ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಲ್ಲಿನ ದೇವರನರಸೀಪುರ ಗ್ರಾಮದ ನರಸೇಗೌಡ ಎಂಬುವರಿಗೆ ಸೇರಿದ ಆಲೆಮನೆಯಲ್ಲಿ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, ಕಬ್ಬಿನ ಸಿಪ್ಪೆಯ ಬೃಹತ್ ಗಾತ್ರದ ರಾಶಿಗೆ ತಾಗಿದ ಬೆಂಕಿಯ ಕಿಡಿ ಕೆಲವೇ ಸಮಯದಲ್ಲಿ ಇಡೀ ಬಣವೆ ಸುಟ್ಟು ಕರಕಲಾದ ಘಟನೆ ನಡೆದಿದೆ.
ಒಂದು ಹಿಟಾಚಿ, ಒಂದು ಟ್ರ್ಯಾಕ್ಟರ್ ಮತ್ತು ಕಬ್ಬಿನ ಸಿಪ್ಪೆಯ ಬಣವೆ ಸೇರಿದಂತೆ ಸುಮಾರು 30 ರಿಂದ 35 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಎರಡು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. 15 ವರ್ಷದಿಂದ ನರಸೇಗೌಡರು ಆಲೆಮನೆ ನಡೆಸಿಕೊಂಡು ಬರುತ್ತಿದ್ದು, ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಯಾರೋ ಬೀಡಿ ಸೇದಿ ಬಿಸಾಕಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಭದ್ರಾ ಹೊಸಮನೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post