ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೈಂದೂರು: ಬಹುವರ್ಷಗಳ ಬೇಡಿಕೆಯಾಗಿದ್ದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಡ್ತರೇ ಮೊಗವೀರ ಗರಡಿ ಎನ್ನುವುದು ಮೊಗವೀರ ಸಮಾಜ ಬಾಂಧವರ ಅತ್ಯಂತ ಪೂಜನೀಯ ಮತ್ತು ಪ್ರತಿಷ್ಠಿತ ಗರಡಿ ಆಗಿದೆ. ಈ ಗರಡಿಗೆ ಕಳೆದ ಬಾರಿ ಕೂಡ ಬೇಟಿ ಕೊಟ್ಟಿದ್ದೇನೆ ಎಂದರು.
ಇಲ್ಲಿ ತೊಡೊಂದನ್ನು ದಾಟಲು ಕಿರು ಸೇತುವೆ ಅವಶ್ಯಕ ಎನ್ನುವುದಾಗಿ ನನಗೆ ಬೇಡಿಕೆಯನ್ನು ಸಲ್ಲಿಸಿದ್ದರು. ಅದನ್ನು ಗಮನದಲ್ಲಿ ಇರಿಸಿಕೊಂಡು ಈ ಬಾರಿ ಕಿಂಡಿ ಅಣೆಕಟ್ಟು ಪಟ್ಟಿಯಲ್ಲಿ ಅದನ್ನು ಸೇರಿಸಲಾಗಿದೆ. ಎಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದೆ. ಮೊಗವೀರ ಸಮಾಜ ಬಾಂಧವರ ಈ ಗರಡಿ ಅಭಿವೃದ್ಧಿಗೆ ಯಾವಾಗಲೂ ನನ್ನ ಸಹಾಯ ಸಹಕಾರ ಇದ್ದೆ ಇರುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post