ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಾಸಕ ಹೆಚ್.ಹಾಲಪ್ಪ ಅವರು ರಿಪ್ಪನಪೇಟೆ ಮೆಸ್ಕಾಂ ವ್ಯಾಪ್ತಿಯ 110 KV ಉಪ ವಿದ್ಯುತ್ ಸ್ಥಾವರದಲ್ಲಿ (ಕೆದ್ದಲಗುಡ್ಡೆ) ನೂತನವಾಗಿ ಅಳವಡಿಸಿರುವ ಹೆಚ್ಚುವರಿ 10 MVA ಟ್ರಾನ್ಸ್ಫಾರ್ಮರ್‌ಗೆ ಚಾಲನೆ ನೀಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಮೆಸ್ಕಾಂ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ನೆಡೆಸಿ ಸಮರ್ಪಕ ವಿದ್ಯುತ್ ನೀಡಲು ಯಾವುದೇ ಸೌಲಭ್ಯಗಳು, ಪರಿಕರಗಳು ಅಗತ್ಯವಿದ್ದರೆ ತಿಳಿಸಿ, ಸರ್ಕಾರದಿಂದ ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕರೆಂಟ್ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post