ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನವಾದ ಸ್ಟ್ರಾಂಡ್ ಅಪ್ ಕಾಮಿಡಿ ಆಡಿಷನ್ ಆಯೋಜಿಸಲಾಗಿದೆ ಎಂದು ಟಿವಿ ಭಾರತ್’ನ ಮುಖ್ಯಸ್ಥ ಆರ್.ಎಸ್. ಹಾಲಸ್ವಾಮಿ ಹೇಳಿದರು.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಟಿವಿ ಭಾರತ್ ಕೇಬಲ್ ವಾಹಿನಿ ಹಾಗೂ ಆರ್ನವ್ ಕ್ರಿಯೇಷನ್ ವತಿಯಿಂದ ಈ ಆಡಿಷನ್ ಆಯೋಜಿಸಲಾಗಿದೆ ಎಂದರು.
ಈ ಆಡಿಷನ್’ನಲ್ಲಿ ಭಾಗವಹಿಸಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಪಾಲ್ಗೊಳ್ಳುವವರು ವಾಟ್ಸಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ವಾಕ್ಚಾತುರ್ಯ ಪ್ರದರ್ಶನಕ್ಕೆ ಇದೊಂದು ಅದ್ಬುತ ವೇದಿಕೆಯಾಗಲಿದ್ದು, ಒಬ್ಬರಿಗೆ ಗರಿಷ್ಠ 5 ನಿಮಿಷದ ಅವಕಾಶ ನೀಡಲಾಗುವುದು. ಈ ಸಮಯದಲ್ಲಿ ತಮಗಿಷ್ಟ ಬಂದ ವಿಷಯದ ಕುರಿತು ಮಾತನಾಡಬಹುದು ಎಂದರು.
ಜೈಲ್ ರಸ್ತೆಯಲ್ಲಿರುವ ಟಿವಿ ಭಾರತ್ ಸ್ಟುಡಿಯೋದಲ್ಲಿ ಫೆ.13ರಂದು ಆಡಿಷನ್ ನಡೆಯಲಿದ್ದು, ಪಾಲ್ಗೊಂಡವರ ವಾಕ್ಚಾತುರ್ಯದ ಮೇಲೆ ಅಂತಿಮ ಸುತ್ತಿಗೆ 20 ಜನರನ್ನು ಆಯ್ಕೆ ಮಾಡಲಾಗುವುದು. ನಂತರ ಮತ್ತೆ 10 ಜನರನ್ನು ಫೈನಲ್ ರೌಂಡ್’ಗೆ ಆಯ್ಕೆ ಮಾಡಲಾಗುವುದು. ನಂತರ ಮತ್ತೆ 10 ಜನರನ್ನು ಫೈನಲ್ ರೌಂಡ್’ಗೆ ಆಯ್ಕೆ ಮಾಡಲಾಗುವುದು. ಈ ಅಂತಿಮ ಸುತ್ತು ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಅದರಲ್ಲಿ ಸೆಲೆಬ್ರಿಟಿ ಕಲಾವಿದರು ಒಬ್ಬರನ್ನು ಆಯ್ಕೆ ಮಾಡಿ ಅವರಿಗೆ ಮಲ್ನಾಡ್ ಕಾಮಿಡಿ ಕಿಂಗ್ ಪ್ರಶಸ್ತಿ ನೀಡಲಾಗುವುದು ಎಂದರು.
ಇನ್ನು, ಈ ಆಡಿಷನ್’ನಲ್ಲಿ ಪಾಲ್ಗೊಳ್ಳಲು ಯಾವುದೇ ವಯಸ್ಸಿನ ನಿರ್ಬಂಧ ಇರುವುದಿಲ್ಲ. ಆದರೆ, ಯಾವುದೇ ಜಾತಿ, ಲಿಂಗ, ಧರ್ಮ ಪಂಥಗಳ ಅವಹೇಳನ ಮಾಡುವಂತಿಲ್ಲ. ಯಾವುದೇ ಪಕ್ಷ ಸಂಘಟನೆ ವ್ಯಕ್ತಿಗಳ ಅವಹೇಳನ ಮಾಡುವಂತಿಲ್ಲ. ಅಶ್ಲೀಲ ಹಾಗೂ ಡಬ್ಬಲ್ ಮೀನಿಂಗ್ ಮಾತುಗಳಿಗೆ ಅವಕಾಶವಿಲ್ಲ. ಸಿನಿಮಾ ನಟರ ಮಿಮಿಕ್ರಿ ಮಾಡುವಂತಿಲ್ಲ. ಜ್ಯೂರಿಗಳ ತೀರ್ಮಾನವೇ ಅಂತಿಮವಾಗಿದೆ. ಸ್ಪರ್ಧೆಯ ವಿಜೇತರಿಗೆ ಟೈಟಲ್ ಹಾಗೂ ಪಾರಿತೋಷಕ ಮತ್ತು ಪ್ರಮಾಣಪತ್ರ ನೀಡಲಾಗುವುದು. ಆಡಿಷನ್ ಹಾಗೂ ಸೆಮಿಫೈನಲ್ ಮತ್ತು ಫೈನಲ್ ಹಂತಗಳು ಟಿವಿ ಭಾರತ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸೆಮಿಫೈನಲ್ ಹಂತಕ್ಕೆ ಬಂದವರು ಫೇಸ್’ಬುಕ್ ಪೇಜ್’ಗೆ ಎಂಟ್ರಿ ಪಡೆಯಲಿದ್ದಾರೆ. ಮಲೆನಾಡ ಪ್ರತಿಭೆಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಆಸಕ್ತರು 91 63666 39898 ನಂಬರ್’ಗೆ ಹೆಸರು, ವಿಳಾಸ ಸಹಿತ ಮಾಹಿತಿ ನೀಡಿ ನೋಂದಾವಣಿ ಮಾಡಿಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಬಪ್ಪು, ಕಾರ್ತಿಕ್ ಸೋಗಾನೆ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post