ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪೊಲೀಸ್ ಠಾಣೆಗಳೆಂದರೆ ಭಯಪಡುವ ಕಛೇರಿಗಳಲ್ಲ. ಅದರಲ್ಲೂ ಮಹಿಳಾ ಪೊಲೀಸ್ ಠಾಣೆ ಮಹಿಳೆಯರ ರಕ್ಷಣೆ ಜೊತೆಗೆ ಆಕೆಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತದೆ. ಸಮಸ್ಯೆಗಳನ್ನು, ನೋವುಗಳನ್ನು ನಮ್ಮ ಬಳಿ ಹೇಳಿ, ಆದರೆ ಸುಳ್ಳು ದೂರುಗಳನ್ನು ನೀಡಬಾರದು ಎಂದು ಮಹಿಳಾ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶಾಂತಲಾ ಹೇಳಿದರು.
ಅವರು ಇಂದು ಬೆಳಗ್ಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾನವ ಹಕ್ಕುಗಳ ಕಮಿಟಿಯ ಶಿವಮೊಗ್ಗ ಶಾಖೆ ಮಹಿಳಾ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿರುವುದು ಆತಂಕದ ಸಂಗತಿ. ಇವುಗಳನ್ನು ಕಡಿಮೆ ಮಾಡಲು ಮಹಿಳೆಯರೇ ಮುಖ್ಯಪಾತ್ರವಹಿಸಬೇಕಾಗಿದೆ ಎಂದರು.
ಕಮಿಟಿಯು ಪೊಲೀಸ್ ಠಾಣೆಯ ಪಿಎಸ್‌ಐ ಶಾಂತಲಾ, ಮುಖ್ಯ ಕಾನ್ಸ್‌ಸ್ಟೇಬಲ್‌ಗಳಾದ ಸರೋಜಮ್ಮ, ಲಕ್ಷ್ಮೀ, ಸುನೀತಾ, ಕಾನ್ಸ್‌ಸ್ಟೇಬಲ್‌ಗಳಾದ ಶಾಂತ, ಅನಿತಾ, ಅನುಷಾ, ಮಂಜುಳಾ, ಸುಮಿತ್ರ, ಪೂರ್ಣಿಮಾ ಸೇರಿದಂತೆ ಹಲವರನ್ನು ಸನ್ಮಾನಿಸಿತು.ಈ ಸಂದರ್ಭದಲ್ಲಿ ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ರಾಜ್ಯಾ ಉಪಾಧ್ಯಕ್ಷ ಎಸ್.ಕೆ.ಗಜೇಂದ್ರಸ್ವಾಮಿ, ರಾಜ್ಯ ಸಂಚಾಲಕ ವಿರೇಶ್ ಚಿತ್ತರಗಿ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಿರಂಜನಮೂರ್ತಿ, ಮಂಜುನಾಥ ನಾಯ್ಡು, ಜಿಲ್ಲಾ ಗೌರವಾಧ್ಯಕ್ಷ ಎಸ್.ರಮೇಶ್, ಜಿಲ್ಲಾಧ್ಯಕ್ಷೆ ಜಯಮಾಲಶೆಟ್ಟಿ ಪದಾಧಿಕಾರಿಗಳಾದ ಸುಜಾತ, ಲತಾ, ಜಯನಾಗರಾಜ್, ಉಷಾ ಶ್ರೀನಿವಾಸ್, ದತ್ತಾತ್ರೇಯ, ವೆಂಕಟೇಶ್ ನಾಯ್ಡು, ಅಭಿಷೇಕ್, ಉದ್ಯಮಿ ವೆಂಕಟೇಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post