ಕಲ್ಪ ಮೀಡಿಯಾ ಹೌಸ್
ವಿಜಯನಗರ: ಜಿಲ್ಲೆಯ ಸಂಕ್ಲಾಪುರದ 21ನೆಯ ವಾರ್ಡ್’ನಲ್ಲಿ ಅಂಗವಿಕಲರಿಗಾಗಿ ನಿರ್ಮಿಸಿರುವ ಸಮುದಾಯ ಭವನ ಈಗ ಕುಡುಕರಿಗೆ ಮತ್ತು ಜೂಜುಗಾರರ ತಾಣವಾಗಿ ದುರ್ಬಳಕೆಯಾಗುತ್ತಿದೆ.
ಸರ್ಕಾರದ ನಗರಸಭೆ ಅನುದಾನದಲ್ಲಿ 7.50 ಲಕ್ಷ ವೆಚ್ಚದಲ್ಲಿ ಭವನವನ್ನು ನಿರ್ಮಿಸಿ ಹಾಗೆಯೇ ಬಿಡಲಾಗಿದೆ. 2012-13 ನೇ ಸಾಲಿನಲ್ಲಿ ಅಭಿವೃದ್ಧಿ ಹಣವನ್ನು ಬಳಸಿ ಸುಮಾರು 50×30 ಜಾಗದಲ್ಲಿ ದೊಡ್ಡದಾದ ಒಳಾಂಗಣ, ಕಾಂಪೌಂಡ್, ಲೇಟ್ರೀನ್ ಮತ್ತು ಬಾತ್ ರೂಂ, ಬೋರ್ ಹಾಕಿ ನೀರಿನ ಸೌಕರ್ಯ ಸುಣ್ಣ ಬಣ್ಣ ಮತ್ತು ಎಲೆಕ್ಟ್ರಿಕ್ ವ್ಯವಸ್ಥೆ ಮಾಡಿ ಓಪನ್ ಮಾಡಿದ್ದಾರೆ.
2015-16 ನೆಯ ಸಾಲಿನಲ್ಲಿ ಕೆಲಸ ಪೂರ್ಣಗೊಂಡು ಓಪನ್ ಮಾಡಿ ಬಾಗಿಲು ಹಾಕಿದ್ದಾರೆ. ಆ ದಿನದಿಂದ ಬಾಗಿಲು ಹಾಕಿ ಅದು ಓಪನ್ ಆಗದೆ ಈಗ ಕುಡುಕರಿಗೆ ಮತ್ತು ಜೂಜು ಆಡುವವರಿಗೆ ಅನುಕೂಲವಾಗಿದೆ. ಇಂದು ಆ ಸಮುದಾಯ ಭವನದ ಬಾಗಿಲು, ಕಿಟಿಕಿ ಮತ್ತು ಸಾಮಾಗ್ರಿಗಳನ್ನು ಹಾಳು ಮಾಡಿದ್ದಾರೆ.
ತಕ್ಷಣ ನಗರಸಭೆಯ ಅಧಿಕಾರಿಗಳು ಈ ಭವನಕ್ಜೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಪೋಲಿಸ್ ಇಲಾಖೆಯ ಅಧಿಕಾರಿಗಳು ಆಗಾಗ್ಗೆ ಈ ಸ್ಥಳಕ್ಕೆ ಭೇಟಿ ನೀಡಿ ಕುಡುಕರು ಮತ್ತು ಜೂಜುಕೂರರನ್ನು ಮಟ್ಟ ಹಾಕಬೇಕಿದೆ.
ನಗರಸಭೆ ಮತ್ತು ನಗರಾಭಿವೃದ್ಧಿ ಅಧಿಕಾರಿಗಳು ಮತ್ತು ಈ ವಾರ್ಡ್ ನಗರಸಭೆ ಚುನಾಯಿತ ಪ್ರತಿನಿಧಿಗಳು ಅನುಕೂಲ ಇರುವ ಆ ಭವನವನ್ನು ಸರಿಯಾಗಿ ಮರುನಿರ್ಮಾಣ ಮಾಡಿಸಿ ವಿನಿಯೋಗ ಮಾಡುವ ಸಂಘ ಸಂಸ್ಥೆಗಳಿಗೆ ನೀಡಬೇಕು. ಸಮುದಾಯ ಭವನದ ಮುಂದೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಉದ್ಯಾನ ವನದ ಅಭಿವೃದ್ಧಿ, ರಸ್ತೆಗೆ ಸಿಮೆಂಟ್ ಹಾಕಿ ರಸ್ತೆ ಅಭಿವೃದ್ಧಿ ಕಡೆ ಯಾವಾಗ ಗಮನಹರಿಸುತ್ತಾರೋ ನೋಡೋಣ. ಈ ಭಾಗದ ವಿನಾಯಕ ಬಡಾವಣೆ ಸಂಘದ ಸದಸ್ಯರು ಸಹ ಈ ಜಾಗದ ಅಭಿವೃದ್ಧಿಗೆ ಸಹಕರಿಸಿ ನಗರಸಭೆಯ ಅಪ್ಪಣೆ ಪಡೆದು ಬಡಾವಣೆಯ ಸಂಘದ ಕಚೇರಿಗೆ ಆ ಸರ್ಕಾರಿ ಭವನವನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದರೆ ಈ ಭಾಗ ಇನ್ನು ಅಭಿವೃದ್ಧಿ ಆಗುತ್ತದೆ.
(ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post