ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಳ್ಳೂರು: ಗುಬ್ಬಿಗ ಗ್ರಾಮದಲ್ಲಿ ವಿದ್ಯುತ್ ಸ್ಪರ್ಷಗೊಂಡ ಕಾರಣ ಹುಲ್ಲಿನ ಬಣವೆ ಸುಟ್ಟು ಕರಕಲಾದ ಘಟನೆ ನಡೆದಿದೆ.
ಗ್ರಾಮದ ಶಾಂತ ವೀರಪ್ಪ ಎನ್ನುವವರಿಗೆ ಸೇರಿದ ಬಣವೆಯೇ ಭಸ್ಮವಾಗಿದೆ. ಘಟನೆ ಹಿನ್ನೆಲೆಯಲ್ಲಿ ತಾಪಂ ಅಧ್ಯಕ್ಷ ವೀರೇಶ್ ಆಲವಳ್ಳಿ ಅವರು ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೇ ವಿದ್ಯುತ್ ಲೈನ್ ಮನೆಯ ಪಕ್ಕದಲ್ಲೇ ಇದ್ದು ಇದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರು ವರ್ಷವಿಡಿ ಕಷ್ಟಪಟ್ಟು ಭತ್ತದ ಬೆಳೆ ಬೆಳೆದರೆ ಲಾಭವೆಂದು ಉಳಿಯುವುದಲ್ಲಾ ರೈತನಿಗೆ ಉಳಿಯುವುದು ಹುಲ್ಲು ಮಾತ್ರ. ಅದನ್ನೇ ಸಂರಕ್ಷಿಸಿ ಮುಂದಿನ ವರ್ಷದವರೆಗೆ ಜಾನುವಾರುಗಳಿಗೆ ಆಹಾರವಾಗಿ ಬಳಸುತ್ತಾರೆ. ಅಂತಹ ಹುಲ್ಲಿನ ಬಣವೆ ಬೆಂಕಿಗಾಹುತಿಯಾದರೆ ಆ ರೈತನಿಗಾಗುವ ನೋವು ಇನ್ನೊಬ್ಬ ರೈತ ಮಾತ್ರ ಗ್ರಹಿಸಲು ಸಾಧ್ಯ ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.

ಗ್ರಾಪಂ ಅಧ್ಯಕ್ಷ ಬವಾನಿ ದಿವಾಕರ್, ಉಪಾಧ್ಯಕ್ಷ ರಾಜೇಶ್ ಬುಕ್ಕಿವರೆ, ಸದಸ್ಯರಾದ ಅರುಣ ಅಡ್ಡೇರಿ, ಕಂದಾಯ ಇಲಾಖೆಯ ಅಧಿಕಾರಿಗಳು, ಶಿವಪ್ಪ ಅವಡೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















