಕ್ತದಾನ ಮಾಡಿದ ಎಲ್ಲರಿಗೂ ರಕ್ತ ನಿಧಿ ಕೇಂದ್ರದಿಂದ ಪ್ರಮಾಣಪತ್ರ ನೀಡಲಾಯಿತು.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post