ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಮೆಗ್ಗಾನ್ ಆಸ್ಪತ್ರೆ ವಿ.ವಿ.ಕೇಂದ್ರದಿಂದ ಸರಬರಾಜಾಗುವ ಪೀಡರ್ ಎಂಜಿಎಫ್-2ರಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಕೆಲಸ, ನಿರಂತರ ಜ್ಯೋತಿ ಕಾಮಗಾರಿಯಡಿಯಲ್ಲಿ ಎಂ.ಆರ್.ಎಸ್. ಫೀಡರ್-5 ಮತ್ತು ಫೀಡರ್-3 11 ಕೆ.ವಿ.ಮಾರ್ಗಮುಕ್ತತೆ ನೀಡುವ ಕಾಮಗಾರಿ ಹಿನ್ನೆಲೆಯಲ್ಲಿ ಜ.28 ಹಾಗೂ 29ರಂದು ನಗರದ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜ.28ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ:
ಕುವೆಂಪು ರಸ್ತೆ, ದುರ್ಗಿಗುಡಿ, ಜ್ಯೂವೆಲ್‌ರಾಕ್ ರಸ್ತೆ, ಮಿಷನ್ ಕಾಂಪೌಂಡ್, ಗೋಪಿ ಸರ್ಕಲ್, ಸವಾರ್‌ಲೈನ್ ರಸ್ತೆ, ಜೆಪಿಎನ್ ರಸ್ತೆ, ಎಲ್.ಎಲ್.ಆರ್.ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಜ.28ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ:
ಶಾಂತಿನಗರ, ರಾಗಿಗುಡ್ಡ, ಬೊಮ್ಮನಕಟ್ಟೆ ಎಬಿ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು
ಜ. 29 ರಂದು 10ರಿಂದ ಸಂಜೆ 5ರವರೆಗೆ:
ವಿದ್ಯಾನಗರ, ಗಣಪತಿ ಲೇಔಟ್, ಜಗದಾಂಬ ಬೀದಿ, ಸಂಗಪ್ಪ ಲೇಔಟ್, ಹೇಮಶ್ರೀ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಪುರಲೆ, ಚಿಕ್ಕಲ್, ಗುರುಪುರ, ವೆಂಕಟೇಶನಗರ, ಸಹ್ಯಾದ್ರಿ ಕಾಲೇಜ್, ಶಾಂತಮ್ಮ ಲೇಔಟ್, ಗುಡ್ಡೆಕಲ್, ಸುಬ್ಬಯ್ಯ ಮೆಡಿಕಲ್ ಕಾಲೇಜ್, ಜ್ಯೋತಿನಗರ, ವಡ್ಡಿನಕೊಪ್ಪ, ರಾಮಪ್ಪಲೇಔಟ್, ನಂಜಪ್ಪ ಲೇಔಟ್, ರಾಬರ್ಟ್ ಲೇಔಟ್, ಪ್ರಿಯಾಂಕ ಲೇಔಟ್, ಕಾಮತ್ ಲೇಔಟ್, ವಿದ್ಯಾಸಾಗರ್ ಹೈಟೆಕ್ ಲೇಔಟ್, ಹರಿಗೆ, ಮಲವಗೊಪ್ಪ, ಶುಗರ್ ಫ್ಯಾಕ್ಟರಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















