ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಮಂಡ್ಲಿ ಮತ್ತು ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗಾರ್ಡನ್ ಏರಿಯಾ ಎಲ್ಲಾ ಅಡ್ಡರಸ್ತೆಗಳು, ಎಲ್.ಎಲ್.ಆರ್.ರಸ್ತೆ, ಅಮೀರ್ ಅಹ್ಮದ್ ವೃತ್ತದಿಂದ ಗೋಪಿ ವೃತ್ತಕ್ಕೆ ಹೋಗುವ ಎಡಭಾಗದ ಸುತ್ತಮುತ್ತಲಿನ ಪ್ರದೇಶ, ಮಂಜುನಾಥ ಬಡಾವಣೆ, ಖಾಜ್ಹೀನಗರ, ಆನಂದರಾವ್ ಬಡಾವಣೆ, ಅಣ್ಣಾನಗರ ಮುಖ್ಯರಸ್ತೆ, ಎಲ್.ಐ.ಸಿ.ಆಫೀಸ್, ತೆರಿಗೆ ಕಚೇರಿ, ಗೋಪಾಳ ಮುಖ್ಯರಸ್ತೆ, ಮೋರ್ ಅಕ್ಕಪಕ್ಕ, ಗೋಪಾಳ ಎ,ಬಿ,ಸಿ,ಡಿ,ಇ ಮತ್ತು ಎಫ್ ಬ್ಲಾಕ್, ಆಲ್‌ಹರೀಮ್ ಲೇಔಟ್, 100 ಅಡಿ ರಸ್ತೆ ಪೆಟ್ರೋಲ್ ಬಂಕ್, ವಾಣಿಜ್ಯ ತೆರಿಗೆ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾರ್ಚ್-21ರ ನಾಳೆ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯ
ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎ.ಆರ್.ಬಿ. ಕಾಲೋನಿ, ಅಶೋಕನಗರ, ಪೊಲೀಸ್ ಕ್ವಾಟ್ರಸ್, ಅಣ್ಣಾನಗರ, ಎಸ್‌ಪಿಕಚೇರಿ, ಸಾಗರ ಮುಖ್ಯರಸ್ತೆ, ಡಿ.ಎ.ಆರ್. ಕ್ವಾಟ್ರಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾರ್ಚ್ 21ರ ನಾಳೆ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ನ.ಉ.ವಿ.3ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















