ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಹಲವು ವಾರ್ಡ್‌ಗಳಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಚನ್ನಪ್ಪ ಲೇಔಟ್‌ನ ಮೊದಲನೇ ತಿರುವಿನ ಎರಡೂ ಬದಿಯ ಬಾಕ್ಸ್ ಡ್ರೈನೇಜ್‌ಗಳು ಹಾಳಾಗಿದ್ದು, ಚರಂಡಿ ನೀರು ಹರಿಯಲು ಸರಿಯಾಗಿ ಇಳಿಜಾರು ಇಲ್ಲದ ಕಾರಣ ಸರಾಗವಾಗಿ ನೀರು ಹರಿಯುತ್ತಿರಲಿಲ್ಲ. ಇದರಿಂದ ಒಂದೆಡೆ ಕೊಳಚೆ ನೀರು ಸಂಗ್ರಹವಾಗಿ ದುರ್ನಾತ ಹೊಡೆಯುತ್ತಿದೆ ಎಂದು ಸ್ಥಳೀಯರು ದೂರಿದರು.
ಕಾಮಗಾರಿ ಇಂಜಿನಿಯರ್ ಕರೆದ ಸಚಿವರು ತಕ್ಷಣ ಬಾಕ್ಸ್ ಚರಂಡಿ ಸರಿಪಡಿಸಲು ಸೂಚಿಸಿದರು. ಇನ್ನೊಮ್ಮೆ ಕಂಪ್ಲೇಂಟ್ ಬಾರದಂತೆ ನಿಗಾವಹಿಸಿ ಎಂದು ತಾಖೀತು ಮಾಡಿದರು.
ಮೊದಲಿಗೆ ಚನ್ನಪ್ಪ ಲೇಔಟ್‌ಗೆ ಭೇಟಿ ನೀಡಿದ ಸಚಿವರಿಗೆ, ಸ್ಥಳೀಯರು ರಾತ್ರಿ ವೇಳೆ ಬಡಾವಣೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಸ್ಥಳೀಯರು ಈ ರಸ್ತೆಯಲ್ಲಿ ನಡೆದಾಡುವುದು ಕಷ್ಟವಾಗಿದೆ. ಸವಳಂಗ ರಸ್ತೆಯ ಮುಂಭಾಗದಲ್ಲಿ ಎರಡು ವೈನ್ ಶಾಪ್ ಇದ್ದು, ಅಲ್ಲಿ ಕುಡಿದುಕೊಂಡು ಬಂದು ಬಡಾವಣೆಯಲ್ಲಿ ರಾತ್ರಿ ವೇಳೆ ಜೋರು ಗಲಾಟೆ ಮಾಡುತ್ತಾರೆ. ಗಲಾಟೆ ಮಾಡಬೇಡಿ ಹೋಗ್ರಪ್ಪ ಎಂದು ಸ್ಥಳೀಯರು ಬುದ್ದಿವಾದ ಹೇಳಲು ಹೋದರೆ ಮೈಮೇಲೆ ಬರುತ್ತಾರೆ ಎಂದು ಅಹವಾಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಮೇಯರ್ ಸುನೀತಾ ಅಣ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post