ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಿರಿಯೂರು: ಭಾರತ ಕಂಡ ಅಪರೂಪದ ಜನ ನಾಯಕ, ಬಿಜೆಪಿ ಹಿರಿಯ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿರವರು ಭಾರತದ ರಾಜಕಾರಣದಲ್ಲಿ ಬರೀ ಅಜಾತ ಶತ್ರುವಲ್ಲ ಅವರೊಬ್ಬ ವಿಶ್ವ ಮಾನವರಾಗಿ ಇಂದಿಗೂ ರಾರಾಜಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಎಂ.ಎಸ್. ರಾಘವೇಂದ್ರ ಅಭಿಪ್ರಾಯಪಟ್ಟರು.
ಶಾಸಕರ ಕಾರ್ಯಾಲಯದಲ್ಲಿ ನಡೆದ ವಾಜಪೇಯಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಜಪೇಯಿ ಅವರ ಆಡಳಿತ ಭಾರತಕ್ಕೊಂದು ಹೊಸ ದಿಕ್ಕು ಮೂಡಿದ್ದು, ಸ್ವಚ್ಛ ಆಡಳಿತವನ್ನು ಅನೇಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಮುನ್ನೆಡಿಸದ ಕೀರ್ತಿ ವಾಜಪೇಯಿಗೆ ಸಲ್ಲುತ್ತದೆ ಎಂದರು.
ಪೊಕ್ರಾನ್ ಅಣು ಪರೀಕ್ಷೆ ನಡೆಸಿ ಇಡೀ ವಿಶ್ವಕ್ಕೆ ಭಾರತದ ಶಕ್ತಿಯನ್ನು ಸಾರಿದರು, ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಇರಬೇಕು ಎಂದು ತೋರಿಸಿಕೊಟ್ಟ ಮಹಾನ್ ನಾಯಕ ಎಂದರು.
ಬಿಜೆಪಿಯ ಜಿಲ್ಲಾ ಸಹ ವಕ್ತಾರ ಕೇಶವ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿಯು ಅಟಲ್ ಜಿ ಅವರ ಜನ್ಮ ದಿನಾಚರಣೆಯನ್ನು ಸುಶಾಸನ ದಿವಸ್ (ಉತ್ತಮ ಆಡಳಿತ ದಿನ)ವನ್ನಾಗಿ ಆಚರಿಸಲಾಗುತ್ತಿದ್ದೆ. ಅವರ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸ್ವಚ್ಛ ನಿಷ್ಪಾಕ್ಷಪಾತವಾದ ಅನೇಕ ಯೋಜನೆಗಳು ಸಾಕಾರಗೊಂಡವು ಅವರ ಆಡಳಿತದಲ್ಲಿ ಮಾದರಿಯಲ್ಲೇ ಮೋದಿಜೀ ದೇಶವನ್ನು ಮುನ್ನಡೆಸುತ್ತಿರುವುದು ಕಾಣಬಹುದಾಗಿದೆ ಎಂದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ ವಾಜಪೇಯಿರವರ ಆಡಳಿತ ಹಾಗೂ ವ್ಯಕ್ತಿತ್ವದಿಂದ ಸಹಜವಾಗಿ ಅಜಾತ ಶತೃ ಎನಿಸಿದರೇ, ಅವರ ಹಾಗೂ ಅಡ್ವಾಣಿಯವರ ಗರಡಿಯಲ್ಲಿ ಬೆಳೆದ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ವಾಜಪೇಯಿರವರ ಜನ್ಮ ದಿನದಂದೇ ದೇಶದ ರೈತರೊಂದಿಗೆ ಸಂವಾದ ನಡೆಸಿ ಅವರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುತ್ತಿರುವುದು ಮೋದಿಜೀ ಅಭಿನಂದನಾರ್ಹರು ಎಂದರು.
ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರುಗಳಾದ ಅರಳೀಕೆರೆ ತಿಪ್ಪೇಸ್ವಾಮಿ, ಡಿ. ಗಂಗಾಧರ್ ಮಾತನಾಡಿದರು.
ಬಿಜೆಪಿ ಮಾಜಿ ಅಧ್ಯಕ್ಷರಾದ ಎಂ.ವಿ. ಹರ್ಷ, ಹರೀಶ್, ಬಿಜೆಪಿ ಖಜಾಂಚಿ ವೆಂಕಟೇಶ್, ನಗರಸಭೆ ಸದಸ್ಯ ಪಲ್ಲವ ಬಾಲಕೃಷ್ಣ, ಮಹಿಪಾಲ್, ಶೋಭಾ, ರೈತ ಮುಖಂಡರಾದ ತಿಮ್ಮಾರೆಡ್ಡಿ, ರಂಗಸ್ವಾಮಿ, ರಾಮಚಂದ್ರ, ಜವರೇಶ್, ಕೃಷ್ಣಮೂರ್ತಿ ಶಾಸಕರ ಆಪ್ತ ಕಾರ್ಯದರ್ಶಿ ನಿರಂಜನ್ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post