ಗಾಂಧಿನಗರ, ಸೆ.19: ಸಾಲು ಸಾಲು ವಿಧಾನಸಭಾ ಚುನಾವಣೆಯಲ್ಲು ಕೈ ಸುಟ್ಟುಕೊಳ್ಳುತ್ತಿರುವ ಕಾಂಗ್ರೆಸ್‌ಗೆ 2017ರ ಗುಜರಾತ್ ಚುನಾವಣೆಯಲ್ಲೂ ಸೋಲು ಖಚಿತ ಎಂಬ ಸಮೀಕ್ಷಾ ವರದಿ ಕಾಂಗ್ರೆಸ್ ವಲಯದಲ್ಲಿ ಆತಂಕ ಮೂಡಿಸಿದೆ.
2017ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೌಪ್ಯವಾಗಿ ನಡೆಸಿದ ಸಮೀಕ್ಷೆಯ ವರದಿ ಇಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೈಸೇರಿದ್ದು, ಈ ವರದಿಯನ್ವಯ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗುಜರಾತ್‌ನಲ್ಲಿ ಜಯಭೇರಿ ಬಾರಿಸಲಿದೆ.
182 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗುಜರಾತ್‌ನಲ್ಲಿ ಬಿಜೆಪಿ 97 ಸ್ಥಾನಗಳನ್ನು ಪಡೆಯಲಿದ್ದು, ಕಾಂಗ್ರೆಸ್ 85 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ ಎಂದು ವರದಿ ಹೇಳಿದೆ.
ನಗರ ಪ್ರದೇಶಗಳಲಿ ಬಿಜೆಪಿಗೆ 52 ಸ್ಥಾನಗಳು ಸಿಗುವುದು ಶೇ.100 ರಷ್ಟು ಖಚಿತ, ಇನ್ನು ಉಳಿದ ಗ್ರಾಮೀಣ ಪ್ರದೇಶದಲ್ಲಿ 45 ಸ್ಥಾನಗಳು ಸಿಗುವ ಸಾಧ್ಯತೆ ಶೇ.85 ರಷ್ಟಿದೆ ಎಂದು ಕಾಂಗ್ರೆಸ್ ಹೇಳಿದೆ. ಒಟ್ಟಾರೆ ಕಾಂಗ್ರೆಸ್‌ನ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 182 ವಿಧಾನಸಭಾ ಕ್ಷೇತ್ರಗಳ ಪೈಕಿ 97 ಸ್ಥಾನಗಳು ಸಿಗಲಿವೆ. ಕಾಂಗ್ರೆಸ್ ಪಕ್ಷ ಈಗಿರುವ 85 ಸ್ಥಾನಗಳನ್ನು ಉಳಿಸಿಕೊಳ್ಳಲಿದೆ. ಆದರೆ ಇದರಿಂದ ಸರ್ಕಾರ ರಚನೆ ಅಸಾಧ್ಯ ಎಂದು ಕಾಂಗ್ರೆಸ್ ನಡೆಸಿರುವ ಗೌಪ್ಯ ಸಮೀಕ್ಷೆಯ ವರದಿ ತಿಳಿಸಿದೆ.
Stiff fingers every morning? Your joints may be sending an early warning
Kalpa Media House | Special Article | The alarm rings, and you reach out to switch it off. But your...
Read moreDetails




