ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಕೊರೋನಾ ಸಂದರ್ಭದಲ್ಲಿ ನಾವು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳು ನಮ್ಮ ಜೀವನದ ಮುಂದಿನ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯರ್ಸ್ ಸಹಕಾರ ನೀಡುವುದು ಅಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಆರೋಗ್ಯಾಧಿಕಾರಿ ಡಾ. ಎಂ. ಎಸ್ ಬಸವರಾಜ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ ಕೋವಿಡ್-19 ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೋನಾ ವೈರಸ್ ಇರಬಹುದು ಅಥವಾ ಇತರೆ ಯಾವುದೇ ವಿರಳವಾದ ರೋಗಗಳಿರಬಹುದು ಜನರಿಗೆ ವೈದ್ಯರು ನೀಡುವ ಜೌಷಧಗಳ ಬಗ್ಗೆ ಮತ್ತು ಚಿಕಿತ್ಸೆಗಳ ಬಗ್ಗೆ ಯಾವುದೇ ರೀತಿಯ ಅನುಮಾನಗಳಿರಬಾರದು. ರೋಗ ಗುಣಪಡಿಸುವ ನಿಟ್ಟಿನಲ್ಲಿ ರೋಗಿಗಳ ಮನಸ್ಥಿತಿ ಸಕಾರಾತ್ಮಕವಾಗಿರಬೇಕು ಎಂದರು.
ನೈಸರ್ಗಿಕ ವಿಕೋಪಗಳು, ಹವಾಮಾನ ವೈಪರೀತ್ಯ ಮತ್ತು ಬದಲಾಗುತ್ತಿರುವ ಆಹಾರ ಕ್ರಮಗಳಿಂದಾಗಿ ಹೊಸ ರೀತಿಯ ವೈರಸ್‌ಗಳು, ಹಿಂದೆಂದೂ ಕಂಡು ಕೇಳರಿಯದ ರೋಗಗಳು ಬೆಳಕಿಗೆ ಬರುತ್ತಲಿವೆ. ಇಂತಹ ವೈದ್ಯಕೀಯ ಸವಾಲುಗಳನ್ನು ಎದುರಿಸಲು ಸರ್ಕಾರ, ವೈದ್ಯಕೀಯ ಕ್ಷೇತ್ರದ ಪರಿಣಿತರು ಮತ್ತು ಸಂಶೋಧಕರ ಸಮಷ್ಟಿ ಪ್ರಯತ್ನ ಅತ್ಯಗತ್ಯ. ಜೊತೆಗೆ ಜನರಲ್ಲಿ ರೋಗನಿರೋಧಕತೆಯನ್ನು ಬಲಪಡಿಸುವಲ್ಲಿ ಶಿಸ್ತುಬದ್ದ ಜೀವನ ಕ್ರಮ ಮತ್ತು ಉತ್ತಮ ಆಹಾರ ಪದ್ದತಿಯನ್ನು ರೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕುಲಪತಿ ಪ್ರೊ. ಬಿ. ಪಿ ವೀರಭಧ್ರಪ್ಪ ಮಾತನಾಡಿ, ಯುವ ಸಂಶೋಧನಾಕಾರರು ಕೊರೋನಾ ರೀತಿಯ ಸಂಕಷ್ಟದ ಸಂದರ್ಭದಲ್ಲಿ ಹೆಚ್ಚಿನ ಸಂಶೋಧನೆಗಳಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕುಲಸಚಿವ ಪ್ರೊ. ಎಸ್. ಎಸ್ ಪಾಟೀಲ್, ಡಾ. ಡಿ.ಎಂ. ಪಲ್ಲವಿ, ಡಾ. ಎಂ.ವಿ. ಮಧುಸೂಧನ, ಡಾ. ಬಿ. ತಿಪ್ಪೇಸ್ವಾಮಿ, ಡಾ. ಎನ್.ಬಿ. ತಿಪ್ಪೇಸ್ವಾಮಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post