ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ತಾಲೂಕಿನ ದೇವರಮರಿಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಜಣ್ಣ (ಎಸ್‌ಟಿ), ಉಪಾಧ್ಯಕ್ಷೆಯಾಗಿ ಮಂಜಮ್ಮ (ಸಾಮಾನ್ಯ ವರ್ಗ) ಹಾಗೂ ಕಾಲುವೆಹಳ್ಳಿ ಗ್ರಾ.ಪಂ ಪಾಲಯ್ಯ (ಎಸ್‌ಟಿ) ಅಧ್ಯಕ್ಷರಾಗಿ, ಯಾದಲಗಟ್ಟೆ ಗ್ರಾಮದ ಲಕ್ಷ್ಮೀದೇವಿ (ಸಾಮಾನ್ಯ ವರ್ಗ) ಉಪಾಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.
ಮೀರಾಸಾಬಿಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಸಿ.ಮಂಜುನಾಥರೆಡ್ಡಿ (ಸಾಮಾನ್ಯ ವರ್ಗದ), ಉಪಾಧ್ಯಕ್ಷೆಯಾಗಿ ಗೌರಮ್ಮ (ಎಸ್‌ಸಿ ಮಹಿಳೆ) ಮತ್ತು ದೊಡ್ಡೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಗೌರಮ್ಮ (ಸಾಮಾನ್ಯ ವರ್ಗ ಮಹಿಳೆ) ಹಾಗೂ ಉಪಾಧ್ಯಕ್ಷೆಯಾಗಿ ತಿಪ್ಪಮ್ಮ (ಎಸ್‌ಟಿ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ. ಮಲ್ಲಿಕಾರ್ಜನ ತಿಳಿಸಿದ್ದಾರೆ.
ರಾಮಜೋಗಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಎನ್. ರಂಗಸ್ವಾಮಿ ಅವಿರೋಧ ಆಯ್ಕೆಯಾಗಿದ್ದು, ಮೀಸಲಾತಿ ಸಂಬಂಧವಾಗಿ ಗ್ರಾಮದ ವ್ಯಕ್ತಿಯೊಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಿಲ್ಲ ಎಂದು ಚುನಾವಣಾ ನೋಡೆಲ್ ಅಧಿಕಾರಿ ಮೋಹನ್‌ಕುಮಾರಿ ತಿಳಿಸಿದ್ದಾರೆ.
ದೊಡ್ಡಚೆಲ್ಲೂರು ಗ್ರಾಪಂನ ಎರಡೂ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಸಿದ್ದ ಕಾರಣ ಗ್ರಾಪಂ ಅಧ್ಯಕ್ಷೆಯಾಗಿ ಸುಮಾ ತಿಮ್ಮರಾಯ (ಎಸ್‌ಸಿ ಮಹಿಳೆ), ಉಪಾಧ್ಯಕ್ಷರಾಗಿ ಸಿ. ಪ್ರಸನ್ನಕುಮಾರ (ಸಾಮಾನ್ಯ ಪುರುಷ) ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಎಇಇ ವಿಜಯಭಾಸ್ಕರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಡಿಒ ಕೆಂಚಲಿಂಗಪ್ಪ, ಸಹಾಯಕ ಚುನಾವಣಾಧಿಕಾರಿ ಎಇ ರಾಜಣ್ಣ ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post