ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕರ್ನಾಟಕ ಸಂಘ ವಿನೂತನ ರೀತಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಸಂಭ್ರಮವನ್ನು ಆಚರಿಸುತ್ತಿದ್ದು, ಮಾರ್ಚ್ 13ರ ಶನಿವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಆರಂಭದಲ್ಲಿ ಡಾ.ಕೆ.ಎಸ್. ಪವಿತ್ರ ಅವರು ಸ್ತ್ರೀ ದೃಷ್ಟಿಯಿಂದ ಶ್ರೀರಾಮಾಯಣ ದರ್ಶನಂ ಎಂಬ ನೃತ್ಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ.
ನಂತರ ವಿದುಷಿ ಮಾನಸ ಶಿವರಾಮಕೃಷ್ಣ ಮತ್ತು ಶ್ರೀಲಕ್ಷ್ಮೀ ಶಾಸ್ತ್ರಿ ಅವರಿಂದ ಮಮತೆಯ ಸುಳಿಯಿಂದ ಅಗ್ನಿದಿವ್ಯದೆಡೆಗೆ ಮಂಥರೆ ಎಂಬ ಗಮಕ ವಾಚನ-ವ್ಯಾಖ್ಯಾನ ನಡೆಯಲಿದೆ.
ಕರ್ನಾಟಕ ಸಂಘದ ಅಧ್ಯಕ್ಷ ಹೆಚ್.ಡಿ. ಉದಯಶಂಕರ ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಾವ್ಯಾಸಕ್ತರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಆಯೋಜಕರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post