ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಎಸ್’ಆರ್’ಟಿಸಿ ನೌಕರರು ಇಂದಿನಿಂದ ಆರಂಭಿಸಿರುವ ಮುಷ್ಕರದ ಬಿಸಿ ಉಕ್ಕಿನ ನಗರಿಗೂ ತಟ್ಟಿದೆ.
ಬಸ್ ಸಂಚಾರವಿಲ್ಲದ ಕಾರಣ ನಗರ ಸರ್ಕಾರಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಇಂದು ಮುಂಜಾನೆಯಿಂದಲೇ ಬಸ್ ಸಂಚಾರವಿಲ್ಲದ್ದ ಕಾರಣ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಯಿತು.ಇದೇ ವೇಳೆ ಶಿವಮೊಗ್ಗಕ್ಕೆ ತೆರಳುವ ಸಾವಿರಾರು ಪ್ರಯಾಣಿಕರು ಟ್ಯಾಕ್ಸಿಗಳನ್ನೇ ಅವಲಂಭಿಸುವಂತಾಯಿತು. ಇದರೊಂದಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗ ಖಾಸಗಿ ನಗರ ಸಾರಿಗೆ ಬಸ್’ಗಳನ್ನು ಭದ್ರಾವತಿ-ಶಿವಮೊಗ್ಗ ಸಂಚರಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಖಾಸಗಿ ಬಸ್’ಗಳು ಸರ್ಕಾರಿ ಬಸ್ ನಿಲ್ದಾಣದ ಮೂಲಕವೇ ಸಂಚರಿಸುತ್ತಿತ್ತು.ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಕಂಡು ಬಂದಿದ್ದು, ಹೊಳೆಹೊನ್ನೂರು, ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ ಹಾಗು ಹುಣಸೇಕಟ್ಟೆ, ಶಂಕರಘಟ್ಟ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಕಂಡು ಬಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post