Read - < 1 minute
ವಾಷಿಂಗ್ಟನ್: ಸೆ:24: ವಾಯವ್ಯ ವಾಷಿಂಗ್ಟನ್ ನ ಶಾಪಿಂಗ್ ಮಾಲ್ ಒಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಬಂದೂಕುಧಾರಿಯೊಬ್ಬ ನಾಲ್ವರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಾಷಿಂಗ್ಟನ್ ನ ಬರ್ಲಂಗ್ವನ್ನ ಕಾಸ್ಕೇಡ್ ಮಾಲ್ನಲ್ಲಿ ಈ ಶೂಟೌಟ್ ನಡೆದಿದ್ದು, ಅಪರಿಚಿತ ಬಂದೂಕುದಾರಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಹಂತಕನು ಹಿಸ್ಪಾನಿಕ್ ವ್ಯಕ್ತಿಯಾಗಿದ್ದು ಆತ ಬೂದು ಬಣ್ಣದ ಉಡುಪು ತೊಟ್ಟಿದ್ದ ಎಂದು ವಾಷಿಂಗ್ಟನ್ ರಾಜ್ಯ ಜಿಲ್ಲಾ ವಿಚಕ್ಷಣ ದಳದ ವಕ್ತಾರ ಸಾರ್ಜಂಟ್ ಮಾಕರ್್ ಫ್ರಾನ್ಸಿಸ್ ತಿಳಿಸಿದ್ದಾರೆ. ನಾಲ್ವರನ್ನು ಗುಂಡಿಕ್ಕಿ ಕೊಂದ ಹಂತಕನು ಪೊಲೀಸರು ಸ್ಥಳಕ್ಕೆ ಧಾವಿಸಿ ಬರುವ ಮುನ್ನವೇ ಅಂತಾರಾಜ್ಯ 5ನೇ ಹೈವೇಯತ್ತ ನಡೆದುಕೊಂಡು ಸಾಗಿದ್ದಾನೆ ಎಂದು ಹೇಳಿದ್ದಾರೆ.
ಹಂತಕನ ಗುಂಡೇಟಿನಿಂದ ಗಾಯಗೊಂಡಿರುವವರನ್ನು ರಕ್ಷಿಸಲು ಪೊಲೀಸರು ಮುಂದಾಗಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. ಮಾಲ್ ಒಳಗೆ ಗಾಯಗೊಂಡಿರುವವರ ಸಂಖ್ಯೆ ಇನ್ನೂ ನಿಖರವಾಗಿ ತಿಳಿದಿಲ್ಲ.
Discussion about this post