ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಪಠ್ಯಕ್ರಮದ ಜೊತೆಗೆ ಕ್ರೀಡೆಗಳು ಮನುಷ್ಯನ ಜೀವನಕ್ಕೆ ಬಹಳ ಮುಖ್ಯ ಮತ್ತು ಇದರಿಂದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಗೆಲುವು-ಸೋಲಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಇವರ 2020-21ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯದ ಅಂತರ್ ಕಾಲೇಜುಗಳ ಬ್ಯಾಡ್ಮಿಂಟನ್ (ಪುರುಷ ಮತ್ತು ಮಹಿಳಾ) ಪಂದ್ಯಾವಳಿಯನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಎನ್.ಡಿ. ವಿರೂಪಾಕ್ಷ ಮಾತನಾಡಿ, ಒಂದು ವರ್ಷದಿಂದ ಕೋವಿಡ್-19 ಅಲೆಯಲ್ಲಿ ಸಿಲುಕ್ಕಿದ್ದ ನಮಗೆ ಈಗ ಸುವರ್ಣ ಅವಕಾಶ ಸಿಕ್ಕಿದೆ, ಈ ಅವಕಾಶವನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಪಾಂಶುಪಾಲರಾದ ಡಾ.ಹೆಚ್.ಎಂ. ಧರ್ಮೇಗೌಡ, ಉಪನ್ಯಾಸಕರು, ಆಡಳಿತ ಸಿಂಬ್ಬಂದಿ ಹಾಗೂ ಸುಮಾರು 50ಕ್ಕು ಹೆಚ್ಚು ತಂಡಗಳು ಮತ್ತು 200ಕ್ಕು ಅಧಿಕ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಂದ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post