ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರವಾದರೆ ಸಾಲದು. ಪ್ರತಿಯೊಬ್ಬರ ಮನಸ್ಸೂ ರಾಮ ಮಂದಿರವಾಗಬೇಕು ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.
ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸಂಸ್ಥಾಪಕರಾದ ಅವರು ಅಂತಾರಾಷ್ಟ್ರೀಯ ವಿಶ್ವ ಹಿಂದೂ ಪರಿಷತ್ತಿನ ಅಯೋಧ್ಯೆಯ ರಾಮಮಂದಿರದ ಮುಖ್ಯ ಪ್ರಭಾರಿಯಾದ ಅಲೋಕ್ ಕುಮಾರ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಲ್ಲಿ ಭೇಟಿಯಾಗಿ ಅಲ್ಲಿ ಪ್ರಭು ಅವರು ಬರೆದ ಗ್ಲೋರಿಯಸ್ ಭಾರತ್ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ಕೇವಲ ರಾಮಮಂದಿರ ಆದರೆ ಸಾಲದು. ಪ್ರತಿ ಮನೆ ಹಾಗೂ ಪ್ರತಿಯೊಬ್ಬರ ಮನವೂ ರಾಮ ಮಂದಿರ ಆಗಬೇಕು. ಅಯೋಧ್ಯೆಯ ರಾಮಮಂದಿರ ರಾಮಭಕ್ತರ ಇಟ್ಟಿಗೆಯಿಂದ ಅವರ ಭಕ್ತಿ ಹಾಗೂ ಪರಿಶ್ರಮದಿಂದ ಆಗುತ್ತದೆ. ಆದರೆ ಆ ಅಯೋಧ್ಯಾ ಎಂಬ ಸ್ಥಳದ ರಾಮ ಕೇವಲ ದಶರಥ ರಾಮ ಮಾತ್ರವಾಗದೆ ನಮ್ಮ ದೇಶಕ್ಕೆ ಹಾಗೂ ಇಡೀ ಜಗತ್ತಿಗೆ ಆದರ್ಶ ರಾಮನಾಗಬೇಕು ಎಂದರು.
ಇಲ್ಲಿ ರಾಮನೆಂದರೆ ಧರ್ಮ. ಅಂತಹ ಧರ್ಮದ ಮಕ್ಕಳಾದ ನಾವೆಲ್ಲರೂ ಆ ಧರ್ಮಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು. ನಾವು ಪ್ರಪಂಚದ ಎಲ್ಲರ ಹಾಗೂ ಪ್ರಕೃಯ ಹಿತವನ್ನು ಬಯಸಬೇಕು. ಆ ಮೂಲಕ ರಾಮನ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ರೀತಿಯಲ್ಲಿ ರಾಮನೆಂಬ ಜ್ಯೋತಿ ಅಯೋಧ್ಯೆ ಮಾತ್ರವಲ್ಲ ಪ್ರತಿ ಹೃದಯದಲ್ಲೂ ಬೆಳಗುವಂತಾಗಬೇಕು. ಆ ಮೂಲಕ ಇಡೀ ಜಗತ್ತೇ ಒಂದು ಅಯೋಧ್ಯೆಯಾಗಬೇಕು. ಅದಕ್ಕೋಸ್ಕರ ನಾವೆಲ್ಲ ಪ್ರಯತ್ನ ಪಡಬೇಕು ಅನ್ನುವುದು ನಮ್ಮ ಅಭಿಪ್ರಾಯವಾಗಿತ್ತು. ಇದನ್ನ ಆಗು ಮಾಡಲು ನಮ್ಮ ಪ್ರಯತ್ನವಂತೂ ನಿರಂತರ ಇರುತ್ತದೆ ಎಂದರು.ಈ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್’ನ ವಿವಿಧ ಪದಾಧಿಕಾರಿಗಳಾದ ಅಚ್ಚುತ್ ಗೌಡ, ಶಿವರಾಜ್, ಅರುಣ್ ಕುಮಾರ್ ಹಾಗೂ ಕೇಂದ್ರ ಸರ್ಕಾರದ ಹಿಂದಿ ಸಲಾಹಕರ್ ಸಮಿತಿ ಸದಸ್ಯರಾದ ರಾಘವೇಂದ್ರ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post