No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Thursday, August 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಕಾವೇರಿ ವಿಚಾರ: ರಹಸ್ಯ ಸಂಧಾನಕ್ಕೆ ನಾರಿಮನ್ ಸಲಹೆ

kalpa News by kalpa News
September 15, 2016
in Army
0
Share on FacebookShare on TwitterShare on WhatsApp
ಬೆಂಗಳೂರು, ಸೆ.15: ಕಾವೇರಿ ನದಿಯಿಂದ ತಮಿಳುನಾಡಿಗೆ ಸೆ.20ರವರೆಗೆ ನೀರು ಬಿಡುಗಡೆ ಮಾಡಿ, ನಂತರ ಪುನಃ ನೀರು ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ ನೀಡದಂತೆ ನೋಡಿಕೊಳ್ಳಲು ರಹಸ್ಯ ಸಂಧಾನ ಪ್ರಕ್ರಿಯೆ ನಡೆಸುವಂತೆ ರಾಜ್ಯದ ಪರ ವಕೀಲ ನಾರಿಮನ್ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿರುವ ಅಂಶ ಬೆಳಕಿಗೆ ಬಂದಿದೆ.
ವಾಸ್ತವವಾಗಿ ಸಂಕಷ್ಟ ಸೂತ್ರ ಅಸ್ತಿತ್ವದಲ್ಲಿ ಇಲ್ಲದೆ ಇದ್ದರೂ ಕರ್ನಾಟಕ ನದಿ ಪಾತ್ರದಲ್ಲಿ ಲಭ್ಯವಾಗುವ ಒಟ್ಟು ನೀರಿನಲ್ಲಿ ನ್ಯಾಯಮಂಡಳಿ ನಿಗದಿ ಮಾಡಿದ ಪ್ರಮಾಣದಲ್ಲಿ ನೀರು ಹಂಚಿಕೆ ಮಾಡಿಕೊಳ್ಳಬೇಕು ಎಂದು ತಮಿಳುನಾಡು ಪಟ್ಟು ಹಿಡಿದಿದ್ದು,ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಕೂಡ  ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಸೆ.20 ರ ತನಕ ಮಾತ್ರವಲ್ಲ, ನಂತರವೂ ನೀರು ಬಿಡುಗಡೆಗೆ ಸುಪ್ರೀಕೋರ್ಟ್ ಆದೇಶ ನೀಡಿದರೆ ಕರ್ನಾಟಕದ ಕಾವೇರಿ ನದಿ ಪಾತ್ರ ಭೀಕರ ಕ್ಷಾಮಕ್ಕೆ ಗುರಿಯಾಗುತ್ತದೆ. ಹೀಗಾಗಿ ಸೆ.20 ರವರೆಗೆ ಮಾತ್ರ ನೀರು ಬಿಡುಗಡೆ ಮಾಡಿ ಅಷ್ಟರೊಳಗಾಗಿ ಉನ್ನತ ಮಟ್ಟದಲ್ಲಿ ರಹಸ್ಯ ಸಂಧಾನ ನಡೆಸಿಕೊಂಡು ಸಮಸ್ಯೆಯಿಂದ ಪಾರಾಗುವಂತೆ ನಾರಿಮನ್ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಕಾವೇರಿ ನ್ಯಾಯಮಂಡಳಿ 2007 ರಲ್ಲಿ ನೀಡಿದ ಅಂತಿಮ ಆದೇಶದ ಪ್ರಕಾರ ನಾಲ್ಕು ರಾಜ್ಯಗಳನ್ನು ಒಳಗೊಂಡ ಕಾವೇರಿ ನದಿ ಪಾತ್ರದಲ್ಲಿ 740 ಟಿಎಂಸಿ ನೀರು ಲಭ್ಯವಾಗುತ್ತದೆ. ಈ ಪೈಕಿ ಕರ್ನಾಟಕದಲ್ಲಿ 462 ಟಿಎಂಸಿ ನೀರು ದಕ್ಕುತ್ತದೆ.
ಈ ಪೈಕಿ  ಕರ್ನಾಟಕ 270 ಟಿಎಂಸಿ ನೀರನ್ನು ಇಟ್ಟುಕೊಂಡು ತಮಿಳುನಾಡಿಗೆ 192 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು.
ಅಂದರೆ ಲಭ್ಯವಾಗುವ ನೀರಿನಲ್ಲಿ ಶೇ.57 ರಷ್ಟು ಪ್ರಮಾಣದ ನೀರು ಕರ್ನಾಟಕಕ್ಕೆ ಸಿಗುವಂತಾಗಬೇಕು.ಶೇ.43 ರಷ್ಟು ನೀರು ತಮಿಳುನಾಡಿಗೆ ಲಭ್ಯವಾಗಬೇಕು.ಹೀಗಾಗಿ ಈ ಬಾರಿ ಕರ್ನಾಟಕದಲ್ಲಿ 120 ಟಿಎಂಸಿಯಷ್ಟು ನೀರು ಸಿಕ್ಕಿದೆ ಎಂದರೂ ಅದರಲ್ಲೇ ಶೇ.43 ರಷ್ಟು ಪ್ರಮಾಣದ ನೀರು ತನಗೆ ದೊರೆಯಬೇಕು ಎಂಬುದು ತಮಿಳುನಾಡು ಸರ್ಕಾರದ ವಾದ.
ಇದನ್ನು ಲೆಕ್ಕ ಹಾಕಿದರೂ ತಮಿಳುನಾಡಿಗೆ ಕರ್ನಾಟಕದಿಂದ 49 ಟಿಎಂಸಿಯಷ್ಟು ನೀರು ಬಿಡುಗಡೆಯಾಗಬೇಕು. ಹೀಗಾಗಿ ಸೆ.20 ರಂದು ಸುಪ್ರೀಂಕೋರ್ಟ್ ಮುಂದೆ ವಿಚಾರಣೆ ನಡೆಯುವುದಕ್ಕಿಂತ ಮುನ್ನ ರಹಸ್ಯ ಸಂಧಾನ ನಡೆಸಿಕೊಂಡು ಕಂಟಕದಿಂದ ಪಾರಾಗಿ ಎಂಬುದು

ನಾರಿಮನ್ ಸಲಹೆ

ಈ ಸಂದರ್ಭದಲ್ಲಿ ಉನ್ನತ ಮಟ್ಟದಲ್ಲೇ ರಹಸ್ಯ ಸಂಧಾನ ನಡೆಯಬೇಕು. ಸೆ.20 ರ ನಂತರ ಮತ್ತೆ ನೀರು ಬಿಡುಗಡೆಗೆ ತಮಿಳುನಾಡು ಪಟ್ಟು ಹಿಡಿಯದಂತೆ ನೋಡಿಕೊಳ್ಳಬೇಕು ಎಂದು ನಾರಿಮನ್ ಸಲಹೆಗೆ ದೇವೇಗೌಡರೂ ಸಹಮತ ವ್ಯಕ್ತಪಡಿಸಿದ್ದು ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಂಧಾನ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿದೆ ಎಂದು ಇವೇ ಮೂಲಗಳು ಹೇಳಿವೆ.
ನಾರಿಮನ್ ಸಲಹೆಯ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡ ಕೂಡಾ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದು ಒಕ್ಕೂಟ ವ್ಯವಸ್ಥೆಯಲ್ಲಿ ನೀರು ಬಿಡುಗಡೆ ಮಾಡುವುದಿಲ್ಲ ಎನ್ನಲು ಸಾಧ್ಯವೇ ಇಲ್ಲ.  ಹಾಗೇನಾದರೂ ಹೇಳಿದರೆ ಕೇಂದ್ರ ಸರ್ಕಾರ ಸೈನ್ಯವನ್ನು ಕಳುಹಿಸಿ ನೀರು ಬಿಡುಗಡೆಯಾಗುವಂತೆ ನೋಡಿಕೊಳ್ಳುತ್ತದೆ. ಇದೇ ರೀತಿ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡಿದರೂ ಸಮಸ್ಯೆ ಪರಿಹಾರವಾಗುವುದಿಲ್ಲ. ಮೇಲ್ನೋಟಕ್ಕೆ ಪ್ರಧಾನಿ ಮೋದಿ ಮಧ್ಯೆ ಪ್ರವೇಶಿಸಬೇಕೆಂದು ಹೇಳಿದರೂ ಬಹಿರಂಗವಾಗಿ ಅವರೂ ಬರಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.
ಕಾವೇರಿ ನದಿ ನೀರಿನ ವಿಷಯದಲ್ಲಿ 2007 ರ ಟ್ರಿಬ್ಯುನಲ್ ಆದೇಶಕ್ಕೆ ಅಂಟಿಕೊಂಡಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮನ ಒಲಿಸುವುದು ಈ ಸಂಧಾನ ಪ್ರಕ್ರಿಯೆಯ ಬಹುಮುಖ್ಯ ಅಜೆಂಡಾ (ಕಾರ್ಯಸೂಚಿ) ಎಂದಿರುವ ಮೂಲಗಳು,ರಹಸ್ಯ ಸಂಧಾನದ ಸ್ವರೂಪ ಯಾವ ಮಟ್ಟದಲ್ಲಿರಲಿದೆ ಎಂಬುದನ್ನು ಹೇಳಲು ನಿರಾಕರಿಸಿವೆ.
ಈ ಮಧ್ಯೆ ರಾಜ್ಯದ ಬಿಜೆಪಿ ನಾಯಕರೂ ಕೇಂದ್ರ ಸಚಿವ ಅನಂತಕುಮಾರ್ ಅವರನ್ನು  ಸಂಪರ್ಕಿಸಿ ಮಾತುಕತೆ ನಡೆಸಿದ್ದು ಅವರು ಕೂಡಾ ಉನ್ನತ ಮಟ್ಟದ ರಹಸ್ಯ ಸಂಧಾನಕ್ಕೆ ತೆರೆಮರೆಯ ಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕಾವೇರಿ ವಿಚಾರ: ಪ್ರಧಾನಿ ಮಧ್ಯಪ್ರವೇಶಕ್ಕೆ ಅವಕಾಶವಿದೆ: ದಿನೇಶ್ ಗುಂಡೂರಾವ್

Next Post

ಜಲಾಶಯ ಸ್ಥಿತಿ-ಗತಿ ಬಗ್ಗೆ ಅಧ್ಯಯನ ನಡೆಸಲು ಕಾನೂನು ತಜ್ಞರ ಸಲಹೆ

kalpa News

kalpa News

Next Post

ಜಲಾಶಯ ಸ್ಥಿತಿ-ಗತಿ ಬಗ್ಗೆ ಅಧ್ಯಯನ ನಡೆಸಲು ಕಾನೂನು ತಜ್ಞರ ಸಲಹೆ

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL