ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೆಯ ವರ್ಷದ ಜನ್ಮದಿನದ ಪ್ರಯುಕ್ತ ಸೊರಬದಲ್ಲಿ ಯುವಾ ಬ್ರಿಗೇಡ್ ವತಿಯಿಂದ ಜೈ ಹಿಂದ್ ರನ್ ಎಂಬ ಮ್ಯಾರಥಾನ್ ಆಯೋಜಿಸಲಾಗಿದೆ.
ಅಂದು ಮುಂಜಾನೆ 6.15ಕ್ಕೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಿಂದ ಮುಖ್ಯರಸ್ತೆಯ ಮೂಲಕ ಶ್ರೀ ಸೀತಾರಾಮಚಂದ್ರ ವೃತ್ತ, ಪುರಸಭೆ, ಪದವಿ ಕಾಲೇಜು ವೃತ್ತದ ಮೂಲಕ ರಂಗ ಮಂದಿರದ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.
ಮ್ಯಾರಥಾನ್’ನಲ್ಲಿ ಭಾಗವಹಿಸಲು ಮೊದಲು ಬರುವ 100 ಜನರಿಗೆ ಮಾತ್ರ ಉಚಿತ ಟೀ ಶರ್ಟ್ ಕೊಡಲಾಗುತ್ತದೆ. ಸೊರಬ ಯುವಾ ಬ್ರಿಗೇಡ್-ಸೋದರಿ ನಿವೇದಿತಾ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post