ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕಿನ ಕೊಮಾರನಹಳ್ಳಿ ಮತ್ತು ವೀರಾಪುರ ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಶೇ.84.29ರಷ್ಟು ಮತದಾನ ನಡೆದಿದೆ ಎಂದು ತಿಳಿದುಬಂದಿದೆ.
ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 6 ಮತಗಟ್ಟೆಗಳಲ್ಲಿ ಹಾಗು ವೀರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ 4 ಮತಗಟ್ಟೆಗಳಲ್ಲಿ ಒಟ್ಟು 7116 ಮತದಾರರ ಪೈಕಿ 5998 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಕೊಮಾರನಹಳ್ಳಿ ಮತಗಟ್ಟೆ 92ರಲ್ಲಿ ಒಟ್ಟು 961 ಮತದಾರರ ಪೈಕಿ ಒಟ್ಟು 754 ಮತದಾರರು ಹಕ್ಕು ಚಲಾಯಿಸಿದ್ದಾರೆ. ಅತಿ ಕಡಿಮೆ ಮತದಾನವಾದ ಮತಗಟ್ಟೆ ಇದಾಗಿದ್ದು, ಮತಗಟ್ಟೆ 95ರಲ್ಲಿ ಒಟ್ಟು 251 ಮತದಾರರ ಪೈಕಿ 231 ಮತದಾರರು ಹಕ್ಕು ಚಲಾಯಿಸಿದ್ದು, ಅತಿ ಹೆಚ್ಚು ಮತದಾನವಾದ ಮತಗಟ್ಟೆ ಎನ್ನಲಾಗಿದೆ.
ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ಒಟ್ಟು 13 ಸ್ಥಾನಗಳಿಗೆ 43 ಮಂದಿ ಹಾಗು ವೀರಾಪುರ ಗ್ರಾಮ ಪಂಚಾಯಿತಿ ಒಟ್ಟು 11 ಸ್ಥಾನಗಳಿಗೆ 30 ಮಂದಿ ಸ್ಪರ್ಧಿಸಿದ್ದಾರೆ. ಈ ಎರಡು ಗ್ರಾಮ ಪಂಚಾಯಿತಿಗಳ ಅವಧಿ ಮುಕ್ತಾಯಗೊಳ್ಳದ ಕಾರಣ ಈ ಹಿಂದೆ ಚುನಾವಣೆ ನಡೆದಿರಲಿಲ್ಲ. ಮತಗಟ್ಟೆ ಬಳಿ ಜನಸಂದಣಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಲಾಗಿತ್ತು. ಕೋವಿಡ್-೧೯ರ ಹಿನ್ನಲೆಯಲ್ಲಿ ಎಲ್ಲಾ ಮತದಾರರಿಗೆ ಥರ್ಮಲ್ ಸ್ಕೀನಿಂಗ್ ನಡೆಸಲಾಯಿತು. ಜೊತೆಗೆ ಕಡ್ಡಾಯವಾಗಿ ಸ್ಯಾನಿಟೈಜರ್ ಹಾಗು ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮತದಾರರಿಗೆ ಸೂಚಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post