ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಪ್ರತಿ ಕುಟುಂಬದಲ್ಲೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಯಲ್ಲಿ ಸಂಸ್ಕಾರವನ್ನು ನೀಡುವುದೂ ಸಹ ಮುಖ್ಯ ಶಾಸಕ ಬಿ.ಕೆ. ಸಂಗಮೇಶ್ವರ ಕರೆ ನೀಡಿದರು.
ಉಜ್ಜನೀಪುರದ ಶ್ರೀಉಜ್ಜಿನಿ ಮಾರಿಯಮ್ಮ ದೇವಾಲಯದ ಆವರಣದಲ್ಲಿ ಸಂಕ್ರಾಂತಿ ಸ್ಪೋರ್ಟ್ಸ್ ಶೀರ್ಷಿಕೆಯಡಿ ಯುವಕರು ಹಾಗೂ ಮುಖಂಡರು ಆಯೋಜಿಸಿದ್ದ ಹಲವು ಸ್ಥಳೀಯ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುವಕರು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಈ ರೀತಿಯಾದ ಸಾಂಸ್ಕೃತಿಕ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆ ಕೌಶಲ್ಯಗಳನ್ನು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ಮಕ್ಕಳಿಗೆ ಉನ್ನತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಕೊಡಬೇಕು. ಶಿಕ್ಷಣವೆಂಬ ಶಕ್ತಿ ಮಾತ್ರವೇ ಒಂದು ಮನೆ ಒಂದು ಕುಟುಂಬ ಒಂದು ಸಮಾಜ ಒಂದು ರಾಷ್ಟ್ರವನ್ನು ಬದಲಾಯಿಸಬಹುದೇ ವಿನಾ ಬೇರೆ ಯಾವ ಶಕ್ತಿಯು ಸಹ ಈ ಸಮಾಜವನ್ನು ಬದಲಾಯಿಸಲು ಸಾಧ್ಯವಿಲ್ಲ. ಶಿಕ್ಷಣಕ್ಕೆ ಸಮನಾದದ್ದು ಯಾವುದೂ ಇಲ್ಲ. ಹೀಗಾಗಿ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವುದು ಪ್ರತಿಯೋರ್ವ ಪೋಷಕರ ಆದ್ಯ ಕರ್ತವ್ಯ ಎಂದರು.
ಸಾಂಸ್ಕೃತಿಕ ವೇದಿಕೆಯಲ್ಲಿ ಅತ್ಯುತ್ತಮ ಕಲೆಯನ್ನು ಪ್ರದರ್ಶಿಸಿದ ಕಲಾವಿದರಿಗೆ ಪ್ರೋತ್ಸಾಹಿಸುವ ಮುಖೇನ ಕಲಾವಿದರಿಗೆ ಶುಭ ಹಾರೈಸಿದರು.
ಯುವ ಮುಖಂಡ ಬಿ.ಎಸ್. ಗಣೇಶ್, ಟೀಕು ಮಂಜುನಾಥ್, ಮಾಜಿ ನಗರಸಭಾ ಸದಸ್ಯರಾದ ವೆಂಕಟಯ್ಯ ದಲಿತ ಮುಖಂಡರಾದ ರಾಜು, ಸುಬ್ಬಯ್ಯ ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post